ರಸ್ತೆ ಅಪಘಾತ : ಬಿಸಿಲೆ ಚಿತ್ರದ ನಿರ್ದೇಶಕ ಸಾವು

Posted By:
Subscribe to Oneindia Kannada

ಬೆಂಗಳೂರು, ಜನವರಿ 11 : ಬೆಂಗಳೂರಿನಲ್ಲಿ ಸಂಭವಿಸಿದ ರಸ್ತೆ ಅಪಘಾತದಲ್ಲಿ 'ಬಿಸಿಲೆ' ಚಿತ್ರದ ನಿರ್ದೇಶಕ ಸಂದೀಪ್ ಎಸ್.ಗೌಡ ಅವರು ಮೃತಪಟ್ಟಿದ್ದಾರೆ. ಬೆಂಗಳೂರು ವಿವಿ ಆವರಣದಲ್ಲಿ ಈ ಅಪಘಾತ ನಡೆದಿದೆ. ಕಾಮಾಕ್ಷಿ ಪಾಳ್ಯ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಚಿತ್ರೀಕರಣಕ್ಕೆಂದು ಸೋಮವಾರ ಮುಂಜಾನೆ ಬೈಕ್‌ನಲ್ಲಿ ತೆರಳುವ ಸಂದರ್ಭದಲ್ಲಿ ಆಯತಪ್ಪಿ ಬಿದ್ದು, ಸಂದೀಪ್ (38) ಮೃತಪಟ್ಟಿದ್ದಾರೆ. ಸಂದೀಪ್ ರಾಜರಾಜೇಶ್ವರಿ ನಗರ ಸಮೀಪದ ಬೆಮಲ್ ಲೇಔಟ್ ನಿವಾಸಿ. [ವರ್ಷಾಂತ್ಯಕ್ಕೆ ನೆನಪು: ಚಿತ್ರರಂಗದಿಂದ ಕಣ್ಮರೆಯಾದ ಸೆಲೆಬ್ರಿಟಿಗಳು]

sandeep s gowda

ಬೆಂಗಳೂರು ವಿಶ್ವವಿದ್ಯಾಲಯದ ಆವರಣದ ರೈಲ್ವೆ ಹಳಿಯ ಸಮೀಪ ಮುಂಜಾನೆ 3.30ರ ಸುಮಾರಿಗೆ ಈ ಅಪಘಾತ ನಡೆದಿದೆ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಶವದ ಮರಣೋತ್ತರ ಪರೀಕ್ಷೆ ನಡೆಸಿ, ಶವವನ್ನು ಕುಟುಂಬದವರಿಗೆ ಹಸ್ತಾಂತರ ಮಾಡಲಾಗಿದೆ.

ಸಂದೀಪ್ ಅವರು ದಿಗಂತ್ ಮತ್ತು ಜೆನ್ನಿಫರ್ ಕೊತ್ವಾಲ್ ಅಭಿನಯದ 'ಬಿಸಿಲೆ' ಚಿತ್ರವನ್ನು ನಿರ್ದೇಶನ ಮಾಡಿದ್ದರು. ಚಿತ್ರ ಸಾಹಿತಿಯಾಗಿ, ಸಂಭಾಷಣೆಕಾರರಾಗಿ 10 ವರ್ಷಗಳಿಂದ ಚಿತ್ರರಂಗದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.

ಸಂದೀಪ್ ಅವರ ತಂದೆಯೂ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ತಾಯಿಯೊಂದಿಗೆ ಸಂದೀಪ್ ಬೆಮೆಲ್ ಲೇಔಟ್‌ನಲ್ಲಿ ವಾಸವಾಗಿದ್ದರು. ಸಂದೀಪ್ ಅವರ ಅಣ್ಣ ವಿದೇಶದಲ್ಲಿ ನೆಲೆಸಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada film director Sandeep S Gowda killed in road accident near Bangalore university campus on Monday morning. Sandeep directed Bisile movie.
Please Wait while comments are loading...