ಕೈಲಾಶ್ ಬಾರ್ ಅಗ್ನಿ ದುರಂತ: ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ!

Posted By: Nayana
Subscribe to Oneindia Kannada
   ಕೆಆರ್ ಮಾರುಕಟ್ಟೆಯಲ್ಲಿನ ಕೈಲಾಶ್ ಬಾರ್ ನಲ್ಲಿ ಅಚಾನಕ್ ಬೆಂಕಿ | Oneindia Kannada

   ಬೆಂಗಳೂರು, ಜನವರಿ 08: ಕೃಷ್ಣರಾಜ ಮಾರುಕಟ್ಟೆ (ಕೆ.ಆರ್ ಮಾರುಕಟ್ಟೆ) ಸಮೀಪದ ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ನಲ್ಲಿ ಸೋಮವಾರ ಮುಂಜಾನೆ ಅಗ್ನಿ ಆಕಸ್ಮಿಕ ಸಂಭವಿಸಿದೆ. ಘಟನೆಯಲ್ಲಿ ಬಾರ್ ನಲ್ಲಿದ್ದ ಐವರು ಸಿಬ್ಬಂದಿಗಳು ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ.

   ನಗರಾಭಿವೃದ್ಧಿ ಸಚಿವ ಕೆ.ಜೆ. ಜಾರ್ಜ್ ಮೃತರ ಕುಟುಂಬಕ್ಕೆ 5 ಲಕ್ಷ ಪರಿಹಾರ ನೀಡುವುದಾಗಿ ಘೋಷಣೆ ಮಾಡಿದ್ದಾರೆ. ಈ ದುರ್ಘಟನೆಯಲ್ಲಿ ಬಾರ್ ನಲ್ಲಿ ಕೆಲಸ ಮಾಡುವ ಐವರು ಸಿಬ್ಬಂದಿ ಬೆಂಕಿಗೆ ಆಹುತಿಯಾಗಿರುವ ದಾರುಣ ಘಟನೆ ನಡೆದಿದೆ. ಸೋಮವಾರ ಮುಂಜಾನೆ 2.30ರ ಸುಮಾರಿಗೆ ಈ ಘಟನೆ ಸಂಭವಿಸಿದ್ದು, ಶಾರ್ಟ್ ಸರ್ಕ್ಯೂಟಿನಿಂದಾಗಿ ಬೆಂಕಿ ತಗುಲಿರುವ ಶಂಕೆ ವ್ಯಕ್ತವಾಗಿದೆ. ಬೆಂಕಿ ಹೊತ್ತಿಕೊಂಡ ಸಂದರ್ಭದಲ್ಲಿ ಬಾರ್ ನ ಸಿಬ್ಬಂದಿಗಳು ನಿದ್ದೆ ಮಾಡುತ್ತಿದ್ದರು ಎಂದು ತಿಳಿದು ಬಂದಿದೆ.

   ಕೆಆರ್ ಮಾರುಕಟ್ಟೆ ಕೈಲಾಶ್ ಬಾರ್ ನಲ್ಲಿ ಬೆಂಕಿ, 5 ಮಂದಿ ದುರ್ಮರಣ

   ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಕೈಲಾಶ್ ಬಾರ್ ಗೆ ಭೇಟಿ

   ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಕೈಲಾಶ್ ಬಾರ್ ಗೆ ಭೇಟಿ

   ವಿಧಿ ವಿಜ್ಞಾನ ಪ್ರಯೋಗಾಲಯ ತಂಡ ಅಗ್ನಿ ಅವಘಡ ನಡೆದ ಕೈಲಾಶ್ ಬಾರ್ ಅಂಡ್ ರೆಸ್ಟೋರೆಂಟ್ ಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಬೆಂಕಿ ಹೊತ್ತಿಕೊಳ್ಳಲು ಯಾವೆಲ್ಲಾ ಕಾರಣಗಳಿದ್ದವು ಎಂಬ ಮಾಹಿತಿಯನ್ನು ಕಲೆ ಹಾಕುತ್ತಿದ್ದಾರೆ. ಕೈಲಾಶ್ ಬಾರ್ ನ ಮಾಲೀಕ ದಯಾಶಂಕರ್ ಹಾಗೂ ಮ್ಯಾನೇಜರ್ ಸೋಮಶೇಖರ್ ವಿರುದ್ಧ ನಿರ್ಲಕ್ಷ್ಯ ಆರೋಪದಡಿ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

    ಮೃತರ ಕುಟುಂಬಕ್ಕೆ ಸಚಿವ ಕೆ.ಜೆ. ಜಾರ್ಜ್ ಇಂದ 5 ಲಕ್ಷ ಘೋಷಿಸಿದ್ದಾರೆ

   ಮೃತರ ಕುಟುಂಬಕ್ಕೆ ಸಚಿವ ಕೆ.ಜೆ. ಜಾರ್ಜ್ ಇಂದ 5 ಲಕ್ಷ ಘೋಷಿಸಿದ್ದಾರೆ

   ಕೈಲಾಶ್ ಬಾರ್ ನಲ್ಲಿ ನಡೆದ ಅಗ್ನಿ ಅವಘಡದಲ್ಲಿ ಮೃತಪಟ್ಟವರ ಕುಟುಂಬಕ್ಕೆ 5ಲಕ್ಷ ರೂ ಹಣವನ್ನು ನೀಡುವುದಾಗಿ ಸಚಿವ ಕೆ.ಜೆ. ಜಾರ್ಜ್ ಘೋಷಣೆ ಮಾಡಿದ್ದಾರೆ. ಘಟನೆ ನಡೆದ ಸ್ಥಳ ಹಾಗೂ ಆಸ್ಪತ್ರೆಗೆ ಭೇಟಿ ನೀಡಿ ಪೋಷಕರೊಂದಿಗೆ ಮಾತನಾಡಿದ ಅವರು, ಮೃತರ ಕುಟುಂಬಕ್ಕೆ ತಲಾ 5 ಲಕ್ಷ ನೀಡುವುದಾಗಿ ಹೇಳಿದರು.

   ಉಸಿರುಗಟ್ಟೆ ಮೂವರ ಸಾವು

   ಉಸಿರುಗಟ್ಟೆ ಮೂವರ ಸಾವು

   ಇಬ್ಬರು ಬೆಂಕಿ ತಗುಲಿ ಸತ್ತಿದ್ದರೆ ಇನ್ನು ಮೂರು ಜನ ಉಸಿರುಗಟ್ಟಿ ಮೃತಪಟ್ಟಿದ್ದಾರೆ. ಬಾರ್ ನಲ್ಲಿ ಯಾವ ರೀತಿಯ ಮುಂಜಾಗೃತಾ ಕ್ರಮವನ್ನು ಅಳವಡಿಸಿದ್ದರು ಎನ್ನುವ ಕುರಿತು ಮಾಹಿತಿ ನೀಡಲು ತಿಳಿಸಿದ್ದೇವೆ. ಬಾರ್ ನಿಂದ ಹೊರ ತೆರಳಲು ಕೇವಲ ಒಂದೇ ಕಡೆಗೆ ಶಟರ್ ಇದೆ. ಒಂದೊಮ್ಮೆ ಇಂತಹ ಘಟನೆಗಳು ಸಂಭವಿಸಿದಲ್ಲಿ ಪರ್ಯಾಯವಾಗಿ ಮಾರ್ಗಗಳು ಬೇಕಾಗುತ್ತದೆ. ಆದರೆ ಅಂತಹ ಯಾವುದೇ ಮಾರ್ಗಗಳು ಗೋಚರಿಸಿಲ್ಲ ಜತೆಗೆ ಬಾರ್ ಕೂಟ ಇಕ್ಕಟ್ಟಾಗಿದೆ. ಹೊಗೆ ಆವರಿಸಿಕೊಂಡ ಕಾರಣ ಮೃತರ ಜೇಬಿನಲ್ಲಿ ಕೀ ಇದ್ದರೂ ಕೂಡ ತೆಗೆಯಲು ಸಾಧ್ಯವಾಗಿಲ್ಲ.- ರಾಮಲಿಂಗಾರೆಡ್ಡಿ, ಗೃಹಸಚಿವ

   ಮಾಲೀಕ, ಮ್ಯಾನೇಜರ್ ನಾಪತ್ತೆ

   ಮಾಲೀಕ, ಮ್ಯಾನೇಜರ್ ನಾಪತ್ತೆ

   ಈ ದುರ್ಘಟನೆಯಲ್ಲಿ ಬಾರ್ ನಲ್ಲಿ ಕೆಲಸ ಮಾಡುವ ಐವರು ಸಿಬ್ಬಂದಿ ಬೆಂಕಿಗೆ ಆಹುತಿಯಾಗಿರುವ ಘಟನೆ ನಡೆದಿದೆ. ರಾಜಾಜಿನಗರದ ನಿವಾಸಿಯಾಗಿರುವ ಸೋಮಶೇಖರ್ ಎನ್ನುವವರು ಬಾರ್ ನಡೆಸುತ್ತಿದ್ದರು. ದಯಾಶಂಕರ್ ಎನ್ನುವವರು ಬಾರ್ ಪರವಾನಗಿಯನ್ನು ಪಡೆದಿದ್ದರು. ದಯಾಶಂಕರ್ ಅವರಿಗೆ ಅನಾರೋಗ್ಯದ ಕಾರಣ ಬಾರ್ ಕಡೆಗೆ ಬರುತ್ತಿರಲಿಲ್ಲ. ಹತ್ತು ವರ್ಷದಿಂದ ಸೋಮಶೇಖರ್ ಅವರು ಬಾರ್ ನ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

   ಕೈಲಾಶ್ ಬಾರ್ ಅಗ್ನಿ ಅವಘಡ: ಬಾರ್ ಮ್ಯಾನೇಜರ್ ನಾಪತ್ತೆ

   ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

   English summary
   Bengaluru Development Minister KJ George announced Rs.5 lakhs compensation for victims family who were died in Kailash bar and restaurant fire tragedy.

   Oneindia ಬ್ರೇಕಿಂಗ್ ನ್ಯೂಸ್,
   ತಾಜಾ ಸುದ್ದಿ ತಕ್ಷಣವೇ ಪಡೆಯಿರಿ