ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಸಋಷಿ ಕುವೆಂಪು ಆಧುನಿಕ ರವೀಂದ್ರನಾಥ ಠಾಗೋರ್

By Srinath
|
Google Oneindia Kannada News

ಬೆಂಗಳೂರು, ಜೂನ್ 9: ಇದೇ ಮಾಸಾಂತ್ಯಕ್ಕೆ ಕರ್ನಾಟಕದ ರಾಜ್ಯಪಾಲರಾಗಿ ಹಂಸರಾಜ್ ಆರ್ ಭಾರದ್ವಾಜ್ ಅವರ ಆಳ್ವಿಕೆ ಅಂತ್ಯವಾಗುತ್ತಿದೆ. ಇಷ್ಟು ವರ್ಷ ರಾಜಕೀಯೇತರ ಹುದ್ದೆಯಲ್ಲಿದ್ದರೂ ಅಪ್ಪಟ ರಾಜಕಾರಣಿಯಂತೆ ವರ್ತಿಸಿದ ಭಾರದ್ವಾಜ್ ಅವರು ತಮ್ಮ ಆಡಳಿತದ ಅಂತ್ಯಕ್ಕೆ ರಾಜ್ಯದ ಸಂಸ್ಕೃತಿ ಬಗ್ಗೆ ಹಿತಾಸಕ್ತಿ ವ್ಯಕ್ತಪಡಿಸಿದ್ದಾರೆ.

ಅದರಲ್ಲೂ ನಾಡಗೀತೆ ಬಗ್ಗೆ ವಿಶೇ ಒಲುವು ಬೀರಿದ್ದಾರೆ. ನಾಡಗೀತೆಯನ್ನು ಕುವೆಂಪು ಅವರು ಅದ್ಭುತವಾಗಿ ರಚನೆ ಮಾಡಿದ್ದಾರೆ ಎಂದು ಪ್ರಶಂಸೆ ವ್ಯಕ್ತಪಡಿಸಿರುವ ಅವರು ನಾಡಗೀತೆಯನ್ನು ನಾಡಿನಾದ್ಯಂತ ಏಕರೂಪದಲ್ಲಿ ಹಾಡುವಂತಾಗಬೇಕು ಎಂದು ಬಯಸಿದ್ದಾರೆ.

ರಾಜಭವನದಲ್ಲಿ ಇಂದು ನಡೆದ ಸಮಾರಂಭದಲ್ಲಿ ಕಮಲಾ ಹಂಪನಾ ಅವರ ಪುಸ್ತಕ ಮತ್ತು ಸಿ.ಡಿ. ಬಿಡುಗಡೆ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ರಾಷ್ಟ್ರಗೀತೆಯಂತೆ ನಾಡಗೀತೆಯಲ್ಲೂ ಏಕರೂಪತೆ ತರಬೇಕು ಎಂದು ಪ್ರತಿಪಾದಿಸಿದ್ದಾರೆ.

ರಸಋಷಿ ಕುವೆಂಪು ಆಧುನಿಕ ರವೀಂದ್ರನಾಥ ಠಾಗೋರ್:

kannada-poet-kuvempu-compared-to-rabindranath-tagore-by-governor-bhardwaj
ವಿವಿಧ ಜಾತಿ, ಧರ್ಮ, ಸಾಹಿತ್ಯ, ಸಂಸ್ಕೃತಿ ಎಲ್ಲವನ್ನೂ ನಾಡಗೀತೆಯಲ್ಲಿ ಮೇಳೈಸಲಾಗಿದೆ. ಇಂತಹ ನಾಡಗೀತೆಯನ್ನು ಏಕತೆಯಲ್ಲಿ ಅದರಲ್ಲೂ ವಿಶೇಷವಾಗಿ ರಾಷ್ಟ್ರಗೀತೆ ಮಾದರಿಯಲ್ಲಿ ಹಾಡಿದರೆ, ಕರ್ನಾಟಕಕ್ಕೆ ಮತ್ತು ಕನ್ನಡಕ್ಕೆ ಹೆಚ್ಚು ಭೂಷಣವಾಗುತ್ತದೆ. ರಸಋಷಿ ಕುವೆಂಪು ಅವರು ವಿಶ್ವ ಕಂಡ ಮಹಾನ್ ಸಾಹಿತಿ, ಆಧುನಿಕ ಕವಿ. ರವೀಂದ್ರನಾಥ ಠಾಗೋರ್ ಅವರೂ ಪಾಶ್ಚಿಮಾತ್ಯ, ಪೂರ್ವ-ಪಶ್ಚಿಮ ಸಾಹಿತ್ಯದ ಸಾರವನ್ನು ಹೀರಿ ಬೆಳೆದು ವಿಶ್ವ ಮಟ್ಟದಲ್ಲಿ ನಿಂತವರು. ಇಬ್ಬರಲ್ಲೂ ಸಾಮ್ಯತೆ ಇದೆ ಎಂದು ಗುಣಗಾನ ಮಾಡಿದರು. ಈ ಹಿಂದೆಯೂ ರಾಜ್ಯಪಾಲ ಭಾರದ್ವಾಜ್ ಅವರು ಕುವೆಂಪು ಅವರನ್ನು ರವೀಂದ್ರನಾಥ ಠಾಗೋರ್ ಅವರಿಗೆ ಹೋಲಿಸಿದ್ದರು.

ಬ್ರಾಹ್ಮಣರು ವೇದ, ಉಪನಿಷತ್ತುಗಳನ್ನು ತಪ್ಪಾಗಿ ಅರ್ಥೈಸಿದ್ದರಿಂದ ಸಮಾಜದಲ್ಲಿ ಹಿಂಸಾಚಾರಕ್ಕೆ ಕಾರಣವಾಗಿದೆ. ಆದ್ದರಿಂದ ವೇದ, ಉಪನಿಷತ್ತುಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಶಾಂತಿಯುತ ಜೀವನ ನಡೆಸಲು ಸಾಧ್ಯ ಎಂದು ರಾಜ್ಯಪಾಲ ಭಾರದ್ವಾಜ್ ಅವರು ಮಾರ್ಮಿಕವಾಗಿ ತಿಳಿಸಿದ್ದಾರೆ.

ಅಧಿಕಾರ ಬಿಡುತ್ತಿರುವ ಹಿನ್ನೆಲೆಯಲ್ಲಿ ಕನ್ನಡ ನಾಡು, ಸಂಸ್ಕೃತಿ, ಭಾಷೆ, ಇಲ್ಲಿಯ ಜನರ ಪ್ರೀತಿ, ವಿಶ್ವಾಸ ಎಲ್ಲಾ ಕಾಲಕ್ಕೂ ಮೆಚ್ಚುಗೆಯಾಗಿದೆ. ರಾಜ್ಯಪಾಲನಾಗಿ ಇಲ್ಲಿಗೆ ಬಂದಿದ್ದು, ಇಲ್ಲಿ ಐದು ವರ್ಷಗಳ ಕಾಲ ಕಳೆದದ್ದು ನನ್ನ ಜೀವನದಲ್ಲಿ ಮರೆಯಲಾಗದ ಮಧುರ ಕ್ಷಣಗಳು ಎಂದೂ ಅವರು ರಾಜ್ಯದ ಬಗ್ಗೆ ಹಾಡಿ, ಹೊಗಳಿದ್ದಾರೆ.

English summary
Governor HR Bhardwaj once again compared Kannada poet KUVEMPU to Rabindranath Tagore. Hailing Kuvempu's vision as broad-minded, liberal and embracing all of humanity, and in an oblique reference to current political events in the state, Bhardwaj said: "In these days of petty thinking, it's very important we understand what Kuvempu stands for. We need to imbibe his vision of life and society."
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X