ನಟಿ ಸಂಜನಾಗೆ 28 ಲಕ್ಷ ರು. ವಂಚಿಸಿತೇ ಪ್ರಸಿದ್ಧಿ ಚಿಟ್ ಫಂಡ್ ಸಂಸ್ಥೆ?

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 19: ನಗರದ ಮಲ್ಲೇಶ್ವರಂನಲ್ಲಿರುವ ಪ್ರಸಿದ್ಧಿ ಚಿಟ್ ಫಂಡ್ಸ್ ಕಡೆಯಿಂದ ತಮಗೆ ಸುಮಾರು 28 ಲಕ್ಷ ರು.ಗಳಷ್ಟು ಮೋಸ ಆಗಿದೆ ಎಂದು ಕನ್ನಡ ನಟಿ ಸಂಜನಾ ಅವರು ಆರೋಪಿಸಿದ್ದಾರೆ. ಈ ಬಗ್ಗೆ ಖಾಸಗಿ ಮಾಧ್ಯಮವೊಂದಕ್ಕೆ ನೀಡಿರುವ ಹೇಳಿಕೆಯಲ್ಲಿ ಅವರು ಈ ವಿಚಾರ ಹೊರಗೆಡವಿದ್ದಾರೆ.

ಹುಬ್ಬಳ್ಳಿ ಬ್ಲಫ್ ಮಾಸ್ಟರ್: ಚಿಟ್ ಫಂಡ್ ನಿಂದ 2 ಕೋಟಿ ವಂಚನೆ

ಅವರ ಹೇಳಿಕೆಯ ಪ್ರಕಾರ, ಪ್ರಸಿದ್ಧಿ ಚಿಟ್ ಫಂಡ್ ಸಂಸ್ಥೆಯು ಮಹೇಶ್, ನಿರುಪಮಾ ಮತ್ತಿತರಿಂದ ಆರಂಭವಾಗಿತ್ತು. ತಾವು ಮೂರು ವರ್ಷಗಳಿಂದ ಈ ಸಂಸ್ಥೆಯಲ್ಲಿ ಹಣ ಹೂಡುತ್ತಿದ್ದು, ಪ್ರತಿ ತಿಂಗಳೂ 60ರಿಂದ 75 ಸಾವಿರ ರು.ಗಳಷ್ಟು ಹಣ ನೀಡುತ್ತಿದ್ದೆವು. ಪ್ರತಿ ತಿಂಗಳೂ ಸಂಸ್ಥೆಯ ಏಜೆಂಟ್ ಗಳು ಮನೆಗೆ ಬಂದು ಚೆಕ್ ಪಡೆಯುತ್ತಿದ್ದರು. ಆದರೆ, ಮಾರ್ಚ್ ತಿಂಗಳಿನಿಂದ ಈ ಸಂಸ್ಥೆಯಿಂದ ಏಜೆಂಟರೂ ಬರಲಿಲ್ಲ. ಇದನ್ನು ವಿಚಾರಿಸಲು ಹೊರಟಾಗಲೇ ಈ ಚಿಟ್ ಫಂಡ್ಸ್ ಅವ್ಯವಹಾರ ಬೆಳಕಿಗೆ ಬಂದಿರುವುದು ತಿಳಿದಿದೆ ಎಂದರು.

Kannada actress Sanjana cheated by Prasiddhi Chit fund company in Bengaluru?

ಈ ಚಿಟ್ ಫಂಡ್ ನಲ್ಲಿ ನಾನು ಮಾತ್ರವಲ್ಲದೆ, ಅನೇಕ ಜನರು, ಹಿರಿಯ ನಾಗರಿಕರು ಹಣ ಹೂಡಿಕೆ ಮಾಡಿದ್ದಾರೆ. ಈಗ ಹಣವೂ ಇಲ್ಲ, ಬಡ್ಡಿಯೂ ಇಲ್ಲ ಎನ್ನುವಂತಾಗಿದೆ. ಈಗಾಗಲೇ ಮಲ್ಲೇಶ್ವರಂ ಪೊಲೀಸ್ ಠಾಣೆಯಲ್ಲಿ ಕಂಪನಿಯ ವಿರುದ್ಧ ದೂರು ದಾಖಲಾಗಿತ್ತು. ಈ ಹಿನ್ನೆಲೆಯಲ್ಲಿ, ಪೊಲೀಸರು ಸಂಸ್ಥೆಯ ಎಲ್ಲಾ ಪದಾಧಿಕಾರಿಗಳ, ಮಾಲೀಕರ ಪಾಸ್ ಪೋರ್ಟ್ ಗಳನ್ನು ವಶಪಡಿಸಿಕೊಂಡಿದ್ದರು.

ಆದರೆ, ಪೊಲೀಸರು ಕ್ರಮ ಕೈಗೊಳ್ಳುವಲ್ಲಿ ಭಾರೀ ವಿಳಂಬ ಮಾಡಿದ್ದರಿಂದಾಗಿ ಅವರು ಈಗ ನಾಪತ್ತೆಯಾಗಿದ್ದಾರೆ. ಅವರೆಲ್ಲಿದ್ದಾರೆಂದು ಯಾರಿಗೂ ತಿಳಿಯುತ್ತಿಲ್ಲ. ಇಲ್ಲಿ ಕಚೇರಿಗೆ ಬಂದರೆ, ಇಲ್ಲಿನ ಸಿಬ್ಬಂದಿ ಮಹೇಶ್ ಅವರನ್ನು ಕೇಳಿ, ನಿರುಪಮಾ ಅವರನ್ನು ಕೇಳಿ ಎಂಬಿತ್ಯಾದಿ ಹೆಸರಗಳನ್ನು ಹೇಳುತ್ತಾರೆ. ಆದರೆ, ಇವರು ಹೇಳುವ ಅವರು ಯಾರೂ ಮಾತಿಗೆ ಸಿಗುತ್ತಿಲ್ಲ ಎಂದು ಅವರು ತಿಳಿಸಿದರು.

ಪ್ರಕರಣ ಬೆಳಕಿಗೆ ಬಂದ ಹೊಸತರಲ್ಲಿ ನಾವು ಹೇಳುವ ಎಲ್ಲರೂ, ವಾಟ್ಸಾಪ್ ಮೂಲಕ ಎಲ್ಲರಿಗೂ ಸಂಪರ್ಕದಲ್ಲಿದ್ದರು. ಆದರೆ, ಇತ್ತೀಚೆಗೆ ಅವರು ಸಂಪರ್ಕಕ್ಕೆ ಸಿಗುತ್ತಿಲ್ಲ. ಇದೇ ಈಗ ನಮಗೆಲ್ಲಾ ಆತಂಕ ತಂದಿದೆ ಎಂದು ಅವರು ವಿವರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kannada actress Sanjana has alleged that a Chit fund company named Prasiddhi in Malleshwam, Bengaluru has cheated her Rs. 28 lakhs.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

X