• search

ನಾಡಪ್ರಭು ಕೆಂಪೇಗೌಡ ಜಯಂತಿಗೆ ಶುಭ ಕೋರಿದ ಗಣ್ಯರು

Subscribe to Oneindia Kannada
For Quick Alerts
ALLOW NOTIFICATIONS
For Daily Alerts
    Nadaprabhu Kempegowda Jayanthi 2018 : ಕೆಂಪೇಗೌಡ ಜಯಂತಿಗೆ ಶುಭ ಕೋರಿದ್ದಾರೆ ಗಣ್ಯರು

    ಬೆಂಗಳೂರು, ಜೂನ್ 27: ಉದ್ಯಾನನಗರಿ, ಸಿಲಿಕಾನ್ ಸಿಟಿ, ಐಟಿ ಹಬ್... ಎಂಬೆಲ್ಲ ನೂರಾರು ನಾಮಾಂಕಿತಗಳಿಂದ ಕರೆಯಿಸಿಕೊಳ್ಳುವ ನಮ್ಮ ಬೆಂಗಳೂರನ್ನು ಕಟ್ಟಿದ್ದು ಕೆಂಪೇಗೌಡ(1510-1569). 2017 ರಿಂದ ಪ್ರತಿವರ್ಷ ಜೂನ್ 27 ಅನ್ನು ಕೆಂಪೇಗೌಡ ಜಯಂತಿಯನ್ನಾಗಿ ಆಚರಿಸಲು ಕರ್ನಾಟಕ ಸರ್ಕಾರ ನಿರ್ಧರಿಸಿದ್ದು, ಇಂದು ನಾಡಿನಾದ್ಯಂತ ನಾಡಪ್ರಭುವಿನ ಜಯಂತಿ ಆಚರಣೆಗೊಳ್ಳುತ್ತಿದೆ.

    ವಿಜಯನಗರ ಸಾಮ್ರಾಜ್ಯದ ಅಡಿಯಲ್ಲಿ ಸಾಮಂತ ರಾಜನಾಗಿದ್ದ ಹಿರಿಯ ಕೆಂಪೇಗೌಡ 1537 ರಲ್ಲಿ ಬೆಂಗಳೂರನ್ನು ಕಟ್ಟಿದ್ದರು. ಅದೇ ಬೆಂಗಳೂರು ಮುಂದೊಮ್ಮೆ ಕರ್ನಾಟಕದ ರಾಜಧಾನಿಯಾಗಿ, ಐಟಿ ಸಿಟಿಯಾಗಿ ಇಡೀ ವಿಶ್ವವನ್ನೇ ತನ್ನತ್ತ ಸೆಳೆಯುತ್ತದೆ ಎಂದು ಬಹುಶಃ ಕೆಂಪೇಗೌಡರೂ ನಿರೀಕ್ಷಿಸಿರಲಿಕ್ಕಿಲ್ಲ. ಇಂದು ಆ ಪರಿ ಬೆಳೆದಿದೆ ಬೆಂಗಳೂರು.

    ಕೆಂಪೇಗೌಡರ ಸ್ಮರಣೆಗೆ 5 ಕಾರಣಗಳು (ಕೆಂಪೇಗೌಡ ಜಯಂತಿ ವಿಶೇಷ)

    ವಿಶ್ವ ವಿಖ್ಯಾತ ಬೆಂಗಳೂರನ್ನು ಕಟ್ಟಿದ ಕೆಂಪೇಗೌಡರಿಗೆ ಅವರ ಜಯಂತಿಯನ್ನು ಆಚರಿಸುವ ಮೂಲಕ ಕೃತಜ್ಞತೆ ಕೋರುತ್ತಿರುವುದು ಶ್ಲಾಘನೀಯ. ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಹಲವರು ಕೆಂಪೇಗೌಡ ಜಯಂತಿಗೆ ಟ್ವಿಟ್ಟರ್ ಮೂಲಕ ಶುಭ ಕೋರಿದ್ದಾರೆ.

    ಮುಖ್ಯಮಂತ್ರಿಗಳ ಶುಭ ಹಾರೈಕೆ

    ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡ ಜಂಯಂತಿಯ ಶುಭಾಶಯಗಳು ಎಂದು ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಶುಭ ಕೋರಿದ್ದಾರೆ. ಕೆಂಪೇ ಗೌಡ ಜಯಂತಿ ನಿಮಿತ್ತ ಅರಮನೆ ಮೈದಾನದಲ್ಲಿ ಇಂದು ಬೆಳಿಗ್ಗೆ ಆಯೋಜಿಸಿರುವ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ಭಾಗಿಯಾಗಲಿದ್ದಾರೆ.

    ಶುಭ ಕೋರಿದ ಸಿದ್ದರಾಮಯ್ಯ

    ನಾಡ ಬಾಂಧವರಿಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು.
    ದೂರದೃಷ್ಟಿ ಮತ್ತು ನಾಡ ಪ್ರೇಮದಿಂದ ಬೆಂಗಳೂರನ್ನು ಕಟ್ಟಿದ ಹೆಮ್ಮೆಯ ಕನ್ನಡಿಗನ ಸಾಧನೆ ನಮಗೆಲ್ಲ ಪ್ರೇರಣೆಯಾಗಲಿ. ನಾಡಪ್ರಭು ಕೆಂಪೇಗೌಡರ ಬದುಕು ಮತ್ತು ಸಾಧನೆಯ‌ ಅಧ್ಯಯನದ‌ ಸಂಶೋಧನಾ ಕೇಂದ್ರ‌ ಶೀಘ್ರ ಪ್ರಾರಂಭವಾಗಲಿ. ಕೆಂಪೇಗೌಡ‌ ವಸ್ತುಸಂಗ್ರಹಾಲಯದ ಅಭಿವೃದ್ಧಿ ತ್ವರಿತವಾಗಿ ನಡೆಯಲಿ. ಇದಕ್ಕಾಗಿಯೇ ಸ್ಥಾಪಿಸಲಾಗಿರುವ ಕೆಂಪೇಗೌಡ ಅಭಿವೃದ್ಧಿ ಪ್ರಾಧಿಕಾರಕ್ಕೆ ರಾಜ್ಯ ಸರ್ಕಾರ ಎಲ್ಲ‌ ರೀತಿಯ ನೆರವು ನೀಡುತ್ತದೆ ಎಂಬ ಭರವಸೆ ನನಗಿದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

    ರಾಜ್ಯಾದ್ಯಂತ ಕೆಂಪೇಗೌಡ, ರಾಣಿ ಚೆನ್ನಮ್ಮ ಜಯಂತಿ: ಏನಿದರ ಗುಟ್ಟು?

    ಶ್ರೀರಾಮುಲು ಶುಭಹಾರೈಕೆ

    ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು ಎಂದು ಬಿಜೆಪಿಯ ಮೊಣಕಾಲ್ಮೂರು ಶಾಸಕ ಬಿ.ಶ್ರೀರಾಮುಲು ಟ್ವೀಟ್ ಮಾಡಿದ್ದಾರೆ.

    ಕೆಂಪೇಗೌಡರನ್ನು ಸ್ಮರಿಸಿದ ಜಾರ್ಜ್

    ನಾಡಿನ ಸಮಸ್ತ ಜನತೆಗೆ ಬೆಂಗಳೂರು ನಿರ್ಮಾತೃ, ನಾಡಪ್ರಭು ಶ್ರೀ ಕೆಂಪೇಗೌಡರ ಜಯಂತೋತ್ಸವದ ಹಾರ್ದಿಕ ಶುಭಾಶಯಗಳು. ಈ ಶುಭದಿನದಂದು ನಾವೆಲ್ಲರೂ ಹೆಮ್ಮೆಯಿಂದ ಶ್ರೀ ಕೆಂಪೇಗೌಡರ ಸಾಧನೆಯನ್ನು ಸ್ಮರಿಸಿ ಮುಂದಿನ ಪೀಳಿಗೆಗೆ ಸಾರುವ ಪ್ರತಿಜ್ಞೆ ಮಾಡೋಣ.

    ನಾಡಪ್ರಭುವನ್ನು ನೆನೆಪಿಸಿಕೊಂಡ ಸೌಮ್ಯಾ ರೆಡ್ಡಿ

    ನಾಡಿನ ಸಮಸ್ತ ಜನತೆಗೆ ನಾಡಪ್ರಭು ಕೆಂಪೇಗೌಡ ಜಯಂತಿಯ ಶುಭಾಶಯಗಳು ಎಂದು ಜಯನಗರ ಕಾಂಗ್ರೆಸ್ ಶಾಸಕಿ ಸೌಮ್ಯಾ ರೆಡ್ಡಿ ಟ್ವೀಟ್ ಮಾಡಿದ್ದಾರೆ.

    ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

    English summary
    Kempe Gowda Jayanti is celebrated all over Karnataka, especially in Bengaluru today(June 27th)Nadaprabhu Hiriya Kempe Gowda, well known as Kempe Gowda I, was a feudatory ruler under the Vijayanagara Empire. The city of Bengaluru itself was established by Kempe Gowda in 1537

    Oneindia ಬ್ರೇಕಿಂಗ್ ನ್ಯೂಸ್,
    ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

    X
    We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more