ಶ್ರೀನಿವಾಸ ಶೂಟೌಟ್ ಕೇಸ್ : ಇನ್ನಿಬ್ಬರು ರೌಡಿ ಶೀಟರ್ ಗಳ ಬಂಧನ

Posted By:
Subscribe to Oneindia Kannada

ಬೆಂಗಳೂರು, ಫೆಬ್ರವರಿ 09 : ಕಡಬಗೆರೆ ಸೀನ ಅವರ ಆಪ್ತ ಕಾಂಗ್ರೆಸ್ ಮುಖಂಡ ಟಾಟಾ ರಮೇಶ್ ​ಗೆ ಕೊಲೆ ಬೆದರಿಕೆ ಹಾಗೂ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಪ್ರಕರಣಕ್ಕೆ ಸಂಬಂಧಿಸಿದಂತೆ, ಗುರುವಾರದಂದು ಕೊತ್ತನೂರು ಪೊಲೀಸರು ಇಬ್ಬರು ರೌಡಿ ಶೀಟರ್ ಗಳನ್ನು ಬಂಧಿಸಿದ್ದಾರೆ ಎಂದು ಡಿಸಿಪಿ ಹರ್ಷ ಹೇಳಿದ್ದಾರೆ.

ಈ ನಡುವೆ ಈಗಾಗಲೇ ಬಂಧಿತ ರೌಡಿ ಸೈಯದ್ ಅಮಾನ್ ಅಲಿಯಾಸ್ ಬಚ್ಚನ್ ಸೇರಿ 9 ಆರೋಪಿಗಳನ್ನು ನ್ಯಾಯಾಲಯವು 14 ದಿನ ಪೊಲೀಸ್ ಕಸ್ಟಡಿಗೆ ಒಪ್ಪಿಸಿದೆ. ಸದ್ಯ ಎಲ್ಲರನ್ನು ಯಲಹಂಕ ಪೊಲೀಸರ ವಿಚಾರಣೆ ನಡೆಸಿದ್ದಾರೆ. ಅಗ್ನಿ ಶ್ರೀಧರ್ ಅವರಿಗೆ ಸಾಗರ್ ಅಪೊಲೋ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆಸಲಾಗಿದೆ.[ಶೂಟೌಟ್ ಕೇಸ್ : 'ಅಗ್ನಿ' ಶ್ರೀಧರ್ ಆರೋಪಿ ನಂ. 8]

ಜೀವ ಬೆದರಿಕೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ರೌಡಿಗಳಾದ ಕೆ.ಎಸ್.ರೋಹಿತ್ ಅಲಿಯಾಸ್ ಒಂಟೆ ಹಾಗೂ ಸುನೀಲ್ ಅಲಿಯಾಸ್ ಸೈಲೆಂಟ್ ಸುನಿ ಎಂಬಾತನನ್ನು ಯಲಹಂಕ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿ ವಶಕ್ಕೆ ಕೋರಿದ್ದರು. ಇದಾದ ಬಳಿಕ ವಿಚಾರಣೆ ಸಂದರ್ಭದಲ್ಲಿ ರೋಹಿತ್ ಅವರು ಇನ್ನಿಬ್ಬರು ಸಹಚರರ ಬಗ್ಗೆ ಮಾಹಿತಿ ನೀಡಿದ್ದರು. ಮುಂದೇನಾಯ್ತು?..

ಒಬ್ಬ ಶೂಟರ್ ಪತ್ತೆ

ಒಬ್ಬ ಶೂಟರ್ ಪತ್ತೆ

ಇಲ್ಲಿ ತನಕ ಶೂಟೌಟ್ ಹಾಗೂ ಬೆದರಿಕೆ ಪ್ರಕರಣದ ಸಂಚು ರೂಪಿಸಿದವರು, ಸುಪಾರಿ ಕೊಟ್ಟವರ ಬಗ್ಗೆ ಪೊಲೀಸರು ಪತ್ತೆ ಹಚ್ಚಿದ್ದಾರೆ. ಆದರೆ, ಕಪ್ಪು ಬಣ್ಣದ ಪಲ್ಸರ್ ನಲ್ಲಿ ಬಂದು ಕಡಬಗೆರೆ ಸೀನನ ಮೇಲೆ ಗುಂಡಿನ ದಾಳಿ ನಡೆಸಿದವರ ಪತ್ತೆಯಾಗಿಲ್ಲ. ಬೈಕ್ ಹಿಂಬದಿ ಸವಾರ ಎಂದು ಒಬ್ಬನನ್ನು ಶಂಕಿಸಿ ವಿಚಾರಣೆ ನಡೆಸಲಾಗಿದೆ.

ಹೇಮಂತ್ ನಿಂಬಾಳ್ಕರ್ ಕರೆ

ಹೇಮಂತ್ ನಿಂಬಾಳ್ಕರ್ ಕರೆ

ಗುಂಪು ಕಟ್ಟಿಕೊಂಡು ಬಂದು ಬೆದರಿಕೆ ಒಡ್ಡುವವರ ವಿರುದ್ಧ ಸಾರ್ವಜನಿಕರು ಧೈರ್ಯವಾಗಿ ಸ್ಥಳೀಯ ಠಾಣೆಗೆ ದೂರು ಕೊಡಿ. ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ತೆಗೆದುಕೊಳ್ಳಲಾಗುತ್ತದೆ, ಇಂಥವರ ಬಗ್ಗೆ ಧೈರ್ಯವಾಗಿ ಪೊಲೀಸರಿಗೆ ತಿಳಿಸಿ ಎಂದು ನಾಗರಿಕರಿಗೆ ಎಂದು ಎಸಿಪಿ ಹೇಮಂತ್ ನಿಂಬಾಳ್ಕರ್ ಕರೆ ನೀಡಿದ್ದಾರೆ.

ಕೇಬಲ್ ಕುಮಾರ ಹಾಗೂ ಲಕ್ಕಸಂದ್ರ ವಿಜಿ ಬಂಧಿತರು

ಕೇಬಲ್ ಕುಮಾರ ಹಾಗೂ ಲಕ್ಕಸಂದ್ರ ವಿಜಿ ಬಂಧಿತರು

ಕಡಬಗೆರೆ ಶ್ರೀನಿವಾಸ್ ಶೂಟೌಟ್ ಘಟನೆ ನಂತರ ರೋಹಿತ್ ಅಲಿಯಾಸ್ ಒಂಟೆ ಸಹಚರರಾದ ವಿಜಿ ಹಾಗೂ ಕುಮಾರ ಅವರು ಗೋವಾಕ್ಕೆ ತೆರಳಿ ತಲೆ ಮರೆಸಿಕೊಂಡಿದ್ದರು. ಗುರುವಾರ ಜಿಕೆವಿಕೆ ಬಳಿ ಬ್ಯಾಟರಾಯನಪುರದಲ್ಲಿ ಅಡ್ಡಾಡುತ್ತಿದ್ದ ಇವರನ್ನು ಪೊಲೀಸರು ಚೇಸ್ ಮಾಡಿ ಹಿಡಿದಿದ್ದಾರೆ. ಕೇಬಲ ಕುಮಾರ ಹಾಗೂ ಲಕ್ಕಸಂದ್ರ ವಿಜಿ ಬಳಿ ಇದ್ದ ಮಾರಾಕಾಸ್ತ್ರಗಳನ್ನು ಕೊತ್ತನೂರು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಚ್ಚನ್ ಗ್ಯಾಂಗ್ ಎಲ್ಲಿದೆ?

ಬಚ್ಚನ್ ಗ್ಯಾಂಗ್ ಎಲ್ಲಿದೆ?

ಜೀವ ಬೆದರಿಕೆ ಪ್ರಕರಣದಲ್ಲಿ ವಶಕ್ಕೆ ಪಡೆದಿದ್ದ ರೌಡಿಗಳಾದ ಕೆ.ಎಸ್.ರೋಹಿತ್ ಅಲಿಯಾಸ್ ಒಂಟೆ ಹಾಗೂ ಸುನೀಲ್ ಅಲಿಯಾಸ್ ಸೈಲೆಂಟ್ ಸುನಿ ಎಂಬಾತನನ್ನು ಯಲಹಂಕ ಪೊಲೀಸರು ಕೋರ್ಟ್​ಗೆ ಹಾಜರುಪಡಿಸಿ ವಶಕ್ಕೆಪಡೆದಿದ್ದಾರೆ.

ಅದೇ ರೀತಿ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹ ಆರೋಪದಡಿ ಕೆ.ಎಸ್. ಲೇಔಟ್ ಠಾಣೆ ಪೊಲೀಸರು ಬಂಧಿಸಿದ್ದ ಸೈಯದ್ ಅಲಿಯಾಸ್ ಬಚ್ಚನ್ ಹಾಗೂ ಆತನ ಸಹಚರರಾದ ಬ್ರಿಜ್​ಭೂಷಣ್ ಹುಸೇನ್ ಪಾಂಡೆ, ರಾಮ್ ಕುಮಾರ್ ರಾಯ್, ಸಾಬೀರ್ ಅಲಿ, ತನ್ವೀರ್, ಅರುಣ್​ಕುಮಾರ್, ವರುಣ್​ಕುಮಾರ್​ನನ್ನು 14 ದಿನಗಳ ಕಾಲ ಕಸ್ಟಡಿಗೆ ನೀಡಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ - ನೋಂದಣಿ ಉಚಿತ!

English summary
Kadabagere Srinivas Shoot out and Tata Ramesh case Kothanur Police today detained two more Rowdy Sheeters. Bachchan and other 9 are sent to judicial custody.
Please Wait while comments are loading...