ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಾಶ್ಮೀರಿ ಪಂಡಿತರ ನೋವು ನರಳಾಟ ಕುರಿತ ಪುಸ್ತಕ

By Prasad
|
Google Oneindia Kannada News

ಬೆಂಗಳೂರು, ಅಕ್ಟೋಬರ್ 31 : ನವೆಂಬರ್ 1ನೇ ತಾರೀಖು, ಭಾನುವಾರ, 60ನೇ ಕನ್ನಡ ರಾಜ್ಯೋತ್ಸವದ ದಿನದಂದು ಸಂಜೆ 5.30 ಗಂಟೆಗೆ ಕನ್ನಡ ಸಾಹಿತ್ಯ ಪರಿಷತ್ನಲ್ಲಿ ಹೊಸ ಅನುವಾದಿತ ಪುಸ್ತಕ "ಕದಡಿದ ಕಣಿವೆ : ಕಾಶ್ಮೀರಿ ಪಂಡಿತರ ನೋವು-ನರಳಾಟ" ಬಿಡುಗಡೆಯಾಗುತ್ತಿದೆ.

2013ರಲ್ಲಿ ಇಂಗ್ಲಿಷ್ ನಲ್ಲಿ ಬಿಡುಗಡೆಯಾದ ಈ ಪುಸ್ತಕದ ಮೂಲ ಲೇಖಕರು ಖ್ಯಾತ ಪತ್ರಕರ್ತ ಹಾಗೂ ಲೇಖಕರಾದ ರಾಹುಲ್ ಪಂಡಿತ್ ಅವರು. ಈ ಪುಸ್ತಕ (Our Moon Has Blood Clots - The Exodus of the Kashmiri Pandits) ಆಗ ಇಡೀ ದೇಶದ ಗಮನ ಸೆಳೆದಿತ್ತು.

ಪತ್ರಕರ್ತ ಬಿ.ಎಸ್. ಜಯಪ್ರಕಾಶ್ ನಾರಾಯಣ್ ಅವರು ಈ ಪುಸ್ತಕವನ್ನು ಕನ್ನಡಕ್ಕೆ ತಂದಿದ್ದು, ಕೃತಿಯನ್ನು ಜಯನಗರ 3ನೇ ಬ್ಲಾಕ್ ನಲ್ಲಿರುವ ವಸಂತ ಪ್ರಕಾಶನದ ಮುರಳಿ ಅವರು ಪ್ರಕಟಿಸಿದ್ದಾರೆ.

Kannada book on plights of Kashmir Pandits

ನ. 1ನೇ ಸಂಜೆ ನಡೆಯುವ ಕಾರ್ಯಕ್ರಮದಲ್ಲಿ ಆರ್.ಕೆ. ಮಟ್ಟು (ಅಧ್ಯಕ್ಷರು. ಕಾಶ್ಮೀರಿ ಪಂಡಿತರ ಒಕ್ಕೂಟ, ಬೆಂಗಳೂರು ಮತ್ತು ಹಿರಿಯ ಪತ್ರಕರ್ತರು), ಕೆ ಸಿ ರಘು (ಬಹುಮುಖೀ ಚಿಂತಕರು), ಸೂರ್ಯಪ್ರಕಾಶ್ ಪಂಡಿತ್ (ಸಂಸ್ಕೃತಿ ಚಿಂತಕರು) ಮತ್ತು ಡಾ. ಜಿ ಬಿ ಹರೀಶ (ಸಂಸ್ಕೃತಿ ಚಿಂತಕರು) ಅವರು ಭಾಗವಹಿಸುತ್ತಿದ್ದಾರೆ.

ಸ್ಥಳ : ಶ್ರೀ ಕೃಷ್ಣರಾಜ ಪರಿಷನ್ಮಂದಿರ, ಕನ್ನಡ ಸಾಹಿತ್ಯ ಪರಿಷತ್ತು, ಚಾಮರಾಜಪೇಟೆ, ಬೆಂಗಳೂರು - 560 018.

ಅಂದು ನೀವು ದಯಮಾಡಿ ಸಮಾರಂಭಕ್ಕೆ ಬರಬೇಕು, ಜೊತೆಗೆ ಪುಸ್ತಕ ಕೊಂಡು ಓದಬೇಕು ಎಂದು ಜಯಪ್ರಕಾಶ್ ನಾರಾಯಣ್ ಅವರು ಕನ್ನಡಾಭಿಮಾನಿಗಳಿಗೆ ಕೋರಿದ್ದಾರೆ.

English summary
Kannada journalist Jayaprakash Narayan has translated Rahul Pandits, 'Our Moon Has Blood Clots - The Exodus of the Kashmiri Pandits' to Kannada. Book will be released on Kannada Rajyotsava, 1st November, Sunday at Kannada Sahitya Parishat, Chamarajpet, Bengaluru. All are welcome.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X