ಕಮ್ಮನಹಳ್ಳಿ ಕಾಮುಕರ ವಿರುದ್ಧ ಸಂತ್ರಸ್ತೆ ನುಡಿದಿದ್ದೇನು?

Posted By:
Subscribe to Oneindia Kannada

ಬೆಂಗಳೂರು, ಜನವರಿ 6: ಕಮ್ಮನಹಳ್ಳಿ ಪಕ್ರರಣದಲ್ಲಿ ನಾಲ್ವರು ಕಾಮುಕರು ಸೆರೆಮನೆ ಸೇರಿದ್ದಾರೆ ಆದರೆ ಸಂತ್ರಸ್ತ ಯುವತಿ ಬಳಿಗೆ ಪೊಲೀಸ್ ಇಲಾಖೆ ಧಾವಿಸಿ ಆಕೆಯ ಹೇಳಿಕೆಯನ್ನು ಸಂಗ್ರಹಿಸಿದ್ದಾರೆ.

ಸಂತ್ರಸ್ತ ಯುವತಿ ಮನೆಗೆ ಶುಕ್ರವಾರ ಮಹಿಳಾ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಘಟನೆ ಸಂಬಂಧ ಸಂಪೂರ್ಣ ಮಾಹಿತಿಯನ್ನು ಕಲೆಹಾಕಿದರು. ಯುವತಿ ಕಾಮುಕ ವರ್ತನೆ ನಡೆಸಿದ ಇಬ್ಬರನ್ನು ಮಾತ್ರ ನೋಡಿದ್ದೇನೆ. ಉಳಿದ ನಾಲ್ವರ ಪರಿಚಯ ನನಗಿಲ್ಲ, ಈ ಯುವಕರಿಗೂ ನನಗೂ ಯಾವುದೇ ರೀತಿಯ ಸಂಬಂಧವಿಲ್ಲ, ಹಿಂದೆ ಅವರನ್ನು ನೋಡಿಯೂ ಇಲ್ಲ ಎಂದು ವಿವರಿಸಿದ್ದಾಳೆ.[ಒಂದು ಹಗ್, ಕಿಸ್ ಗಾಗಿ ನಡೆದಿತ್ತಾ ಕಮ್ಮನಹಳ್ಳಿ ಕಿರುಕುಳ?]

kammanahalli incident: what is the reaction of victim girl

ಕಮ್ಮನಹಳ್ಳಿ ಪ್ರಕರಣ ಸಿಸಿಟಿವಿ ದೃಶ್ಯಗಳಿಂದ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿದ್ದಂತೆ ಪೊಲೀಸರು ತೀವ್ರ ಕಾರ್ಯಾಚರಣೆ ನಡೆಸಿ ಹಲವರನ್ನು ಬಂಧಿಸಿದ್ದರು. ತೀವ್ರ ಕಾರ್ಯಾಚರಣೆಯಲ್ಲಿ ಸೋಮಶೇಖರ್ ಎಂಬಾತ ನಿಜವನ್ನು ಒಪ್ಪಿಕೊಂಡು ಅವರ ಸಹಚರರ ಬಗ್ಗೆ ಬಾಯಿಬಿಟ್ಟಿದ್ದನು. ಇದಕ್ಕೆ ಸಂಬಂಧಿಸಿದಂತೆ ಸಂತ್ರಸ್ತೆಯನ್ನು ಪತ್ತೆ ಹಚ್ಚಿದ ಪೊಲೀಸರು ಮಹಿಳಾ ಪೊಲೀಸ್ ಮೂಲಕ ಪೂರ್ಣ ಮಾಹಿತಿ ಕಲೆಹಾಕಿದ್ದಾರೆ.ಅಲ್ಲದೆ ಯುವತಿಯನ್ನು ಠಾಣೆಗೆ ಕರೆಸಿಕೊಂಡು ಆರೋಪಿಯನ್ನು ಗುರುತು ಹಚ್ಚಿದ್ದಾರೆ.[ಕಮ್ಮನಹಳ್ಳಿ ಪುಂಡರನ್ನು ಪೊಲೀಸರು ಬಂಧಿಸಿದ್ದು ಹೇಗೆ?]

ಇನ್ನು ಆರೋಪಿಗಳ ತೀವ್ರ ವಿಚಾರಣೆ ಮುಂದುವರೆದಿದೆ. ಗುರುವಾರ ನ್ಯಾಯಾಧೀಶರ ಮುಂದೆ ಆರೋಪಿಗಳನ್ನು ಹಾಜರು ಪಡಿಸಿದ್ದು, ಜನವರಿ 10ರ ವರೆಗೆ ಅವರನ್ನು ಪೊಲೀಸ್ ವಶಕ್ಕೆ ಪಡೆಯಲಾಗಿದೆ.ಅವರನ್ನು ಬಾಣಸವಾಡಿ ಠಾಣೆಯಲ್ಲಿ ಇರಿಸಿದ್ದು, ವಿಚಾರಣೆ ಮುಂದುವರೆದಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
kammanahalli incident; The police were identified the girl house and they have talk with her. what is the reaction of victim girl
Please Wait while comments are loading...