ಒಂದು ಹಗ್, ಕಿಸ್ ಗಾಗಿ ನಡೆದಿತ್ತಾ ಕಮ್ಮನಹಳ್ಳಿ ಕಿರುಕುಳ?

Posted By:
Subscribe to Oneindia Kannada

ಬೆಂಗಳೂರು, ಜನವರಿ 5: ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ನಡುರಾತ್ರಿ ಯುವತಿಯನ್ನು ಚುಂಬಿಸಿ ದಾರಿಯಲ್ಲಿ ಎಳೆದಾಡಿದ್ದ ಕಾಮುಕರು ಪೊಲೀಸರ ಅತಿಥಿಯಾಗಿದ್ದು ಅವರು ಬಹಳ ದಿನಗಳಿಂದ ಯೋಜನೆ ರೂಪಿಸಿದ್ದರು ಎನ್ನಲಾಗಿದೆ. ಮತ್ತು ಏಕೆ ಅವರು ಹೀಗೆ ಮಾಡಿದರು ಎಂಬುದರ ಸತ್ಯ ಬಯಲಾಗಿದೆ.

ಯುವತಿಯ ಅಪ್ಪುಗೆ ಮತ್ತು ಚುಂಬನಕ್ಕಾಗಿ ಈ ಕೃತ್ಯ ವೆಸಗಿರುವುದಾಗಿ ಆರೋಪಿಗಳು ಪೊಲೀಸರ ಮುಂದೆ ತಪ್ಪು ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ. ಪ್ರಸ್ತುತ ಆರೋಪಿಗಳನ್ನು ರಾಮಮೂರ್ತಿನಗರ ಠಾಣೆಯಿಂದ ಕಮೀಷನರ್ ಕಚೇರಿಗೆ ಸ್ಥಳಾಂತರಿಸಲಾಗಿದೆ. ಅಲ್ಲದೆ ಕಮಿಷನರ್ ಕಚೇರಿಯಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಯುಕ್ತರು ಚರ್ಚೆ ನಡೆಸಿ ನಂತರ ಸಂಜೆ ಐದು ಗಂಟೆ ವೇಳೆಗೆ ಸುದ್ದಿಗೋಷ್ಠಿ ನಡೆಸುವುದಾಗಿ ಆಯುಕ್ತರು ತಿಳಿಸಿದ್ದಾರೆ.[ಕಮ್ಮನಹಳ್ಳಿ ಪ್ರಕರಣ: ಸತ್ಯ ಬಾಯಿಬಿಟ್ಟ ಕಾಮುಕರು]

Kammanahalli incident 5 arrested. What is the main reason

ಈ ಪ್ರಕರಣದಲ್ಲಿ ಒಟ್ಟು ಆರು ಆರೋಪಿಗಳ ಕೈವಾಡವಿದ್ದು, ನಾಲ್ಕು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಲಿನೋ(ಲೆನಿನ್,23) ಲಿಂಗರಾಜಪುರದ ನಿವಾಸಿಯಾಗಿದ್ದು ಬಿ.ಕಾಂ ವ್ಯಾಸಂಗ ಮಾಡುತ್ತಾ ಸಿಟಿಸೆಂಟರ್ ನಲ್ಲಿ ಡೆಲೆವೆರಿ ಬಾಯ್ ಆಗಿದ್ದಾನೆ. ಐಯ್ಯಪ್ಪ ಟಾಟಾ ಎಸಿ ಡೈವರ್ ಹಾಗು ಸಿಟಿ ಸೆಂಟರ್ ನ ಕಾರ್ಮಿಕ, ಸೋಮು ಅಲಿಯಾಸ್ ಚಿನ್ನು ಕಮ್ಮನಹಳ್ಳಿ ನಿವಾಸಿ, ಡೆಲೆವರಿ ಬಾಯ್, ಸುದೇಶ್ ಅಲಿಯಾಸ್ ರಾಜು ಚಿಕ್ಕ ಬಾಣಸವಾಡಿ ನಿವಾಸಿ ಮತ್ತು ಫ್ಲಿಪ್ ಕಾರ್ಟಿನ ಸೆಲ್ಸ್ ಎಕ್ಸ್ ಕ್ಯೂಟೀವ್ ಆಗಿದ್ದ ಇವರನ್ನು ಬಂಧಿಸಿದ್ದು ಇನ್ನು ಜೇಮ್ಸ್ ಮತ್ತು ಪಪ್ಪಿ ಎಂಬುವವರಿಗಾಗಿ ಪೊಲೀಸರು ತೀವ್ರ ಶೊಧಕ್ಕೆ ಮುಂದಾಗಿದ್ದಾರೆ.

Kammanahalli incident 5 arrested. What is the main reason

ಕಮ್ಮನಹಳ್ಳಿ ಸಮೀಪ ಇರುವ ಕುಲ್ಡಪ್ಪ ಸರ್ಕಲ್ ಬಳಿ ಈ ಆರು ಜನ ಯಾವಾಗಲು ಸೇರುತ್ತಿದ್ದರು. ಅಲ್ಲಿ ಎಲ್ಲರು ಕಾಲಕಳೆಯುತ್ತಿದ್ದು, ಪ್ರಕರಣಕ್ಕೊಳಪಟ್ಟ ಯುವತಿಯನ್ನು ಅನೇಕ ಬಾರಿ ನೊಡಿದ್ದಾರೆ. ಆಕೆಯ ಮೇಲೆ ವ್ಯಾಮೊಹಗೊಂಡು ಅವಕಾಶಕ್ಕಾಗಿ ಕಾಯುತ್ತಿದ್ದರು.

Kammanahalli incident 5 arrested. What is the main reason

ಅವರು ಜನವರಿ 1ರಂದು ಸಂಚು ರೂಪಿಸಿ ಕಮ್ಮನಹಳ್ಳಿಯ ಬಿರಿಯಾನಿ ಸ್ಟಾಲ್ ಕಡೆಯಿಂದ ಮನೆಗೆ ಆಟೋದಲ್ಲಿ ಬಂದ ಯುವತಿಯನ್ನು ಅಯ್ಯಪ್ಪ ಮತ್ತು ಲಿನೋ ಹಿಂಬಾಗಲಿಸಿ ಅಪ್ಪುಗೆ ಮತ್ತು ಚುಂಬಿಸಿ ದಾರಿಯಲ್ಲಿ ಎಳೆದಾಡಿ ಪರಾರಿಯಾಗಿದ್ದರು ಎಂದು ಪೊಲೀಸರು ತಿಳಿಸಿದ್ದು, ಕೇವಲ ಅಪ್ಪುಗೆ ಮತ್ತು ಚುಂಬನಕ್ಕಾಗಿ ಕೃತ್ಯ ವೆಸಗಿರುವುದಾಗಿ ಆರೋಪಿಗಳು ಪೊಲೀಸರಿಗೆ ಸ್ಪಷ್ಟ ಪಡಿಸಿದ್ದಾರೆ ಎನ್ನಲಾಗಿದೆ.

ಇನ್ನು ಈ ಪ್ರಕರಣ ದೇಶವ್ಯಾಪಿ ಹಬ್ಬುತ್ತಿದ್ದಂತೆ ಈ ಆರು ಮಂದಿ ತಲೆಮರೆಸಿಕೊಂಡಿದ್ದು, ಇವರಲ್ಲಿ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮತ್ತಿಬ್ಬರು ಆರೋಪಿಗಳಿಗಾಗಿ ತನಿಖೆ ನಡೆಯುತ್ತಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Kammnahalli incident 4 accused arrested. The voyeurs attack reason for Hug and kiss. voyeurs said the police in ramamurthi nagar police station in bengaluru
Please Wait while comments are loading...