'ಕನ್ನಡ, ಬಾವುಟ, ಪ್ರತ್ಯೇಕ ಧರ್ಮ ಎಲ್ಲ ಚುನಾವಣೆ ಗಿಮಿಕ್'

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 5: ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಸಂಬಂಧಿಸಿದ ನಲವತ್ತು ಸ್ಥಳಗಳಲ್ಲಿ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಇಷ್ಟೆಲ್ಲ ಮಾಹಿತಿಯನ್ನು ಒಂದೆರಡು ದಿನದಲ್ಲಿ ಸಂಗ್ರಹಿಸುವುದಕ್ಕೆ ಸಾಧ್ಯವಾ? ಎಂದು ಲೋಕಾಯುಕ್ತ ನಿವೃತ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಪ್ರತಿಕ್ರಿಯಿಸಿದರು.

ಐಟಿ ದಾಳಿ ಮುಗಿಯುತ್ತಿದ್ದಂತೇ ಅಖಾಡಕ್ಕಿಳಿದ ಡಿ ಕೆ ಶಿವಕುಮಾರ್

ಸದ್ಯದ ವಿವಿಧ ವಿದ್ಯಮಾನಗಳ ಬಗ್ಗೆ ಅವರ ಜತೆ ಒನ್ಇಂಡಿಯಾ ಕನ್ನಡ ಪ್ರಶ್ನಿಸಿದಾಗ ಅವರು ಉತ್ತರಿಸಿದರು. "ಗುಜರಾತ್ ನ ಶಾಸಕರನ್ನು ಇಲ್ಲಿಗೆ ಕರೆದುಕೊಂಡು ಬಂದು ಶಿವಕುಮಾರ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದರಿಂದ ಈ ರೀತಿ ದಾಳಿ ನಡೆಸಲಾಗಿದೆ ಎಂಬ ಕಾಂಗ್ರೆಸ್ ನವರ ಮಾತು ನಂಬುವುದಕ್ಕೆ ಸಾಧ್ಯವಿಲ್ಲ" ಎಂದರು.

'Kannada, Kannada flag remembered at the time of election'

ಜತೆಗೆ ಬಿಜೆಪಿ ಅವರ ಮೇಲೆ ಏಕೆ ದಾಳಿ ಮಾಡ್ತಿಲ್ಲ? ಕಾಂಗ್ರೆಸ್ ನವರನ್ನೇ ಗುರಿ ಮಾಡಿಕೊಳ್ಳಲಾಗಿದೆ ಎಂಬ ಆರೋಪ ಕೂಡ ತಮಾಷೆಯಾಗಿದೆ. ಇದು ಹೇಗೆ ಅಂದರೆ, ಕಳ್ಳನೊಬ್ಬ ತನ್ನ ಮನೆಯ ಮೇಲೆ ಏಕೆ ದಾಳಿ ಮಾಡಿ, ಅರೆಸ್ಟ್ ಮಾಡ್ತೀರಿ? ಅಲ್ಲೊಬ್ಬ ಕಳ್ಳ ಇದ್ದಾನೆ. ಅವನನ್ನೂ ಹಿಡಿಯಿರಿ ಅಂದ ಹಾಗಾಯಿತು ಎಂದರು.

ಲಿಂಗಾಯತ ಪ್ರತ್ಯೇಕ ಧರ್ಮ ವಿವಾದ: ಎಸ್ ಎಲ್ ಭೈರಪ್ಪ ಮಹತ್ವದ ಹೇಳಿಕೆ

ಇನ್ನು ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ಘೋಷಣೆಗೆ ಅವಕಾಶ ಇದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಚುನಾವಣೆಗಳು ಹತ್ತಿರ ಬರುತ್ತಿದ್ದ ಹಾಗೆ ಕನ್ನಡ, ಕನ್ನಡ ಬಾವುಟ, ಪ್ರತ್ಯೇಕ ಧರ್ಮ ಎಲ್ಲ ನೆನಪಾಗಿ ಬಿಡುತ್ತದೆ. ಪ್ರತ್ಯೇಕ ಧರ್ಮ ಆಗಲಿ ಎಂದು ನೀವು ಒತ್ತಡ ಹಾಕಿ. ಅದಕ್ಕೆ ಬೇಕಾದ ಅನುಕೂಲ ಮಾಡಿಕೊಡುವುದಾಗಿ ಇವರು ಏಕೆ ಹೇಳುತ್ತಾರೆ ಎಂದು ಪ್ರಶ್ನಿಸಿದರು.

ಹಾಗೆಲ್ಲ ಯಾವುದೇ ಪ್ರತ್ಯೇಕ ಧರ್ಮ ಘೋಷಣೆ ಮಾಡುವುದಕ್ಕೆ ಸಂವಿಧಾನದಲ್ಲಿ ಅವಕಾಶವಿಲ್ಲ. ಆ ರೀತಿ ಮಾಡುತ್ತಾ ಹೋದರೆ, ನಾಳೆ ತಲೆಗೊಬ್ಬರು ಹೊಸ ಧರ್ಮ ಆರಂಭಿಸಿಬಿಡುತ್ತಾರೆ ಎಂದು ಅವರು ಹೇಳಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kannada, Kannada flag and separate religion issue remembered at the time of election, said by lokayukta retired judge Santhosh Hegde to Oneindia Kannada at Bengaluru press club.
Please Wait while comments are loading...