ಹಿಂದಿ ದಿವಸ್ ವಿರುದ್ಧ ಕನ್ನಡಿಗರ ಟ್ವಿಟ್ಟರ್ ಟ್ರೆಂಡ್ ವಾರ್!

Posted By:
Subscribe to Oneindia Kannada

ಬೆಂಗಳೂರು, ಸೆ. 13: ದೇಶದೆಲ್ಲೆಡೆ ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಹಿಂದಿ ದಿವಸ್/ರಾಜಭಾಷಾ ದಿವಸ್ ಆಚರಿಸಲಾಗುತ್ತದೆ. ಇದನ್ನು ಖಂಡಿಸಿ, ಕನ್ನಡ ಗ್ರಾಹಕ ಕೂಟವು ಟ್ವಿಟ್ಟರ್ ಅಭಿಯಾನವನ್ನು ಹಮ್ಮಿಕೊಂಡಿದೆ.

ಕೇಂದ್ರ ಸರಕಾರವು ಹಿಂದಿ ಭಾಷೆಯನ್ನು ಮಾತ್ರ ಒಕ್ಕೂಟದ ಆಡಳಿತ ಭಾಷೆಯೆಂದು ಕರೆಯುವ ಮೂಲಕ ಹಿಂದಿ ಭಾಷೆಯನ್ನು, ಹಿಂದಿ ಭಾಷಿಕರನ್ನು ಮೇಲ್ದರ್ಜೆಯಲ್ಲಿ ಕೂರಿಸಿ ಹಿಂದಿಯೇತರ ನುಡಿಗಳನ್ನು ಕಡೆಗಣಿಸುತ್ತಿದೆ. ಹಿಂದಿ ಭಾಷೆಗೆ ಇನ್ನೂ ಹೆಚ್ಚಿನ ಮನ್ನಣೆ ಸಿಗುವಂತೆ ಮಾಡಲು ಪ್ರತಿ ವರ್ಷ ಸೆಪ್ಟೆಂಬರ್ 14 ರಂದು ಹಿಂದಿ ದಿವಸ್/ರಾಜಭಾಷಾ ದಿವಸ್ ಆಚರಿಸುತ್ತದೆ.

Kannada grahakara koota to trend #GOIMakeMyLanguageOfficial on Sept 14 Hindi Divas

ಭಾಷಾ ವೈವಿಧ್ಯತೆಯಿಂದ ಕೂಡಿದ ಒಕ್ಕೂಟದಲ್ಲಿ ಒಂದು ಭಾಷೆಗೆ ಹೆಚ್ಚು ಮನ್ನಣೆ ಸಿಗುವಂತೆ ಮಾಡುವುದು/ಹಿಂದಿ ಭಾಷೆಯನ್ನು ಹಿಂದಿಯೇತರರ ಮೇಲೆ ಹೇರಿಕೆ ಮಾಡುವುದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ.

ಕೇಂದ್ರ ಸರ್ಕಾರದ ಈ ತಾರತಮ್ಯ ಹಾಗೂ ಅನಗತ್ಯ ಹಿಂದಿ ಹೇರಿಕೆ ವಿರೋಧಿಸಿ ಸಾಮಾಜಿಕ ಜಾಲ ತಾಣ ಟ್ವಿಟ್ಟರ್ ನಲ್ಲಿ ಸೆಪ್ಟೆಂಬರ್ 14ರಂದು ಟ್ವಿಟ್ಟರ್ ಅಭಿಯಾನವನ್ನು ಕನ್ನಡ ಗ್ರಾಹಕ ಕೂಟವು ಹಮ್ಮಿಕೊಂಡಿದೆ.

ಟ್ವಿಟ್ಟರ್ ಅಭಿಯಾನದಲ್ಲಿ ಭಾಗವಹಿಸುವ ಮೂಲಕ ಹಿಂದಿ ಹೇರಿಕೆಯನ್ನು ನಿಲ್ಲಿಸಿ, ಸಂವಿಧಾನದ 8 ಪರಿಚ್ಛೇದದಲ್ಲಿರುವ ಎಲ್ಲಾ ಭಾಷೆಗಳನ್ನು ಒಕ್ಕೂಟದ ಆಡಳಿತ ಭಾಷೆ ಎಂದು ಘೋಷಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸೋಣ ಎಂದು ಕನ್ನಡ ಗ್ರಾಹಕರ ಕೂಟ ಕರೆ ನೀಡಿದೆ.

HashTag-#GOIMakeMyLanguageOfficial
ಸಮಯ : 9:00 AM-12:00 PM
ದಿನಾಂಕ-14 ಸೆಪ್ಟೆಂಬರ್
(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kannada grahakara koota set to trend #GOIMakeMyLanguageOfficial on Sept 14 to protest against Hindi Divas. Hindi divas will be celebrated across India to promote the Hindi language.
Please Wait while comments are loading...