ಬೈದ ಮೇಲೆ ಉಲ್ಟಾ ಹೊಡೆದ ಬಯೋಕಾನ್ ಕಿರಣ್ ಶಾ

Posted By:
Subscribe to Oneindia Kannada

ಬೆಂಗಳೂರು, ಸೆ. 09: ಬಯೋಕಾನ್ ಜೈವಿಕ ತಂತ್ರಜ್ಞಾನ ಸಂಸ್ಥೆ ಅಧ್ಯಕ್ಷೆ ಕಿರಣ್ ಮಜುಂದಾರ್ ಶಾ ಅವರು ಕರ್ನಾಟಕ ಬಂದ್ ಬಗ್ಗೆ ಟ್ವೀಟ್ ಮಾಡಿದ್ದು ಈಗ ವಿವಾದಕ್ಕೆ ಕಾರಣವಾಗಿದೆ.

ಬೆಂಗಳೂರಿನಲ್ಲಿ ಬಂದ್ ಹೆಚ್ಚಾಗಿರುವುದರಿಂದ ಬೆಂಗಳೂರಿನ ಬದಲು ಬಂದಳೂರು ಎಂದು ಬದಲಾಯಿಸುವುದು ಉತ್ತಮ ಎಂದಿರುವ ಕಿರಣ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.[LIVE ಅಪ್ಡೇಟ್ಸ್ : ಕರ್ನಾಟಕ ಬಂದ್ ಎಲ್ಲೆಲ್ಲಿ ಏನು ನಡೆದಿದೆ?]

'ಬಂದ್ ನಿಂದ ಯಾವುದೇ ಪ್ರಯೋಜನವಿಲ್ಲ, ಬಂದ್ ನಿಂದ ಎರಡು ಭಾಗದ ರೈತರಿಗೆ ಏನು ಪ್ರಯೋಜನವಿಲ್ಲ, ಅಲ್ಲದೇ ನಮ್ಮ -ಉತ್ಪಾದನೆ ಕುಂಠಿತವಾಗುತ್ತಿದೆ. ಮತ್ತೊಂದು ಬಂದ್ ನಡೆಸುತ್ತಿರುವ ಬೆಂಗಳೂರನ್ನು ಬಂದಳೂರು ಎಂದು ಕರೆಯಬೇಕಿದೆ' ಎಂಬರ್ಥದಲ್ಲಿ ಕಿರಣ್ ಟ್ವೀಟ್ ಮಾಡಿದ್ದಾರೆ. [ಕಿರಣ್ ಮಜುಂದಾರ್ ಷಾ ವಿರುದ್ಧ ವಾಟಾಳ್ ವಾಗ್ದಾಳಿ]

ಇದಕ್ಕೆ ಸಾರ್ವಜನಿಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದ್ದು, ಒಂದು ದಿನ ನೀರು ಇಲ್ಲದೆ ಬದುಕಿ ನಿಮಗೆ ರೈತರ ಕಷ್ಟ ತಿಳಿಯುತ್ತದೆ.
ನಿಮಗೂ ನೀರು ಬೇಕು ತಾನೇ? ನಿಮ್ಮಂಥ ಉದ್ಯಮಿಗಳು ಇದಕ್ಕೆ ಒಂದು ಪರಿಹಾರ ಕಂಡುಕೊಳ್ಳಿ. ಬೆಂಗಳೂರನ್ನು ಬೈಯುವುದರಿಂದ ಏನು ಪ್ರಯೋಜನವಿಲ್ಲ ಎಂದು ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕಿರಣ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ

ಕಿರಣ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ

ಬೆಂಗಳೂರಿನಲ್ಲಿ ಬಂದ್ ಹೆಚ್ಚಾಗಿರುವುದರಿಂದ ಬೆಂಗಳೂರಿನ ಬದಲು ಬಂದಳೂರು ಎಂದು ಬದಲಾಯಿಸುವುದು ಉತ್ತಮ ಎಂದಿರುವ ಕಿರಣ್ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

ಬಂದಳೂರು ಎಂದು ಕರೆಯಬೇಕಿದೆ

ಬಂದಳೂರು ಎಂದು ಕರೆಯಬೇಕಿದೆ

ನಮ್ಮ -ಉತ್ಪಾದನೆ ಕುಂಠಿತವಾಗುತ್ತಿದೆ. ಮತ್ತೊಂದು ಬಂದ್ ನಡೆಸುತ್ತಿರುವ ಬೆಂಗಳೂರನ್ನು ಬಂದಳೂರು ಎಂದು ಕರೆಯಬೇಕಿದೆ ಎಂಬರ್ಥದಲ್ಲಿ ಕಿರಣ್ ಟ್ವೀಟ್ ಮಾಡಿದ್ದಾರೆ.

ಹಳೆಯ ಟ್ವೀಟ್‌ ಅನ್ನು ಡಿಲೀಟ್‌ ಮಾಡಿರುವ ಕಿರಣ್‌

ಕಾವೇರಿ ವಿಚಾರದಲ್ಲಿ ಕರ್ನಾಟಕಕ್ಕೆ ಅನ್ಯಾಯವಾಗಬಾರದು. ಎರಡೂ ರಾಜ್ಯಗಳ ಸರ್ಕಾರಗಳು ಈ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳುವ ವಿಶ್ವಾಸವಿದೆ' ಎಂದು ಹೊಸದಾಗಿ ಟ್ವೀಟ್‌ ಮಾಡಿದ್ದಾರೆ.

ಮಾಧ್ಯಮಗಳಿಂದ ನನ್ನ ತೇಜೋವಧೆ ಎಂದ ಕಿರಣ್

ಮಾಧ್ಯಮಗಳಿಂದ ನನ್ನ ತೇಜೋವಧೆ ಎಂದ ಕಿರಣ್, ನನ್ನ ಸಂದೇಶ ಸರಿಯಾಗಿ ಓದಿರಿ ಎಂದ ಕಿರಣ್ ಶಾ.

ಉದ್ಯಮಿಗಳಾದ ನೀವು ಪರಿಹಾರ ಕಂಡುಕೊಳ್ಳಿ

ಉದ್ಯಮಿಗಳಾದ ನೀವು ಪರಿಹಾರ ಕಂಡುಕೊಳ್ಳಿ, ಎಲ್ಲಾ ಸಮಸ್ಯೆ ಬಗ್ಗೆ ಸರ್ಕಾರವನ್ನು ಪ್ರಶ್ನಿಸುವ ನೀವು ಈ ವಿಷ್ಯದಲ್ಲಿ ದೂಷಿಸುವುದನ್ನು ಬಿಟ್ಟು ಪರಿಹಾರ ಮಾರ್ಗದ ಬಗ್ಗೆ ಯೋಚಿಸಿ

ಮೊದಲು ನಿಮ್ಮನ್ನು ರಾಜ್ಯದಿಂದ ಓಡಿಸಬೇಕು

ಮೊದಲು ನಿಮ್ಮನ್ನು ರಾಜ್ಯದಿಂದ ಓಡಿಸಬೇಕು, ಆಗ ನಿಮಗೆ ಬೆಂಗಳೂರು, ನೀರು, ಇಲ್ಲಿನ ಪರಿಸ್ಥಿತಿ ಅರಿವಾಗುತ್ತದೆ.

ಶಾಲಾ ಮಕ್ಕಳಿಗೂ ಕಾವೇರಿ ನೀರಿನ ಬಗ್ಗೆ ಗೊತ್ತು

ಶಾಲಾ ಮಕ್ಕಳಿಗೂ ಕಾವೇರಿ ನೀರಿನ ಬಗ್ಗೆ ಗೊತ್ತು, ಬಂದ್ ಆಚರಣೆ ಮಹತ್ವ ತಿಳಿದಿದೆ, ರೈತರ ಬಗ್ಗೆ ಕಾಳಜಿ ಇದೆ, ನಿಮಗೆ ನಿಮ್ಮ ಸಂಸ್ಥೆ, ಉತ್ಪಾದನೆ ಚಿಂತೆ.

ಟಾಯ್ಲೆಟ್ ನಲ್ಲಿ ಕುಳಿತು ನೀರು ಇಲ್ಲದಂತಾಗಲಿ

ಟಾಯ್ಲೆಟ್ ನಲ್ಲಿ ಕುಳಿತು ನೀರು ಇಲ್ಲದಂತಾಗಲಿ, ಅಗ ನಿಮಗೆ ನೀರಿನ ಮಹತ್ವ ತಿಳಿಯುತ್ತದೆ. ನಿಮ್ಮ ಸಂಸ್ಥೆಗೂ ನೀರಿನ ಅಗತ್ಯವಿದೆ ತಿಳಿದಿರಲಿ.

ರೈತರ ಭೂಮಿ, ಕೆರೆ ನುಂಗಿದ ಐಟಿ ದಿಗ್ಗಜರು

ರೈತರ ಭೂಮಿ, ಕೆರೆ ನುಂಗಿದ ಐಟಿ ದಿಗ್ಗಜರಾದ ನಿಮಗೆ ಹೇಗೆ ತಾನೆ ಜನರ ಸಂಕಷ್ಟ ತಿಳಿಯುತ್ತದೆ. ಕಾವೇರಿ ನೀರುಇಲ್ಲಾಂದ್ರೆನೀವುಮಣ್ಣು ತಿನ್ನಿ ಎಂದು ಶಪಿಸಿದ ಸಾರ್ವಜನಿಕರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnataka Bandh : Pro Kannada Twitterati slams Biocon Kiran Mazumdar Shaw who tweeted against observing Bandh. Shaw tweeted saying Yet another bandh, Bengaluru is now Bandhaluru
Please Wait while comments are loading...