ಹಿಂದೂ ಧರ್ಮ, ಲಿಂಗಾಯತಕ್ಕೆ ವ್ಯಾಖ್ಯಾನವೇ ಇಲ್ಲ: ಕಾಗೋಡು

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 16: ಹಿಂದೂ ಧರ್ಮಕ್ಕೇ ಸರಿಯಾದ ವ್ಯಾಖ್ಯಾಸವಿಲ್ಲ. ಹೀಗಿರುವಾಗ, ಲಿಂಗಾಯತರ ಪ್ರತ್ಯೇಕ ಧರ್ಮದ ಕೂಗು ಸರಿಯಲ್ಲ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ.

ಪ್ರತೇಕ ಲಿಂಗಾಯತ ಧರ್ಮಕ್ಕೆ ಶಿವಕುಮಾರ ಸ್ವಾಮಿಜಿ ಹೇಳಿದ್ದೇನು?

ಈಗಾಗಲೇ ಲಿಂಗಾಯದ ಪ್ರತ್ಯೇಕ ಧರ್ಮದ ಸ್ಥಾನಮಾನಕ್ಕಾಗಿ ನಡೆಯುತ್ತಿರುವ ಹೋರಾಟದ ಬಗ್ಗೆ ಪ್ರತಿಕ್ರಿಯಿಸಿರುವ ಅವರು, ಇದೊಂದು ನಿರರ್ಥಕ ಪ್ರಯತ್ನ ಎಂದು ಬಣ್ಣಿಸಿದರು.

Kagodu Thimmappa scoffs at call for Lingayat religion

ತಮ್ಮ ಮಾತಿಗೆ ಸಮರ್ಥನೆಯನ್ನೂ ನೀಡಿದ ಅವರು, ''ಹಿಂದೂ ಧರ್ಮಕ್ಕೆ ಒಂದು ನಿರ್ದಿಷ್ಟ ವ್ಯಾಖ್ಯಾನವಿಲ್ಲ. ಪ್ರತಿಯೊಬ್ಬ ಜಾತಿಯವನೂ ತನ್ನ ನಂಬಿಕೆಗೆ ತಕ್ಕಂತೆ ಆಚಾರ-ವಿಚಾರ, ಪೂಜೆ, ಪುನಸ್ಕಾರ ಮಾಡುತ್ತಾನೆ. ಅದನ್ನು ಗೌರವಿಸಬೇಕೇ ಹೊರತು ಎಲ್ಲದಕ್ಕೂ ಪ್ರತ್ಯೇಕ ಧರ್ಮದ ಸ್ಥಾನ ಮಾನ ಕೇಳುವುದು ಅರ್ಥವಿಲ್ಲದ ವಿಚಾರ'' ಎಂದಿದ್ದಾರೆ.

ಬಸವಣ್ಣ ಬಹುದೊಡ್ಡ ಸಮಾಜ ಸುಧಾರಕರೇನೋ ಸರಿ. ಆದರೆ, ಅವರ ದೇವರ ಪರಿಕಲ್ಪನೆ, ಅನುಭವ ಮಂಟಪ ಇತ್ಯಾದಿ ವಿಚಾರಗಳಲ್ಲಿ ಭಿನ್ನಾಭಿಪ್ರಾಯಗಳಿವೆ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
While CM Siddaramaiah has been open to the idea of a separate religion status for Lingayats, his senior Minister, Kagodu Thimmappa called it a futile exercise that would serve no purpose.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ