ಸುಚಿತ್ರ ಫಿಲ್ಮ್ ಸೊಸೈಟಿಯಲ್ಲಿ ಗಿರೀಶ್ ಕಾರ್ನಾಡ್ ಸಂಭ್ರಮ

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05 : ಜ್ಞಾನಪೀಠ ಪುರಸ್ಕೃತ, ಖ್ಯಾತ ನಿರ್ದೇಶಕ ನಾಟಕಕಾರರು ಆಗಿರುವ ಗಿರೀಶ್ ಕಾರ್ನಾಡ್ ಅವರ ಚಿತ್ರಗಳನ್ನು ವೀಕ್ಷಿಸಲು ಸುಚಿತ್ರ ಫಿಲ್ಮ್ ಸೊಸೈಟಿಯವರು ನಗರದ ಜನತೆಗೆ ಅವಕಾಶ ಕಲ್ಪಿಸಿದೆ. ಮಂಗಳವಾರ(ಡಿ.5)ರಿಂದ ಆಯೋಜಿಸಿದ್ದು ಡಿ.10 ರವರೆಗೆ ನಡೆಯಲಿದೆ.

ಕಾರ್ನಾಡ್, ಬರಗೂರು ಸೇರಿ 17 ಸಾಹಿತಿ, ಚಿಂತಕರಿಗೆ ಬಿಗಿಭದ್ರತೆ

ಸುಚಿತ್ರ ಫಿಲ್ಮ್ ಸೊಸೈಟಿ ಕಾರ್ನಾಡ್ ಎ-ಸೆಲೆಬ್ರೇಷನ್ ಎನ್ನುವ ಶೀರ್ಷಿಕೆಯೊಂದಿಗೆ ಆಯೋಜಿಸಿದ್ದು ಪ್ರತಿ ದಿನ ಸಂಜೆ 6 ಗಂಟೆಗೆ ಸುಚಿತ್ರ ಫಿಲ್ಮ್ ಸೊಸೈಟಿಯ ಪಿಸಿಪಿಎ ಸಭಾಂಗಣದಲ್ಲಿ ಚಿತ್ರ ಪ್ರಸಾರವಾಗಲಿದೆ.

Karnad- A celebration from Tuesday
*ಡಿಸೆಂಬರ್ 6 ರಂದು 1984 ತೆರೆಕಂಡಂತಹ 'ಉತ್ಸವ್' ಹಿಂದಿ ಚಲನಚಿತ್ರ.* ಡಿಸೆಂಬರ್ 7 ರಂದು1977 ರಲ್ಲಿ ತೆರೆಕಂಡಂತಹ ತಬ್ಬಲಿಯು ನೀನಾದೆ ಮಗನೆ, *ಡಿಸೆಂಬರ್ 8 ರಂದು 1999ರ ಕಾನೂನು ಹೆಗ್ಗಡತಿ ಕನ್ನಡ ಚಲನಚಿತ್ರ, *ಡಿ.9 ರಂದು 1978 ರಲ್ಲಿ ತೆರೆಕಂಡಂತಹ ಒಂದಾನೊಂದು ಕಾಲದಲ್ಲಿ ಕನ್ನಡ ಚಲನಚಿತ್ರ ವೀಕ್ಷಿಸಬಹುದಾಗಿದೆ.

ಜೆಎನ್ ಯು ಕನ್ಹಯ್ಯ ಬಂಧನ ವಿರೋಧಿಸಿದ ಗಿರೀಶ್ ಕಾರ್ನಾಡ್

ಕೊನೆಯ ದಿನವಾದ ಡಿ.10 ರಂದು ಗಿರೀಶ್ ಕಾರ್ನಾಡ್ ಅವರೊಂದಿಗೆ ಅವರ ಇಷ್ಟು ವರ್ಷದವರೆಗಿನ ಪಯಣದ ಕುರಿತು ಸಂವಾದ ಕಾರ್ಯಕ್ರಮ ನಡೆಯಲಿದೆ. ನಂತರ ಬಿ.ವಿ. ಕಾರಂತ್ ಅವರ ಗಿರೀಶ್ ಕಾರ್ನಾಡ್ ಅಭಿನಯಿಸಿರುವ 1972 ರಲ್ಲಿ ತೆರೆಕಂಡಂತಹ 'ವಂಶವೃಕ್ಷ' ಕನ್ನಡ ಚಲನಚಿತ್ರ ಪ್ರದರ್ಶನಗೊಳ್ಳಲಿದೆ.

ಏನು-ಗಿರೀಶ್ ಕಾರ್ನಾಡ್ ಅವರೊಂದಿಗೆ ಸಂಭ್ರಮ

ಎಲ್ಲಿ-ಸುಚಿತ್ರ ಫಿಲ್ಮ್ ಸೊಸೈಟಿ-#36, 9 ನೇ ಮುಖ್ಯರಸ್ತೆ, ಬಿ.ವಿ. ಕಾರಂತ್ ರಸ್ತೆ, ಬನಶಂಕರಿ ಎರಡನೇ ಹಂತ ಬೆಂಗಳೂರು

ಯಾವಾಗ-ಡಿಸೆಂಬರ್ 05 ರಿಂದ 10 ಸಂಜೆ 6 ಗಂಟೆಗೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Karnad A celebration - Suchitra Film society is organizing veteran Kannada writer and Jnan Peeta award winner Dr. Girish Karnad film festival from Dec. 5 to Dec 10. Festival includes screening of movies, Vamshavruksha, Kanooru Heggadati and more!

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ