ಮಾತು ಕೊಟ್ಟು ಪೇಚಿಗೆ ಸಿಲುಕಿದ ಬಿಎಸ್ ವೈ, ಮಹದಾಯಿ ಅಖಾಡಕ್ಕೆ ಯಶ್

Posted By:
Subscribe to Oneindia Kannada
   ಯಶ್ ಮಹದಾಯಿ ಅಖಾಡಕ್ಕೆ | Yash Kannada Actor supports Mahadayi Protest in Bengaluru | Oneindia Kannada

   ಬೆಂಗಳೂರು, ಡಿಸೆಂಬರ್ 26: ಮಹದಾಯಿ ಹೋರಾಟ ಕರ್ನಾಟಕ ಬಿಜೆಪಿ ಪಾಲಿಗೆ ಕಗ್ಗಂಟಾಗಿದೆ. ವಿವಾದ ಇತ್ಯರ್ಥ ಮಾಡುತ್ತೇನೆಂದು ಘೋಷಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಇದೀಗ ಪೇಚಿಗೆ ಸಿಲುಕಿದ್ದಾರೆ.

   ಬೆಂಗಳೂರಿನ ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ಕಳೆದ ನಾಲ್ಕೈದು ದಿನಗಳಿಂದ ಮಹದಾಯಿ ಹೋರಾಟಗಾರರ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿದ್ದು, ಇದಕ್ಕೆ ಸ್ಯಾಂಡಲ್ ವುಡ್, ವೈದ್ಯರ ಸಂಘ, ಹಲವು ಕನ್ನಡ ಪರ ಸಂಘಟನೆಗಳು ಈ ಹೋರಾಟಕ್ಕೆ ಸಾಥ್ ನೀಡುವುದಾಗಿ ಘೋಷಿಸಿವೆ. ಇದರಿಂದ ಪ್ರತಿಭಟನೆ ಮತ್ತಷ್ಟು ತೀವ್ರ ಸ್ವರೂಪ ಪಡೆದುಕೊಳ್ಳವ ಎಲ್ಲಾ ಸಾಧ್ಯತೆಗಳಿವೆ.

   ನೀರಿನ ಚಿಂತೆ ಬಿಟ್ಟುಬಿಡಿ, ನಾ ತಂದೆ ತರುವೆ : ಯಡಿಯೂರಪ್ಪ ಘೋಷಣೆ

   ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಮುಂದೆ ನಡೆಯುತ್ತಿರುವ ಮಹದಾಯಿ ಹೋರಾಟದಲ್ಲಿ ಮಂಗಳವಾರ ಮಧ್ಯಾಹ್ನ ಹಲವು ಸ್ಯಾಂಡಲ್ ವುಡ್ ನಟ-ನಟಿಯರು ಭಾಗವಹಿಸಿಲಿದ್ದಾರೆ ಎಂದು ಫಿಲ್ಮ್ ಛೇಂಬರ್ ಅಧ್ಯಕ್ಷ ಸಾ.ರಾ.ಗೋಮಿಂದು ತಿಳಿಸಿದರು.

   ಮಹದಾಯಿ : ಡಿ.27ರಂದು ಉತ್ತರ ಕರ್ನಾಟಕ ಬಂದ್

   ಮುಖ್ಯವಾಗಿ ನಟ ಯಶ್ ಅವರೂ ಸಹ ಮಹದಾಯಿ ಅಖಾಡಕ್ಕೆ ಇಳಿಯಲಿದ್ದು, ಹೋರಾಟಕ್ಕೆ ಮತ್ತಷ್ಟು ಬಲ ಬರಲಿದೆ. ಮತ್ತೊಂದೆಡೆ ಬಿಜೆಪಿ ತಾನು ಕೊಟ್ಟ ಮಾತನ್ನು ಉಳಿಸಿಕೊಳ್ಳಲು ರಾಷ್ಟ್ರೀಯ ನಾಯಕ ಜತೆ ಮಾತುಕತೆಯಲ್ಲಿ ತೊಡಗಿದ್ದಾರೆ.

   ಬಿಜೆಪಿ ಕೋರ್ ಕಮಿಟಿ ಸಭೆ

   ಬಿಜೆಪಿ ಕೋರ್ ಕಮಿಟಿ ಸಭೆ

   ಕರ್ನಾಟಕ ಬಿಜೆಪಿ ಕಚೇರಿ ಮುಂದೆ ನೂರಾರು ರೈತರು ನಾಲ್ಕು ದಿನದಿಂದ ಧರಣಿ ನಡೆಸುತ್ತಿದ್ದು, ಯಡಿಯೂರಪ್ಪ ಆಗಮಿಸಬೇಕು ಎಂದು ಪಟ್ಟು ಹಿಡಿದಿದ್ದಾರೆ. ಇದರಿಂದ ಮುಂದಿನ ನಡೆ ಬಗ್ಗೆ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ನಡೆಯಿತು. ಮಹದಾಯಿ ವಿಚಾರದ ಬಗ್ಗೆ ಬಿಎಸ್ ವೈ ರಾಷ್ಟ್ರೀಯ ನಾಯಕರ ಗಮನಕ್ಕೆ ತಂದಿದ್ದು, ಕೂಡಲೇ ಪ್ರತಿಭನಾ ಸ್ಥಳಕ್ಕೆ ಭೇಟಿ ನೀಡುವಂತೆ ಅಮಿಶಾ ಅವರು ಯಡಿಯೂರಪ್ಪಗೆ ತಾಕೀತು ಮಾಡಿದ್ದಾರೆ ಎಂದು ಹೇಳಲಾಗಿದೆ.

   ಬುಧವಾರ ಉತ್ತರ ಕರ್ನಾಟಕ ಬಂದ್

   ಬುಧವಾರ ಉತ್ತರ ಕರ್ನಾಟಕ ಬಂದ್

   ಮಹದಾಯಿ ನದಿ ನೀರು ಬಗೆಹರಿಸುವಂತೆ ನಾಳೆ ಅಂದರೆ ಡಿಸೆಂಬರ್ 27 ರಂದು ಉತ್ತರ ಕರ್ನಾಟಕಕ್ಕೆ ಬಂದ್ ಕರೆ ನೀಡಲಾಗಿದೆ. ಇದಕ್ಕೆ ಸ್ಯಾಂಡಲ್ ವುಡ್ ಸೇರಿದಂತೆ ಹಲವು ಸಂಘಟನೆಗಳು ಬೆಂಬಲ ಸೂಚಿಸಿದ್ದಾರೆ. ಬೆಳಗಾವಿ, ಗದಗ, ಧಾರವಾಡ, ಬಾಗಲಕೋಟೆ ಸೇರಿದಂತೆ ಇತರೆ ಉತ್ತರ ಕರ್ನಾಟಕ ಜಿಲ್ಲೆಗಳು ಬಂದ್ ಆಗಲಿವೆ.

   ಜನವರಿ 10ರಂದು ಮಹದಾಯಿ ಸಮ್ಮೇಳನ

   ಜನವರಿ 10ರಂದು ಮಹದಾಯಿ ಸಮ್ಮೇಳನ

   ಜನವರಿ 10ರಂದು ಬೆಂಗಳೂರಿನಲ್ಲಿ ಮಹದಾಯಿ ಸಮ್ಮೇಳನ ನಡೆಯಲಿದ್ದು, ಇದರಲ್ಲಿ ಪಕ್ಷಾತೀತವಾಗಿ ಜೆಡಿಎಸ್, ಕಾಂಗ್ರೆಸ್ ಮತ್ತು ಬಿಜೆಪಿ ನಾಯಕರು ಭಾಗವಹಿಸಬೇಕೆಂದು ವಾಟಳ್ ನಾಗರಾಜ್ ಆಗ್ರಹಿಸಿದರು.

   ಯಡಿಯೂರಪ್ಪಗೆ ಮುಳುವಾದ ಮಹದಾಯಿ

   ಯಡಿಯೂರಪ್ಪಗೆ ಮುಳುವಾದ ಮಹದಾಯಿ

   ಮಹದಾಯಿ ಸಮಸ್ಯೆಯನ್ನು ಬಗೆಹರಿಸಯೇ ತೀರುತ್ತೇನೆಂದು ಹೇಳಿದ್ದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರಿಗೆ ಮುಳುವಾಗಿದೆ. ಕೇವಲ ಪತ್ರದ ಮೂಲಕ ಮಹದಾಯಿ ಹೋರಾಟಗಾರರ ಬಾಯಿಗೆ ಬೆಣ್ಣೆ ಸವರಲು ಮುಂದಾದರು. ಆದರೆ. ಹೋರಾಟಗಾರರ ಇದಕ್ಕೆ ಕಿವಿಗೊಡದೆ ಕಳೆದ ನಾಲ್ಕು ದಿನಗಳಿಂದ ಬಿಜೆಪಿ ಕಚೇರಿ ಮುಂದೆ ಧರಣಿ ಕುಳಿತ್ತಿದ್ದು, ಸ್ಥಳಕ್ಕೆ ಯಡಿಯೂರಪ್ಪ ಆಗಮಿಸಬೇಕೆಂದು ಪಟ್ಟು ಹಿಡಿದಿದ್ದಾರೆ.

   ಮಹದಾಯಿ ಹೋರಾಟದ ಅಖಾಡಕ್ಕೆ ಯಶ್

   ಮಹದಾಯಿ ಹೋರಾಟದ ಅಖಾಡಕ್ಕೆ ಯಶ್

   ತಮ್ಮ ಯಶೋಮಾರ್ಗದ ಮೂಲಕ ಕೊಪ್ಪಳ ಜಿಲ್ಲೆ ಕೆರೆ ಕಾಯಕಲ್ಪ ನೀಡಿ ಎಲ್ಲರ ಪ್ರಶಂಸೆಗೆ ಪಾತ್ರರಾಗಿರುವ ರಾಕಿಂಗ್ ಸ್ಟಾರ್ ಯಶ್ ಅವರು ಮಹದಾಯಿ ಹೋರಾಟದ ಅಖಾಡಕ್ಕೆ ಇಳಿಯಲಿದ್ದಾರೆ. ಬುಧವಾರ ನಡೆಯಲಿರುವ ಉತ್ತರ ಕರ್ನಾಟಕ ಬದ್ ಗೆ ಬೆಂಬಲ ಸೂಚಿಸಿದ್ದಾರೆ. ಮಲ್ಲೇಶ್ವರಂ ಬಿಜೆಪಿ ಕಚೇರಿ ಮುಂದೆ ನಡೆಯುತ್ತಿರುವ ಹೋರಾಟದ ಸ್ಥಳಕ್ಕೆ ಮಂಗಳವಾರ ಸಂಜೆ ಸ್ವಾಂಡಲ್ ವುಡ್ ನಟ-ನಟಿಯರು ಭೇಟಿ ನೀಡುವ ಸಾಧ್ಯತೆಗಳಿವೆ. ಇದರಲ್ಲಿ ಯಶ್ ಕೂಡ ಇರಲಿದ್ದಾರೆ.

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Karnataka Rakshana Vedike, Jaya Karnataka, doctors' association, sandalwood and many Kannada organizations extend their support to during Mahadayi protest at BJP office Malleshwaram in Bengaluru.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ