ನಮ್ಮ ಮೆಟ್ರೋದಲ್ಲಿ ಬದಲಾದ ಭಾಷಾ ನೀತಿ, ಕರವೇ ಸ್ವಾಗತ

Posted By:
Subscribe to Oneindia Kannada

ಬೆಂಗಳೂರು, ಜೂನ್ 16: ನಮ್ಮ ಮೆಟ್ರೋ ಆರಂಭವಾದ ಮೊದಲ ದಿನವೇ ಬಿಎಂಆರ್ ಸಿಎಲ್ ಸಿಬ್ಬಂದಿ ಕನ್ನಡತನ ಮರೆತ್ತಿದ್ದಾರೆ ಎಂದು ವಾಟಾಳ್ ನಾಗರಾಜ್ ತಮಟೆ ಬಾರಿಸಿ ಎಚ್ಚರಿಕೆ ಮೂಡಿಸಿದ್ದರು.

ಇದಾದ ವರ್ಷಗಳ ನಮ್ಮ ಮೆಟ್ರೋದಲ್ಲಿ ಭಾಷಾ ನೀತಿ ಬದಲಾಗಿದೆ. ಬಹುತೇಕ ಕನ್ನಡ ಮಯವಾಗಿರುವ ಮೆಟ್ರೋ ನೀತಿಗೆ ಕರ್ನಾಟಕ ರಕ್ಷಣಾ ವೇದಿಕೆ, ಕನ್ನಡಿಗರು ಸ್ವಾಗತಿಸಿದ್ದಾರೆ.

ಮೆಟ್ರೋ ನಿಲ್ದಾಣದ ಫಲಕಗಳು, ಮೆಟ್ರೋ ಒಳಾಂಗಣ ಎಲ್ಲವೂ ಇನ್ನಷ್ಟು ಕನ್ನಡ ಮಯವಾಗಬೇಕು. ನಿಲ್ದಾಣಗಳಲ್ಲಿ ಕನ್ನಡತನ ಇರಬೇಕು ಎಂದು ಕನ್ನಡಪರ ಸಂಘಟನೆಗಳು ಆಗ್ರಹಿಸುತ್ತಲೇ ಬಂದಿವೆ.

Karave welcomes change in BMRCL Namma Metro language policy

ಈ ಹಿಂದೆ ಮೆಟ್ರೋದಲ್ಲಿನ ಭಾಷಾ ನೀತಿಯಿಂದ ಸಂವಿಧಾನದ 8ನೇ ಪರಿಚ್ಛೇಧದಲ್ಲಿ ಗುರುತಿಸಲಾದ ಎಲ್ಲ 22 ಭಾಷೆಗಳು ಸಮಾನ ಎಂಬ ಸಂವಿಧಾನದ ಆಶಯಕ್ಕೆ ಧಕ್ಕೆ ಉಂಟಾಗಿತ್ತು.

ಇನ್ನೊಂದು ಕಡೆ ವಲಸಿಗರು ಕನ್ನಡ ಕಲಿತು ಸ್ಥಳೀಯ ಮುಖ್ಯವಾಹಿನಿಯಲ್ಲಿ ಅವರು ಬೆರೆಯುವ ಅವಕಾಶವನ್ನು ತಪ್ಪಿಸುವ ಕೆಲಸ ನಡೆದಿತ್ತು. ವಲಸಿಗರು ಅಲ್ಲಿನ ಭಾಷೆಯನ್ನು ಕಲಿತು ಸ್ಥಳೀಯ ಮುಖ್ಯವಾಹಿನಿಗೆ ಬೆರೆಯಬೇಕು ಎಂಬ ಉದ್ದೇಶಕ್ಕೆ ಮಾರಕವಾಗಿತ್ತು.

ನಮ್ಮ ಮೆಟ್ರೊ ಸೇವೆ ಒದಗಿಸುತ್ತಿರುವುದು ಬೆಂಗಳೂರಿಗರಿಗೆ. ಹೀಗಾಗಿ ಬೆಂಗಳೂರಿನ ನುಡಿಯಲ್ಲೇ ಎಲ್ಲ ಮಾಹಿತಿಗಳು ಸಿಗಬೇಕು. ಇನ್ನು ಬೆಂಗಳೂರಿಗರಿಗೆ ಬರುವ ವಲಸಿಗರಿಗೆ ತಾತ್ಕಾಲಿಕ ಅನುಕೂಲವಾಗುವ ಹಾಗೆ ಆಂಗ್ಲ ಭಾಷೆ ಇರಲಿ.

ಒಕ್ಕೂಟ ವ್ಯವಸ್ಥೆಯಿರುವ ಯುರೋಪಿನಲ್ಲಿನ ಭಾಷಾ ನೀತಿ ಇದಕ್ಕೆ ಒಳ್ಳೆಯ ಉದಾಹರಣೆ ಎಂದು ಬಿಎಂಆರ್ ಸಿಎಲ್ ಗೆ ಅನೇಕ ಬಾರಿ ಮನವಿ ಸಲ್ಲಿಸಿ, ಹಿಡಿದ ಕಾರ್ಯವನ್ನು ಕರವೇ ಐಟಿ ಬಳಗ, ಸಮಾನ ಮನಸ್ಕ ಕನ್ನಡಿಗರು ಸಾಧಿಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Karnataka Rakshana Vedike and Kannadigas welcome BMRCL Namma Metro's change in language policy. Earlier BMRCL sign boards used to have multiple language display, now, Namma Metro following two language policy like Delhi Metro.
Please Wait while comments are loading...