ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹಲವು ಗಣ್ಯರಿಗೆ ಕನ್ನಡ ನಿತ್ಯೋತ್ಸವ ಪ್ರಶಸ್ತಿ ಪ್ರಧಾನ

By Gururaj
|
Google Oneindia Kannada News

ಬೆಂಗಳೂರು, ಜುಲೈ 16 : ಆದರ್ಶ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಹಲವು ಗಣ್ಯರಿಗೆ ಕನ್ನಡ ನಿತ್ಯೋತ್ಸವ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಗೀತ ರಚನೆಕಾರ ಎಂ.ಎನ್.ವ್ಯಾಸರಾವ್ ಅವರಿಗೆ ಶ್ರದ್ದಾಂಜಲಿ ಸಲ್ಲಿಸಲಾಯಿತು.

ಕಿಕ್ಕೇರಿ ಕೃಷ್ಣಮೂರ್ತಿ ಅಧ್ಯಕ್ಷರಾಗಿರುವ ಆದರ್ಶ ಸುಗಮ ಸಂಗೀತ ಅಕಾಡೆಮಿ ವತಿಯಿಂದ ಕನ್ನಡ ನಿತ್ಯೋತ್ಸವ ಪ್ರಶಸ್ತಿಯನ್ನು ನೀಡಲಾಗುತ್ತದೆ. ಸಮಾರಂಭವನ್ನು ಎಂ.ಎನ್.ವ್ಯಾಸರಾವ್ ಅವರ 'ನೀನಿಲ್ಲದೆ ನನಗೇನಿದೆ' ಹಾಡಿನ ಮೂಲಕ ಆರಂಭಿಸಲಾಯಿತು. ಗಾಯಕಿ ಸೀಮಾ ರಾಯ್ಕರ್ ಅವರು ಹಾಡಿನ ಮೂಲಕ ಗೌರವ ಸಮರ್ಪಿಸಿದರು.

ಭಾವ ಕವಿ ವ್ಯಾಸರಾವ್ ನಿಧನಕ್ಕೆ ಕಂಬನಿ ಮಿಡಿದ ಗಣ್ಯರುಭಾವ ಕವಿ ವ್ಯಾಸರಾವ್ ನಿಧನಕ್ಕೆ ಕಂಬನಿ ಮಿಡಿದ ಗಣ್ಯರು

kannada

ಪದಬಂಧ ಲೇಖಕ ಅ.ನಾ.ಪ್ರಹ್ಲಾದರಾವ್, ಪತ್ರಕರ್ತ ಬಿ.ಜಿ.ರವಿಕುಮಾರ್, ಗಾಯಕ ಗೋಪಿ, ಗಾಯಕಿ ಸೀಮಾ ರಾಯ್ಕರ್ ಹಾಗೂ ಕೀಬೋರ್ಡ್ ವಾದಕ ಧಾರವಾಡ ರವಿ ಅವರನ್ನು ಸುಗಮ ಸಂಗೀತ ಅಕಾಡೆಮಿಯ ಗೌರವಾಧ್ಯಕ್ಷರಾದ ವೈ.ಕೆ.ಮುದ್ದುಕೃಷ್ಣ ಸನ್ಮಾನಸಿದರು.

ಕರ್ನಾಟಕ ಬಂದ್‌ಗೆ ಕರೆ ನೀಡಿದ ವಾಟಾಳ್ ನಾಗರಾಜ್ಕರ್ನಾಟಕ ಬಂದ್‌ಗೆ ಕರೆ ನೀಡಿದ ವಾಟಾಳ್ ನಾಗರಾಜ್

ಕನ್ನಡ ನಿತ್ಯೋತ್ಸವ ಪ್ರಶಸ್ತಿ ಸಮಾರಂಭ ಉದ್ಘಾಟಿಸಿ ಮಾತನಾಡಿದ ಪ್ರೊ.ಬಿ.ಕೆ.ಚಂದ್ರಶೇಖರ್, ತಮ್ಮ ಅಧಿಕಾರಾವಧಿಯಲ್ಲಿ ಸಂಗೀತ ಕ್ಷೇತ್ರಕ್ಕೆ ನೀಡಿದ ಒತ್ತಾಸೆಯನ್ನು ನೆನಪು ಮಾಡಿಕೊಂಡರು.

Kannada Nityotsava

'ರಾಜ್ಯ, ಹೊರರಾಜ್ಯ ಹಾಗೂ ವಿದೇಶಗಳಲ್ಲಿನ 78,000 ಮಕ್ಕಳಿಗೆ ಕನ್ನಡ ಕವಿಗೀತೆಗಳನ್ನು ಅಭ್ಯಾಸ ಮಾಡಿಸುವ ಮೂಲಕ ಕನ್ನಡದ ಸೇವೆ ಮಾಡುತ್ತಾ ಬಂದಿರುವ ಆದರ್ಶ ಸುಗಮ ಸಂಗೀತ ಅಕಾಡೆಮಿಯ ಅಧ್ಯಕ್ಷರಾದ ಕಿಕ್ಕೇರಿ ಕೃಷ್ಣಮೂರ್ತಿ ಅವರ ಸಾಧನೆ ಅನುಪಮ' ಎಂದು ಶ್ಲಾಘಿಸಿದರು.

English summary
Kannada Nityotsava award presented to Ana Pralhad Rao, B.G.Rravi kumar and others. Kannada Nityotsava award will set up by Adarsha Sugama Sangeetha Academy lead by noted singer Kikkeri Krishnamurthy.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X