ಕಬಾಲಿ ಬ್ಯಾನ್ ಅಗ್ಬೇಕ್ ಬ್ಯಾನ್ ಆಗ್ಬೇಕ್ ಬ್ಯಾನ್ ಆಗ್ಬೇಕ್ : ವಾಟಾಳ್

Posted By:
Subscribe to Oneindia Kannada

ಬೆಂಗಳೂರು, ಜುಲೈ 22: ತಮಿಳಿನ ಸೂಪರ್ ಸ್ಟಾರ್ ರಜನಿಕಾಂತ್ ಅವರ ಕಬಾಲಿ ಚಿತ್ರ ವಿಶ್ವದೆಲ್ಲೆಡೆ ಪ್ರದರ್ಶನ ಕಂಡು ಮಿಶ್ರ ಪ್ರತಿಕ್ರಿಯೆ ಸಿಕ್ಕಿದೆ. ಬೆಂಗಳೂರಿನಲ್ಲಿ ರಜನಿ ಅಭಿಮಾನಿಗಳಿಂದ ಅಭೂತಪೂರ್ವ ಸ್ವಾಗತ ಸಿಕ್ಕಿದೆ. ಆದರೆ, ಕಬಾಲಿ ಪ್ರದರ್ಶನದಿಂದ ಕನ್ನಡ ಹಾಗೂ ಕನ್ನಡ ಚಿತ್ರರಂಗಕ್ಕೆ ಹಾನಿಯಾಗುತ್ತಿದೆ ಎಂದು ಕನ್ನಡ ಚಳವಳಿ ಪಕ್ಷದ ವಾಟಾಳ್ ನಾಗರಾಜ್ ಅವರು ಪ್ರತಿಭಟನೆ ನಡೆಸಿದ್ದಾರೆ.

ಕಬಾಲಿ ಜುಲೈ 22ರಂದು ರೀಲ್ ಹಾಗೂ ರಿಯಲ್ ವರ್ಲ್ಡ್ ನಲ್ಲಿ ಸಕತ್ ಟ್ರೆಂಡ್ ನಲ್ಲಿತ್ತು. ಸಾಮಾಜಿಕ ಜಾಲ ತಾಣಗಳಲ್ಲಿ ಜುಲೈ 12 ಕಬಾಲಿ ಡೇ ಆಗಿ ಮಾರ್ಪಟ್ಟಿತ್ತು. ಬೆಂಗಳೂರಿನ ಶೇಷಾದ್ರಿಪುರದ ನಟರಾಜ ಟಾಕೀಸ್, ಊರ್ವಶಿ ಚಿತ್ರಮಂದಿರಗಳಲ್ಲಿ ಹಬ್ಬದ ವಾತಾವರಣ ಕಂಡು ಬಂದಿತು. [40 ದೇಶಗಳಲ್ಲಿ ರಜನಿ ಕಬಾಲಿ ಕ್ರೇಜ್ ಸೂಪರ್ ಡಾ]

 Kannada activist Vatal Nagaraj takes on Kabali Rajini in real life

ಆದರೆ, ಈ ಕ್ರೇಜ್ ನಿಂದ ಕನ್ನಡಕ್ಕೆ ಹಾನಿಯಾಗುತ್ತ್ತಿದೆ ಎಂದು ವಾಟಾಳ್ ಅವರು ಪ್ರತಿಭಟನೆ ನಡೆಸಿದರು. 'ಕಬಾಲಿ ಬ್ಯಾನ್ ಆಗ್ಬೇಕ್, ಇದು ಕಬಾಲಿ ಅಲ್ಲ ತುಕಾಲಿ' ಕನ್ನಡ ಉಳಿಯಲಿ ಎಂದು ಘೋಷಣೆ ಕೂಗಿದರು. [ಅಪ್ಪಟ ಕನ್ನಡ ಪ್ರೇಮಿ ಬರೆದಿರುವ ಪತ್ರ, ತಪ್ಪದೆ ಓದಿ!]

 Kannada activist Vatal Nagaraj takes on Kabali Rajini in real life

ಕಬಾಲಿ ಭಾವಚಿತ್ರಗಳನ್ನು ಸುಟ್ಟು ಆಕ್ರೋಶ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ತಮಿಳು ಅಭಿಮಾನಿಗಳು ಹಾಗೂ ವಾಟಾಳ್ ಅವರ ಸಂಗಡಿಗರ ನಡುವೆ ಘರ್ಷಣೆ ಉಂಟಾಯಿತು. ಕೂಡಲೇ ಮಧ್ಯಪ್ರವೇಶಿಸಿದ ಪೊಲೀಸರು ಇಬ್ಬರ ನಡುವಿನ ಕಿತ್ತಾಟಕ್ಕೆ ತೆರೆ ಎಳೆದರು. [ಕಬಾಲಿ 'ಬೆಂಕಿ' ಯಲ್ಲಿ ಚಳಿ ಕಾಯಿಸಿಕೊಂಡ ಸ್ಟಾರ್ಸ್]


ಭಾರತದಲ್ಲಿ ಅಷ್ಟೆ ಅಲ್ಲದೆ, ಯುಎಸ್, ಯುಕೆ, ಸಿಂಗಪುರ, ಫ್ರಾನ್ಸ್, ಮಲೇಶಿಯಾ, ಥಾಯ್ಲೆಂಡ್, ಚೀನಾ ಸೇರಿದಂತೆ 40ಕ್ಕೂ ಅಧಿಕ ದೇಶಗಳಲ್ಲಿ 4,000ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನ ಕಂಡಿದೆ. [ವಿಮರ್ಶೆ: 'ಕಬಾಲಿ ಡಾ', 'ನೆರಪ್ಪು ಡಾ' ತುಂಬಾ ನಿಧಾನ ಡಾ!]

ಕರ್ನಾಟಕದಲ್ಲೇ 400 ಕ್ಕೂ ಅಧಿಕ ಸ್ಕ್ರೀನ್ ಗಳಲ್ಲಿ ಪ್ರದರ್ಶನವಾಗಿದೆ. ಕನ್ನಡ ಚಿತ್ರಗಳಿಗೆ ಚಿತ್ರಮಂದಿಗಳು ಸಾಲುತ್ತಿಲ್ಲ ಎಂಬ ಕೊರಗು ಎದ್ದಿರುವ ನಡುವೆ ಈ ರೀತಿ ಬೆಳವಣಿಗೆ ಬಗ್ಗೆ ವಾಟಾಳ್ ಪ್ರಶ್ನಿಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Vatal Nagaraj takes on Kabali Rajinikanth in real life.Vatal Nagaraj and his followers protested in fron to Nataraj Theatre today. Vatal said Tamil movies must not be given much waitage in Karnataka
Please Wait while comments are loading...