ಫೆ. 24ರಿಂದ ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ,19: ಕನ್ನಡ ಪುಸ್ತಕ ಪ್ರಾಧಿಕಾರವು ಫೆಬ್ರವರಿ 24 ರಿಂದ 28ರವರೆಗೆ ಒಟ್ಟು ಐದು ದಿನಗಳ ಕಾಲ ನಗರದ ರವೀಂದ್ರ ಕಲಾಕ್ಷೇತ್ರದ ಆವರಣದಲ್ಲಿ 'ರಿಯಾಯಿತಿ ಕನ್ನಡ ಪುಸ್ತಕ ಮಾರಾಟ ಮೇಳ- 2016' ಹಮ್ಮಿಕೊಂಡಿದೆ.

ರಿಯಾಯಿತಿ ಪುಸ್ತಕ ಮೇಳದಲ್ಲಿ ಪ್ರಕಾಶನ ಸಂಸ್ಥೆಗಳು ಹಾಗೂ ಪ್ರದರ್ಶಕರು ಭಾಗವಹಿಸಬಹುದಾಗಿದೆ. ಮಳಿಗೆಯೊಂದಕ್ಕೆ ಒಂದು ಸಾವಿರ ರೂ ಬಾಡಿಗೆ ಹಾಗೂ ಒಂದು ಸಾವಿರ ರೂ ಭದ್ರತಾ ಠೇವಣಿ ಡಿ.ಡಿಯನ್ನು ಪ್ರತ್ಯೇಕ ಪ್ರತ್ಯೇಕವಾಗಿ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಬೆಂಗಳೂರು ಅವರ ಹೆಸರಿನಲ್ಲಿ ಸಲ್ಲಿಸಬೇಕು.['ದೇವರು ಅರೆಸ್ಟ್ ಆದ' ಕಥಾ ಸಂಕಲನ ಬಿಡುಗಡೆಗೆ ತಪ್ಪದೆ ಬನ್ನಿ]

Kannada Book Authority five day book fair from February 24th in Bengaluru

ಈ ಮೇಳದಲ್ಲಿ ಭಾಗಹಿಸಲು ಇಚ್ಫಿಸುವ ಪ್ರಕಾಶಕರು ಮತ್ತು ಪ್ರದರ್ಶಕರು ನಿಗದಿತ ಅರ್ಜಿ ನಮೂನೆಯನ್ನು ಕನ್ನಡ ಪುಸ್ತಕ ಪ್ರಾಧಿಕಾರ ಬೆಂಗಳೂರು ಕಚೇರಿ ಅಥವಾ ಆಯಾ ಜಿಲ್ಲೆಯಲ್ಲಿರುವ ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಚೇರಿಗಳಲ್ಲಿ ಅಥವಾ ಕನ್ನಡ ಪುಸ್ತಕ ಪ್ರಾಧಿಕಾರ ವೆಬ್ ಸೈಟ್ www.kannadapusthakapradhikara.com ನಲ್ಲಿ ಅರ್ಜಿಯನ್ನು ಉಚಿತವಾಗಿ ಪಡೆದುಕೊಳ್ಳಬಹುದು.

ಭರ್ತಿಮಾಡಿದ ಅರ್ಜಿಯನ್ನು ಡಿ.ಡಿ.ಯೊಂದಿಗೆ ಫೆಬ್ರವರಿ 22ರೊಳಗೆ ಆಡಳಿತಾಧಿಕಾರಿಗಳು, ಕನ್ನಡ ಪುಸ್ತಕ ಪ್ರಾಧಿಕಾರ, ಕನ್ನಡ ಭವನ, ಜೆ.ಸಿ. ರಸ್ತೆ, ಬೆಂಗಳೂರು ಇಲ್ಲಿಗೆ ಕಳುಹಿಸಿಕೊಡಬೇಕು. ಬಳಿಕ ಆದ್ಯತೆಯ ಮೇರೆಗೆ ಮಳಿಗೆಗಳನ್ನು ಹಂಚಿಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 080-22484516, 22107764 ಇಲ್ಲಿ ಸಂಪರ್ಕಿಸಬಹುದಾಗಿದೆ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada Book Authority (KBA) will hold a five day book fair from February 24 to 28 on the Ravindra Kalakshetra prmises Bengaluru.Kannada books will be sold at a discount.
Please Wait while comments are loading...