ರಾಜ್ಯೋತ್ಸವ ವಿಶೇಷ: ಸಿರಿಗನ್ನಡಂ-ಸಕತ್ ರಾಕಿಂಗ್ ಗುರೂ!

Posted By:
Subscribe to Oneindia Kannada

ಈ ಬಾರಿ ಕನ್ನಡ ರಾಜ್ಯೋತ್ಸವಕ್ಕೆ ವಿಶೇಷವಾಗಿ ರಾಕ್ ಸಾಂಗ್ ವೊಂದನ್ನು ಕನ್ನಡಿಗರಿಗೆ ಉಡುಗೊರೆಯಾಗಿ ನೀಡಿದ್ದಾರೆ ಗಾಯಕ ಸಂಘರ್ಷ್ ಕುಮಾರ್. ಸಾವಿರಾರು ವರ್ಷಗಳ ಇತಿಹಾಸ, ಸಂಗೀತ, ಸಾಹಿತ್ಯ, ಕಲೆಗಳ ಬೀಡು ನಮ್ಮ ನಾಡಿನ ಬಗ್ಗೆ ಹೆಮ್ಮೆಯಿಂದ ರೂಪಿಸಿದ ಹಾಡು ಇದಾಗಿದೆ.

ನಾಡಗೀತೆ ಹೊಸ ಆವೃತ್ತಿಯ ಸಂಗೀತದಲ್ಲಿ ಕೇಳಿ ಆನಂದಿಸಿ

ಕನ್ನಡ ಭಾಷೆ, ಸಿನಿಮಾಗಳನ್ನು ಆಧಾರಿಸಿ, Rap ಸಾಂಗ್ ಗಳು ಬಂದಿವೆ. ಆದರೆ, ಪೂರ್ಣ ಪ್ರಮಾಣದ ರಾಕ್ ಸಾಂಗ್ ಇರಲಿಲ್ಲ. ಇದನ್ನು ಪೂರ್ಣಗೊಳಿಸಲು ನಮ್ಮ ನಾಡಿನ ಹೆಮ್ಮೆಯನ್ನು ಸಾರಲು 'ಸಿರಿಗನ್ನಡಂ' ಹೆಸರಿನ ರಾಕ್ ಸಾಂಗ್ ಹಾಡಿದ್ದಾರೆ ಸಂಘರ್ಷ್.

Kanndada Rajyothsava special Sirigannadam rock Song by Sangarsh

ಒನ್ ಇಂಡಿಯಾ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪತ್ರಕರ್ತೆ ಅನುಷಾರವಿ ಅವರು ರಚಿಸಿರುವ ಸಾಹಿತ್ಯದಲ್ಲಿ ಆದಷ್ಟು ಕನ್ನಡದ ಹಿರಿಮೆ ಗರಿಮೆಗಳನ್ನು ಅಳವಡಿಸಲಾಗಿದೆ. ಸಾಹಿತ್ಯಕ್ಕೆ ತಕ್ಕಂತೆ ಅಂಟೋನಿ ಕಮಲ್ ಸಂಗೀತ ನೀಡಿದ್ದಾರೆ.

ಜನರಲ್ಲಿ ಶಕ್ತಿ ತುಂಬುವ ಸಿಂಕ್ರೋಶಕ್ತಿ, ಕಾರ್ತಿಕಾ ವಾರೆ ವಾಹ್!

ಈ ವಿಡಿಯೋ ಸಾಂಗ್ ಪರಿಕಲ್ಪನೆ ಹಾಗೂ ನಿರ್ದೇಶನವನ್ನು ಚಂದ್ರಕೀರ್ತಿ ಅವರು ಮಾಡಿದ್ದಾರೆ. ಸಿದ್ದು ಜಿಎಸ್ ಅವರ ಉತ್ತಮ ಕ್ಯಾಮೆರಾವರ್ಕ್ ಮೂಲಕ ವಿಡಿಯೋ ಮತ್ತೆ ಮತ್ತೆ ನೋಡುವಂತೆ ಮಾಡುವಲ್ಲಿ ಯಶಸ್ವಿಯಾಗಿದೆ.

ಸದ್ಯ ಈ ಸಮಯಕ್ಕೆ ಯೂಟ್ಯೂಬಿನಲ್ಲಿ 25 ಸಾವಿರಕ್ಕೂ ಅಧಿಕ ಬಾರಿ ವೀಕ್ಷಣೆ ಪಡೆದುಕೊಂಡಿದೆ. ನೀವು ನೋಡಿ, ಹಂಚಿಕೊಳ್ಳಿ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
On the eve of Kannada Rajyothsava, here we present to you SIRIGANNADAM- a Kannada rock song that aspires to capture the soul of our motherland and mother tongue. Our album Sirigannadam is, debutant singer Sangarsh Kumar and his team's attempt to highlight and celebrate all things about Kannada.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ