ಪೊಲೀಸರ ಮೇಲೆ ಹಲ್ಲೆ ಮಾಡಿದ 'ಕನ್ನಡ ಸೇನೆ' ಪುಂಡರು

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 21 ; ಪುಂಡ ಕನ್ನಡ ಸೇನೆ ಕಾರ್ಯಕರ್ತರು ಪೊಲೀಸರ ಮೇಲೆ ಹಲ್ಲೆ ಮಾಡಿರುವ ಘಟನೆ ಬೆಂಗಳೂರು ಮಹಾಲಕ್ಷ್ಮಿ ಬಡಾವಣೆಯಲ್ಲಿ ನಡೆದಿದೆ.

ಮಹಾಲಕ್ಷ್ಮಿ ಬಡಾವಣೆಯ ಸೋಮೇಶ್ವರ ಬಡಾವಣೆಯಲ್ಲಿ ಕನ್ನಡ ಸೇನೆ ಕಾರ್ಯಕರ್ತರು ಕನ್ನಡ ರಾಜ್ಯೋತ್ಸವ ಮಾಡಿ ಜೋರಾಗಿ ಹಾಡು ಹಾಕಿ, ಕುಡಿದು ಗಲಾಟೆ ಮಾಡುತ್ತಿದ್ದರು. ಇದನ್ನು ಪ್ರಶ್ನಿಸಿದ ಬೀಟ್ ಪೊಲೀಸರ ಮೇಲೆ ಈ ಪುಂಡರ ತಂಡ ಹಲ್ಲೆ ಮಾಡಿದೆ.

Kannada Sene members beats Police constables

ಹೆಡ್ ಕಾನ್ಸ್‌ಟೇಬಲ್ ಸೋಮಶೇಖರ್, ಪೇದೆ ಮಂಜಪ್ಪ ಅವರುಗಳು ಪುಂಡ ಕನ್ನಡ ಸೇನೆ ಕಾರ್ಯಕರ್ತರನ್ನು "ಗಲಾಟೆ ಮಾಡ್ಬೇಡಿ ಎಂದು ಹೇಳಿದ್ದರು' ಅಷ್ಟೆ ಆದರೆ ಇಷ್ಟಕ್ಕೆ ಕೋಪ ಗೊಂಡ ಆಗಲೆ ಕಂಠಪೂರ್ತಿ ಕುಡಿದಿದ್ದ ಕನ್ನಡ ಸೇನೆ ಮಹಾಲಕ್ಷ್ಮಿ ಲೇಔಟ್ ಎಪಿಎಂಸಿ ಘಟಕದ ಅದ್ಯಕ್ಷ ಗೊವಿಂದರಾಜು ಮತ್ತು ಮಗ ಸುರೇಶ್, ಖಜಾಂಚಿ ವಾಜಿರಳ್ಳಿ ಬಾಲು ,ಮತ್ತು ಚಂದ್ರು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ.

ಅಲ್ಲಿಯೇ ಬಿದ್ದ ದೊಣ್ಣೆಯಿಂದ ಪೇದೆ ಮಂಜಪ್ಪ ಮತ್ತು ಸೋಮಶೇಖರ್ ಅವರುಗಳಿಗೆ ಮನಸೋಇಚ್ಛೆ ಬಡಿದು, ಅವರ ಸಮವಸ್ತ್ರ ಹರಿದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.

ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ವೆಂಕಟರಮಣಪ್ಪ ಮತ್ತು ಪೇದೆ ಉಮೇಶ್ ಅವರ ಮೇಲೂ ಎಗರಾಡಿದ ಪುಂಡ ಕನ್ನಡ ಸೇನೆ ಕಾರ್ಯಕರ್ತರ ಗುಂಫು ಎಸ್.ಐ ವೆಂಕಟರಮಪ್ಪ ಅವರನ್ನು 'ನೀನು ಯಾವ ಪೊಲೀಸ್ ಹೋಗಲೇ' ಎಂದೆಲ್ಲಾ ತುಚ್ಛವಾಗಿ ಮಾತನಾಡಿದ್ದಾರೆ.

ನಂತರ ಮಹಾಲಕ್ಷ್ಮಿ ಲೇಔಟ್ ಇನ್ಸ್ಪೆಕ್ಟರ್ ಲೋಹಿತ್ ಸ್ಥಳಕ್ಕಾಗಮಿಸಿ, ಗೋವಿಂದರಾಜು , ಸುರೇಶ್ , ಚಂದ್ರ ಅವರುಗಳನ್ನು ಬಂಧಿಸಿದ್ದಾರೆ. ಆರೋಪಿಗಳ ವಿರುದ್ದ IPC ಸೆಕ್ಷನ್ 43, 504, 332, 353 ಅಡಿಯಲ್ಲಿ ಕೇಸು ದಾಖಲಿಸಲಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Sene members beats Police constables in Mahalakshmi layout, Kannada Sene President Govindaraju and his fellows arrested.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ