ಕಾರ್ಗಿಲ್ ಯೋಧ ಕರ್ನಲ್ ಎಂ.ಬಿ. ರವೀಂದ್ರನಾಥ್ ನಿಧನ

Posted By: Nayana
Subscribe to Oneindia Kannada

ಬೆಂಗಳೂರು, ಏಪ್ರಿಲ್ 09: ಕಾರ್ಗಿಲ್ ಯೋಧ ಕರ್ನಲ್ ಎಂ.ಬಿ.ರವೀಂದ್ರನಾಥ್ (63) ಭಾನುವಾರ ಬೆಂಗಳೂರಿನ ಸ್ವಗೃಹದಲ್ಲಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ರವೀಂದ್ರನಾಥ್ ಅವರು ಮೂಲತಃ ದಾವಣಗೆರೆಯವರಾಗಿದ್ದರು. ಜಯನಗರದ 7ನೇ ಬ್ಲಾಕ್‌ನಲ್ಲಿ ವಾಸವಾಗಿದ್ದರು. ಕಾರ್ಗಿಲ್ ಯುದ್ಧದಲ್ಲಿ ಪ್ರಮುಖ ಪಾತ್ರ ವಹಿಸಿದ್ದ ರವೀಂದ್ರನಾಥ್, ಟೈಗರ್ ಹಿಲ್ಸ್ ತುಕಡಿ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿದ್ದರು. ದಾವಣಗೆರೆಯ ವಿದ್ಯಾನಗರದ ನಿವಾಸಿಯಾಗಿದ್ದ ಇವರು ಸಮಾಜ ಸೇವಕ ಹೊಳೆಸಿರಿಗೆರೆ ಬಸಪ್ಪ ಅವರ ಪುತ್ರ. ಸೇನೆಯಿಂದ ನಿವೃತ್ತರಾಗಿ ಬೆಂಗಳೂರಿನಲ್ಲಿ ನೆಲೆಸಿದ್ದರು.

Kargil war hero passes away in Bengaluru

ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿರುವ ಮಾಜಿ ಯೋಧ ಮೂಲತಃ ಹರಿಹರ ತಾಲೂಕು ಹೊಳೆಸಿರಿಗೆರೆ ಗ್ರಾಮದವರು. ಟೈಗರ್ ಹಿಲ್ಸ್ ನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದಕ್ಕಾಗಿ ರವೀಂದ್ರನಾಥ್ ಗೆ 1999ರ ಆಗಸ್ಟ್ 15ರಂದು ವೀರಚಕ್ರ ಪ್ರಶಸ್ತಿ ನೀಡಲಾಗಿತ್ತು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Retired Colonel Magod Basappa Ravindranath, who led the operations to recapture the strategic heights of Tololing Point 4590 during Operation Vijay in Kargil, died in Bengaluru on Sunday morning. He was 63. reportedly suffered a heart attack while he was on his way for a jog at a park near his residence in Jayanagar 7th Block. His mortal remains have been taken to his hometown Davanagere.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ