ನ.12ರಂದು ಕಳಸಾ ಬಂಡೂರಿ ಮಲಪ್ರಭಾ ಜೋಡಣೆ ಹೋರಾಟ ಸಮಿತಿಯಿಂದ ಸಭೆ

Posted By:
Subscribe to Oneindia Kannada

ಬೆಂಗಳೂರು, ನವೆಂಬರ್ 11: ಕಳಸಾ ಬಂಡೂರಿ ಹಾಗೂ ಮಲಪ್ರಭಾ ನದಿಗೆ ಮಹದಾಯಿ ನದಿ ಜೋಡಣೆ ಯೋಜನೆ ಜಾರಿಗಾಗಿ ಆಗ್ರಹಿಸಿ ಬಹುದಿನಗಳಿಂದ ರಾಜ್ಯದಲ್ಲಿ ವಿಭಿನ್ನ ಪ್ರತಿಭಟನೆಗಳು ನಡೆಯುತ್ತಿವೆ.

ಎಷ್ಟೇ ಪ್ರತಿಭಟನೆಗಳನ್ನು ಮಾಡಿದರೂ ಇದುವರೆಗೆ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಮುಂದಿನ ಉಗ್ರ ಹೋರಾಟದ ರೂಪರೇಷೆಗಳ ಬಗ್ಗೆ ಚರ್ಚಿಸಲು ಕಳಸಾ ಬಂಡೂರಿ ಮಲಪ್ರಭಾ ಜೋಡಣಾ ಹೋರಾಟ ಕೇಂದ್ರ ಸಮಿತಿ ನವೆಂಬರ್ 12 ರಂದು ಬೆಂಗಳೂರಿನಲ್ಲಿ ನಿರ್ಣಾಯಕ ಸಭೆಯನ್ನು ಕರೆದಿದೆ.

kalasa banduri Malaprabha alignment Horata Central Committee called meeting on Nov 12th

ಜನ ಸಾಮಾನ್ಯರ ವೇದಿಕೆ ಅಧ್ಯಕ್ಷ ಡಾ. ಡಿ. ಅಯ್ಯಪ್ಪ ಅವರ ಅಧ್ಯಕ್ಷತೆಯಲ್ಲಿ ಈ ನಿರ್ಣಾಯಕ ಸಭೆ ನಡೆಯಲಿದ್ದು, ಕಳಸಾ ಬಂಡೂರಿ ಮಲಪ್ರಭಾ ಜೋಡಣಾ ಹೋರಾಟದ ಮುಂಚೂಣಿ ನಾಯಕರಾದ ವಿಜಯ್ ಕುಲಕರ್ಣಿ, ಅಮೃತ್ ಹಜಾರೆ, ವಿಕಾಸ್ ಸೊಪ್ಪಿನ್, ಶೋಭಾ ಚಲುವಾದಿ, ಇಮಾಮ್ ಸಾಬ್ ಸೇರಿದಂತೆ ಇನ್ನಿತರ 25 ಹೋರಾಟಗಾರರು ಪಾಲ್ಗೊಳ್ಳಲಿದ್ದಾರೆ.

ಸಭೆ ನಡೆಯುವ ಸ್ಥಳ: ಜನ ಸಾಮಾನ್ಯರ ವೇದಿಕೆ ಕರ್ನಾಟಕ, #46, ಅರಿವಿನ ಮನೆ, 3ನೇ ಮುಖ್ಯ ರಸ್ತೆ, ರಾಜೇಶ್ ಹೋಟೇಲ್ ಹಿಂಭಾಗ, ವೈಯ್ಯಾಲಿಕಾವಲ್ ಬೆಂಗಳೂರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Kalasa Banduri Malaprabha alignment Horata Central Committee called meeting for protest preparations on Nov 12th in Bengaluru,

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ