ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಮಫಲಕದಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯೆಲ್ಲಿದೆ? ಹೈಕೋರ್ಟ್

|
Google Oneindia Kannada News

ಬೆಂಗಳೂರು, ಸೆಪ್ಟೆಂಬರ್ 15: ನಾಮಫಲಕಗಳಲ್ಲಿ ಕನ್ನಡ ಕಡ್ಡಾಯ ಯಾವ ಕಾಯ್ದೆಯಲ್ಲಿದೆ ಎಂದು ಹೈಕೋರ್ಟ್ ಬಿಬಿಎಂಪಿಗೆ ತರಾಟೆ ತೆಗೆದುಕೊಂಡಿದೆ. ಬೆಂಗಳೂರು ನಗರ ವ್ಯಾಪ್ತಿಯ ವಾಣಿಜ್ಯ ಸಂಸ್ಥೆಗಳು ಅಳವಡಿಸುವ ನಾಮಫಲಕಗಳಲ್ಲಿ ಕನ್ನಡ ಪ್ರಧಾನವಾಗಿರಬೇಕು ಎಂದು ಬಿಬಿಎಂಪಿ ಸುತ್ತೋಲೆ ಹೊರಡಿಸಿತ್ತು.

ಬಿಬಿಎಂಪಿಗೆ ತನ್ನ ಮೂಗಿಗಿಂತ ಮೂಗುತಿ ಭಾರ! ಬಿಬಿಎಂಪಿಗೆ ತನ್ನ ಮೂಗಿಗಿಂತ ಮೂಗುತಿ ಭಾರ!

ಈ ಸುತ್ತೋಲೆಯ ರದ್ದುಕೋರಿ ಭಾರತೀಯ ಚಿಲ್ಲರೆ ಮಾರಾಟಗಾರರ ಸಂಘ ಹಾಗೂ ಆದಿತ್ಯ ಬಿರ್ಲಾ ಫ್ಯಾಷನ್ ಮತ್ತು ರೀಟೇಲ್ ಲಿಮಿಟೆಡ್ ಹೈಕೋರ್ಟ್ ಮೆಟ್ಟಿಲೇರಿತ್ತು. ಈ ಕುರಿತು ಅರ್ಜಿ ವಿಚಾರಣೆ ನಡೆಸಿರುವ ನ್ಯಾ. ಜಿ. ನರೇಂದರ್ ಅವರಿದ್ದ ಏಕ ಸದಸ್ಯ ಪೀಠ, ಯಾವ ಕಾನೂನಿನ ಆಧಾರದ ಮೇಲೆ ಈ ಸುತ್ತೋಲೆ ಹೊರಡಿಸಿದ್ದೀರಿ ಎಂದು ವಿವರಣೆ ನೀಡುವಂತೆ ಬಿಬಿಎಂಪಿಗೆ ನಿರ್ದೇಶನ ನೀಡಿ ವಿಚಾರಣೆಯನ್ನು ಮುಂದೂಡಿತು.

ಗ್ರಂಥಾಲಯ ಇಲಾಖೆಗೆ ಕಟ್ಟಬೇಕಾದ 350 ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ ಗ್ರಂಥಾಲಯ ಇಲಾಖೆಗೆ ಕಟ್ಟಬೇಕಾದ 350 ಕೋಟಿ ಬಾಕಿ ಉಳಿಸಿಕೊಂಡ ಬಿಬಿಎಂಪಿ

ನಾಮಫಲಕಗಳ ಮೇಲೆ ಭಾಷೆಯನ್ನು ಪ್ರಚುರಪಡಿಸಲು ವಾಣಿಜ್ಯ ಸಂಸ್ಥೆಗಳ ಮೇಲೆ ಒತ್ತಡ ಹೇರುವುದು ಸರಿಯಾದ ಸಂವಿಧಾನ ಸಲ್ಲ ಎಂದು ಹೇಳಿದೆ. ಅಲ್ಲದೆ ಭಾಷಡಯು ನಮ್ಮ ಸಂಸ್ಕೃತಿಯನ್ನು ಬಿಂಬಿಸುತ್ತದೆ, ಅದನ್ನು ಪ್ರಚುರಪಡಿಸಬೇಕಿದ್ದರೆ ಶಾಲಾ ಕಾಲೇಜುಗಳ ಮೂಲಕ ಭಾಷೆಯ ಶ್ರೇಷ್ಠತೆಯನ್ನು ತಿಳಿಯಪಡಿಸಿ, ಅದನ್ನು ಬಿಟ್ಟು ವಾಣಿಜ್ಯ ಸಂಸ್ಥೆಗಳ ಮೇಲೆ ಏಕೆ ಒತ್ತಡ ಹಾಕುತ್ತಿದ್ದೀರ ಎಂದು ಪ್ರಶ್ನಿಸಿದೆ.

ಬಿಬಿಎಂಪಿ ಹೊಸ ನೀತಿ: ಕಮರ್ಷಿಯಲ್ ಜಾಹೀರಾತಿಗೆ ಶಾಶ್ವತ ಬ್ರೇಕ್ ಬಿಬಿಎಂಪಿ ಹೊಸ ನೀತಿ: ಕಮರ್ಷಿಯಲ್ ಜಾಹೀರಾತಿಗೆ ಶಾಶ್ವತ ಬ್ರೇಕ್

Kannada mandatory in name board: HC issues notice to BBMP

ಶೇ.60ರಷ್ಟು ಕನ್ನಡ ಪದಗಳನ್ನು ಬಳಸಬೇಕಿದ್ದು, ಸ್ಪಷ್ಟವಾಗಿ ಎದ್ದು ಕಾಣುವಂತಿರಬೇಕು, ಶೇ.40ರಷ್ಟು ಅನ್ಯ ಭಾಷೆ ಪದಗಳನ್ನು ಬಳಸಬಹುದೆಂದು ಆದೇಶ ಹೊರಡಿಸಿದೆ ಎಂದು ಅರ್ಜಿದಾರರ ಪರ ವಕೀಲ ಮಾಹಿತಿ ನೀಡಿದ್ದಾರೆ.

English summary
High court has issues show cause notice that seeking legal binding with circular which mandated by BBMP that Kannada language is mandatory in name boards of commercial establishments in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X