ಬೆಂಗಳೂರಿನಲ್ಲಿ ಅವಳ ಹೆಜ್ಜೆಯಿಂದ 'ಕನ್ನಡತಿ ಉತ್ಸವ'

Posted By: Nayana
Subscribe to Oneindia Kannada

ಬೆಂಗಳೂರು, ಡಿಸೆಂಬರ್ 05 : ಅವಳ ಹೆಜ್ಜೆ ತಂಡವು ಡಿ.8 ರಿಂದ ಮೂರು ದಿನಗಳ ಕಾಲ 'ಕನ್ನಡತಿ ಉತ್ಸವ' ಎನ್ನುವ ವಿಶಿಷ್ಟ ಕಾರ್ಯಕ್ರಮವನ್ನು ಬೆಂಗಳೂರಿನ ಎಂಜಿ ರಸ್ತೆಯಲ್ಲಿರುವ ರಂಗೋಲಿ-ಮೆಟ್ರೋ ಆರ್ಟ್ ಸೆಂಟರ್ ನಲ್ಲಿ ಆಯೋಜಿಸಿದೆ.

ಕಾರವಾರದಲ್ಲಿ ಸಾಲು ಸಾಲು ಉತ್ಸವ, ಭರ್ಜರಿ ಮನೋರಂಜನೆಗೆ ನೀವೂ ಬನ್ನಿ

ಸಂವಾದಗಳು, ಜನಪದ ಸಂಗೀತ, ಸಾಕ್ಷ್ಯಚಿತ್ರ, ಹಾಸ್ಯ ಪ್ರದರ್ಶನ ಹೀಗೆ ಹಲವಾರು ವಿಭಿನ್ನ ಕಾರ್ಯಕ್ರಮಗಳು ಪ್ರೇಕ್ಷಕರನ್ನು ಬರಸೆಳೆಯುವುದರಲ್ಲಿ ಸಂಶಯವಿಲ್ಲ. ಉತ್ಸವವನ್ನು ಕವಿ ಹಾಗೂ ಅಭಿನೇತ್ರಿ ಪದ್ಮಾವತಿ ರಾವ್ ಉದ್ಘಾಟಿಸಲಿದ್ದಾರೆ. ಭಾರತೀಯ ಥ್ರೋಬಾಲ್ ತಂಡದ ಕ್ಯಾಪ್ಟನ್ ಕೃಪಾ ಪ್ರಸಾದ್ ಪಾಲ್ಗೊಳ್ಳಲಿದ್ದಾರೆ.

Kannadati Utsava fine arts exhibition from dec.8

ವರ್ಣಚಿತ್ರ, ಕವಿತೆ, ಲೇಕನ ಮತ್ತು ಪುಸ್ತಕಗಳ ಪ್ರದರ್ಶನ ಮೂರು ದಿನವೂ ನಡೆಯಲಿದ್ದು, ಬೆಳಗ್ಗೆ 11 ರಿಂದ ಸಂಜೆ7 ರವರೆಗೆ ತೆರೆದಿರುತ್ತದೆ. ಕಿರು ಚಲನಚಿತ್ರಗಳು, ನೇರ ಪ್ರದರ್ಶನಗಳು ಮತ್ತು ಸಂವಾದ ಸರಣಿಯು ನಡೆಯಲಿದೆ. ಡಿಸೆಂಬರ್ ೮ರಂದು ಉದ್ಯಮಿಗಳ ಗತ್ತು ಕುರಿತು ಸಂವಾದ ನಡೆಯಲಿದೆ, ಸ್ತ್ರೀ ನಾಟಕ ಮಂಡಳಿ ಕುರಿತು ಸಾಕ್ಷ್ಯಚಿತ್ರ ಪ್ರದರ್ಶನಗೊಳ್ಳಲಿದೆ ಅದರೊಂದಿಗೆ ಕುಡಿತಿನಿಯ ಅಕ್ಕನಾಗಮ್ಮ ಅವರಿಂದ ಜನಪದ ಸಂಗೀತ ಮೂಡಿಬರಲಿದೆ.

ಡಿಸೆಂಬರ್ 9 ರಂದು ವಿಮೋಚನಾ ಸಂಸ್ಥೆಯಿಂದ 'ಸಾಂಗ್ ಆಫ್ ದಿ ಸೈಕಿ' ಸಾಕ್ಷ್ಯಚಿತ್ರ ಪ್ರದರ್ಶನ ಜರುಗಲಿದ್ದು, ಪಕ್ಷಗಳನ್ನು ಮಿತಿಮೀರಿದ ರಾಜಕೀಯ ಎಂಬ ವಿಷಯಾಧಾರಿತ ಸಂವಾದ, ಇದರೊಂದಿಗೆ ಜಿ.ಎಸ್. ಶಾರದಾ ಅವರಿಂದ ಜಾದೂ ಪ್ರದರ್ಶನ ಆಯೋಜನೆಗೊಂಡಿದೆ.

ಇನ್ನು ಕೊನೆಯ ದಿನವಾದ ಡಿಸೆಂಬರ್ 10 ರಂದು ದೀಪದ ಮಲ್ಲಿಗೆ ತಂಡದಿಂದ ರಕ್ತಾಕ್ಷಿ ನಾಟಕ ನಡೆಯಲಿದ್ದು, ಮಾರ್ಗದರ್ಶಕರನ್ನು ಹುಡುಕುತ್ತಾ ಎನ್ನುವ ವಿಷಯ ಕುರಿತು ಸಂವಾದ, ಕಾಲುವೆಯಾ ಕಾಲ ನೃತ್ಯ ದರ್ಪಣ ಹಾಗೂ ರಂಗಲಕ್ಷ್ಮೀಯರಿಂದ ಹಾಸ್ಯ ಪ್ರದರ್ಶನಗೊಳ್ಳಲಿದೆ.ಗೌಡ ದೂರು

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
A cultural organization Avala Hejje is organising Kannadati Utsava a three days fine art exhibition. celebration of Women of Karnataka by tracing her story through creative expressions. several artists, writers and performers of all ages.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ