ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತಮಿಳುನಾಡಿನಲ್ಲಿ ಕನ್ನಡದಲ್ಲಿ ಮಾತಾಡಿದ್ರೆ 1,000 ರು ದಂಡ!

By Mahesh
|
Google Oneindia Kannada News

ಬೆಂಗಳೂರು, ಜುಲೈ 01: ನಮ್ಮ 'ಪಕ್ಕದ ಮನೆ ತಮಿಳುನಾಡಲ್ಲಿ ಮಾತ್ರ ಕನ್ನಡ ಮಾತನಾಡಿದ್ರೆ ದಂಡ ಹಾಕುತ್ತಾರೆ.. ಕೇಳುವುದಕ್ಕೆ ಅಚ್ಚರಿ, ಆಘಾತ ಎನಿಸುವ ಘಟನೆಯ ಬಗ್ಗೆ ಪತ್ರಕರ್ತ, ಕನ್ನಡ ಪರ ಚಿಂತಕ ಕಿರಿಕ್ ಕೀರ್ತಿ ಅವರು ತಮ್ಮ ಫೇಸ್ ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ.

ಜಯ ಭಾರತ ಜನನಿಯ ತನುಜಾತೆ.. ಜಯ ಹೇ ಕರ್ನಾಟಕ ಮಾತೆ' ಎಂದು ಕುವೆಂಪು ಅವರು ದೇಶದ ವೈವಿಧ್ಯತೆ, ಭಾಷೆ ವೈವಿಧ್ಯತೆ, ನಾವೆಲ್ಲರೂ ಭಾರತ ಮಾತೆ ಮಕ್ಕಳು ಎಂಬ ಪಾಠ ಹೇಳಿಕೊಟ್ಟಿದ್ದಾರೆ. ಕರ್ನಾಟಕದ ಶಾಲೆಗಳಲ್ಲೂ, ಕನ್ನಡಿಗರಲ್ಲೂ ಇದೇ ಭಾವನೆ ಇದೆ. ಆದರೆ, ಇತ್ತೀಚೆಗೆ ಮಂಜುನಾಥ್ ಶೆಟ್ಟಿ ಎಂಬುವವರು ಪಾಂಡಿಚೇರಿಯಲ್ಲಿ ಕನ್ನಡದಲ್ಲಿ ಮಾತನಾಡಿ, 1,000 ರು ದಂಡ ತೆತ್ತಿದ್ದಾರಂತೆ. ಈ ಬಗ್ಗೆ ತಮ್ಮ ಫೇಸ್ ಬುಕ್ ಪುಟದಲ್ಲಿ ತಮ್ಮ ಗೋಳನ್ನು ತೋಡಿಕೊಂಡಿದ್ದಾರೆ. [ಅಮ್ಮ ಆಲಯಂ, ಜಯಲಲಿತಾರಿಗೊಂದು ದೇಗುಲ]

Kannadiga pays Fine Rs 1000 Tamil Nadu RTO for speaking in Kannada

ಕಳೆದ ವಾರ ನಾನು ಪಾಂಡಿಚೇರಿಗೆ ಪ್ರವಾಸಕ್ಕೆಂದು ಹೋಗಿದ್ದೆ. ಅಲ್ಲಿಂದ ವಾಪಸ್ ಬರುವಾಗ ವೆಲ್ಲೂರಿನ ಆರ್ ಟಿಒ ಚೆಕ್ ಪೋಸ್ಟ್ ನಲ್ಲಿ ನನ್ನ ವಾಹನ ತಡೆದು ನಿಲ್ಲಿಸಿದರು. ಬೇರೆ ರಾಜ್ಯದ ನೋಂದಣಿ ಸಂಖ್ಯೆ ಇದ್ದಿದ್ದರಿಂದ ನಾನು ಹಾಗೂ ನನ್ನ ಸ್ನೇಹಿತ ತೆರಿಗೆ ಹಣ ಕಟ್ಟಲು ಮುಂದಾದೆವು.[ವಲಸಿಗರೇ ತೊಲಗಿ ಅಭಿಯಾನಕ್ಕೆ ಭರ್ಜರಿ ಬೆಂಬಲ]

ಆದರೆ, ನಾನು ಅಲ್ಲಿದ್ದ ಮಹಿಳಾ ಅಧಿಕಾರಿ ಜತೆ ಕನ್ನಡದಲ್ಲಿ ಮಾತನಾಡುತ್ತಿದ್ದಂತೆ ಆಕೆ ಗರಂ ಆದರು. ಇದು ತಮಿಳುನಾಡು, ಇಲ್ಲಿ ನೀನು ಕನ್ನಡದಲ್ಲಿ ಹೇಗೆ ಮಾತನಾಡುತ್ತೀಯ ಎಂದು ದಬಾಯಿಸಿದ್ದಲ್ಲದೆ, ನನಗೆ 1,000 ರು ದಂಡ ಹಾಕಿ ರಸೀತಿ ಹರಿದುಕೊಟ್ಟರು.[ಬಿಬಿಎಂಪಿ ಕಾಲ್ ಸೆಂಟರ್ ವಿರುದ್ಧ - ಐಟಿ ಬಿಟಿ ಕನ್ನಡಿಗರ ಟ್ವಿಟ್ಟರ್ ಸಮರ]

ಯಾವ ಕಾನೂನಿನ ಯಾವ ಸೆಕ್ಷನ್ ನಲ್ಲಿ ಈ ರೀತಿ ದಂಡ ವಿಧಿಸಬಹುದು ಗೊತ್ತಿಲ್ಲ. ನನ್ನ ತಪ್ಪಾದರೂ ಏನು ಎಂದು ಬರೆದುಕೊಂಡಿದ್ದಾರೆ.

Kannadiga

ಇದನ್ನು ಹಂಚಿಕೊಂಡಿರುವ ಕಿರಿಕ್ ಕೀರ್ತಿ ಅವರು, ನಾವೆಲ್ಲರೂ ಭಾರತೀಯರು, ಯಾವ ಭಾಷೆ ಬೇಕಾದ್ರೂ ಮಾತಾಡ್ಲಿ ಬಿಡಿ ಎನ್ನುವ ವಿಶಾಲ ಹೃದಯದವರು ಒಮ್ಮೆ ಇಲ್ಲೊಮ್ಮೆ ನೋಡಿ ಎಂದು ಪ್ರಶ್ನಿಸಿದ್ದಾರೆ. ಫೇಸ್ ಬುಕ್ ನಲ್ಲಿ ಐನೂರಕ್ಕೂ ಅಧಿಕ ಲೈಕ್ಸ್, 162ಕ್ಕೂ ಅಧಿಕ ಬಾರಿ ಹಂಚಿಕೆ 42ಕ್ಕೂ ಅಧಿಕ ಕಾಮೆಂಟ್ ಗಳು ಬಂದಿವೆ. ಕೀರ್ತಿ ಫೇಸ್ ಬುಕ್ ಪುಟದ ಲಿಂಕ್ ಇಲ್ಲಿದೆ

English summary
Kannada activist cum Journalist Kirik Keerthi has shared a Facebook post from a Kannadiga who paid fine Rs 1,000 to Tamil Nadu RTO officials for speaking in Kannada. This shocking incident reported from Pondicherry
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X