ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಂಬಳ ನಿಷೇಧ ಯಾರಿಂದಲೂ ಸಾಧ್ಯವಿಲ್ಲ: ಯು.ಟಿ. ಖಾದರ್

By Ananthanag
|
Google Oneindia Kannada News

ಬೆಂಗಳೂರು, ಜನವರಿ, 24: ಹೈಕೋರ್ಟಿನಲ್ಲಿ ಕಂಬಳ ನಿಷೇಧ ಮುಂದುವರೆದರೆ ಕರಾವಳಿ ಭಾಗದ ಸಚಿವರು ಸೇರಿ ಮುಖ್ಯಮಂತ್ರಿ ಸಿದ್ದರಾಮಯ್ಯನವರೊಂದಿಗೆ ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಬೇಕಾಗುತ್ತದೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಯು.ಟಿ,ಖಾದರ್ ಹೇಳಿದರು.

ಜನವರಿ 28ರಂದು ಹೈಕೋರ್ಟಿನಲ್ಲಿ ಕಂಬಳ ನಿಷೇದದ ಕುರಿತ ವಿಚಾರಣೆಯಿದ್ದು ಇದಕ್ಕೆ ಪ್ರತಿಕ್ರಿಯಿಸಿದ ಖಾದರ್ ಕಂಬಳ ಯಕ್ಷಗಾನ ಸಂಸ್ಕೃತಿಯ ಪ್ರತೀಕ ಕಂಬಳ ಆಚರಣೆಯನ್ನು ಯಾರಿಂದಲು ತಡೆಯಲು ಸಾಧ್ಯವಿಲ್ಲ. ಈಗಾಗಲೇ ಕರಾವಳಿ ಭಾಗದ ಸಚಿವರಾದ ಪ್ರಮೋದ್ ಮಧ್ವರಾಜ್ ಮತ್ತು ರಮಾನಾಥ ರೈ ಅವರು ಕಂಬಳಕ್ಕೆ ಬೆಂಬಲ ಸೂಚಿಸಿದ್ದು, ಕೋರ್ಟಿನಲ್ಲಿ ವಾದ ಮಂಡಿಸಲು ಮಾಹಿತಿ ಮತ್ತು ಸಹಕಾರವನ್ನು ರಾಜ್ಯ ಸರಕಾರ ನೀಡಲಿದೆ. ಅಲ್ಲದೆ ಕೋರ್ಟ್ ಆದೇಶ ನೋಡಿಕೊಂಡು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದಾಗಿ ತಿಳಿಸಿದರು.[ಕೋರ್ಟ್ ಗೆ ಸೆಡ್ಡು, ಮಂಗ್ಳೂರಿನಲ್ಲಿ ಜ.28ರಂದು ಕಂಬಳ!]

Kambala ban will not be anyone say UT Khadar in bengaluru

ಜಲ್ಲಿಕಟ್ಟು ನಿಷೇಧ ತೆರವು ಬಳಿಕ ಕಂಬಳ ಪರ ಎದ್ದಿರುವ ದನಿ ದಿನದಿಂದ ದಿನಕ್ಕೆ ಗಟ್ಟಿಯಾಗುತ್ತಿದ್ದು ಕಂಬಳಕ್ಕೆ ನೀಡಿರುವ ತಡೆಯಾಜ್ಞೆ ವಿಚಾರಣೆ ಹೈಕೋರ್ಟಿನಲ್ಲಿ ಜ.30 ನಿಗದಿಯಾಗಿದ್ದನ್ನು ಆದ್ಯತೆಗನುಗುಣವಾಗಿ ಮುಂಚೆಯೇ ನಡೆಯುವಂತೆ ಕಂಬಳ ಸಮಿತಿ ಮನವಿ ಮಾಡಿತ್ತು ಹೀಗಾಗಿ ಜನವರಿ 28ರಂದು ಕಂಬಳ ವಿಚಾರಣೆ ನಡೆಯಲಿದೆ ಎಂದು ಮೂಡಬಿದಿರೆ ಕಂಬಳ ಸಮಿತಿ ತಿಳಿಸಿದೆ.[ಕಂಬಳ ಉಳಿಸಲು ಮಂಗಳೂರಲ್ಲಿ ಬೃಹತ್ ಹೋರಾಟಕ್ಕೆ ನಿರ್ಧಾರ!]

ಇನ್ನು ಕಂಬಳಕ್ಕೆ ಸಂಬಂಧಿಸಿದಂತೆ ಕಂಬಳ ಸಮಿತಿ, ತುಳುನಾಡ ರಕ್ಷಣಾ ವೇದಿಕೆ ಸೇರಿದಂತೆ ಅನೇಕ ಸಂಘಟನೆಗಳು ಒಗ್ಗೂಡಿದ್ದು, ಕಂಬಳಕ್ಕಾಗಿ ಶಾಂತಿಯುತ ಹೋರಾಟ ನಡೆಸುವುದಾಗಿ ತಿಳಿಸಿವೆ.

English summary
Kambala ban will not be anyone say UT Khadar in bengaluru. If high court continues the kambala ban Coast side minister's discussion to decision with CM Siddaramaiah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X