ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್ ಎಸ್‌ ಎಸ್‌ ಹಿರಿಯ ಪ್ರಚಾರಕ ಸೂರ್ಯನಾರಾಯಣ ರಾವ್ ನಿಧನ

By Ananthanag
|
Google Oneindia Kannada News

ಬೆಂಗಳೂರು, ನವೆಂಬರ್ 19: ಕರ್ನಾಟಕದವನ್ನು ಪ್ರತಿನಿಧಿಸಿದ್ದ ಆರ್ ಎಸ್ ಎಸ್ ಹಿರಿಯ ಪ್ರಚಾರಕ ಸೂರ್ಯ ನಾರಾಯಣರಾವ್ ನಿಧನ. ಪ್ರಧಾನಿ ಸೇರಿದಂತೆ ಅನೇಕ ಪ್ರಮುಖರು ನಮನ ಸಲ್ಲಿಸಿದ್ದಾರೆ.

ಅವರು ಉಸಿರಾಟ ತೊಂದರೆಯಿಂದ ಬೆಂಗಳೂರಿನ ಆಸ್ಪತ್ರೆಯಲ್ಲಿ ಸುಮಾರು ದಿನದಿಂದ ದಾಖಲಾಗಿದ್ದರು. ಪ್ರಸ್ತುತ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಬೆಳಗ್ಗೆ ನಿಧನರಾಗಿದ್ದಾರೆ.

surya narayan rao

ಕೆ. ಸೂರ್ಯ ನಾರಾಯಣರಾವ್ ಅವರು ಆ.20. 1924ರಂದು ಮೈಸೂರಿನಲ್ಲಿ ಜನಿಸಿದರು. ನಂತರ ಆರ್‌ ಎಸ್‌ ಎಸ್‌ನ ಸ್ವಯಂ ಸೇವಕರಾಗಿ 1942ರಲ್ಲಿ ಸೇರಿಕೊಂಡರು. ಇವರು ಗಣಿತದಲ್ಲಿ ಬಿಎಸ್ಸಿ ಮುಗಿಸಿದ ನಂತರ ಪೂರ್ಣ ಪ್ರಮಾಣದಲ್ಲಿ ಆರ್ ಎಸ್‌ ಎಸ್‌ನ ಪ್ರಚಾರಕರಾಗಿ ಕರ್ನಾಟಕದಲ್ಲಿ ಸಂಚರಿಸಿದರು.

ಇವರು ಮೊದಲು ಕರ್ನಾಟಕದಲ್ಲಿ ವಿಶ್ವ ಹಿಂದು ಪರಿಷತ್ ಸಂಘಟಕರಾಗಿ 1969ರಲ್ಲಿ ಉಡುಪಿಯ ಗುರೂಜೀ ನೇತೃತ್ವದಲ್ಲಿ ಕಾರ್ಯ ನಿರ್ವಹಿಸಲು ಮುಂದಾದರು. ಸಂಘಟಕರಾಗಿ ದೇಶದೆಲ್ಲದೆ ಧಾರ್ಮಿಕ ಸಂಪ್ರದಾಯ ಮತ್ತು ಭಾರತೀಯ ಮೌಲ್ಯಗಳನ್ನು ಪ್ರಚಾರ ಮಾಡಿದರು.

1970ರ ನಂತರ ದಕ್ಷಿಣ ಭಾರತದ ಮುಖ ಶಾಖೆಗಳಲ್ಲಿ ಕಾರ್ಯ ನಿರ್ವಹಿಸಿದರು. 1971ರಿಂದ 1984ರ ವರೆಗೆ ತಮಿಳು ನಾಡಿನಲ್ಲಿ ಪ್ರಾಂತ್ಯ ಪ್ರಚಾರಕರಾಗಿದ್ದರು. ನಂತರ ಆಂಧ್ಯದಲ್ಲಿ ಕ್ಷೇತ್ರ ಪ್ರಚಾರಕರಾಗಿದ್ದರು. 1900ರ ವರೆಗೆ ಕೇರಳ, ತಮಿಳುನಾಡು, ಕರ್ನಾಟಕದ ವಿವಿಧೆಡೆ ಕಾರ್ಯ ನಿರ್ವಹಿಸಿ ಅಖಿಲ ಭಾರತೀಯ ಸೇವಾ ಪ್ರಮುಖರಾದರು.

ಭಾರತದ ಅಭಿವೃದ್ದಿ ಸೇವಾ ಕಾರ್ಯಕ್ರಮದ ಮೇಲೆ ಹತ್ತು ವರ್ಷಗಳ ಕಾಲ ಅಮೆರಿಕ, ಕೆನಡಾ, ಇಂಗ್ಲೆಂಡ್ , ಜರ್ಮನಿ, ಹಾಲೆಂಡ್, ನಾರ್ವೆ, ಆಫ್ರಿಕಾ ಮುಂತಾದ ದೇಶಗಳಲ್ಲಿ ಭಾರತೀಯ ಹಿಂದೂ ಕಾರ್ಯಕರ್ತರಿಗೆ ತರಬೇತಿ ನೀಡಿದ್ದಾರೆ.

ಇನ್ನು ಇವರು ಅಖಿಲ ಭಾರತ ಕಾರ್ಯಕಾರಿಣಿ ಮಂಡಲ್ ಮತ್ತು ವಿಶ್ವ ಹಿಂದೂ ಪರಿಷತ್, ವನವಾಸಿ ಕಲ್ಯಾಣ ಆಶ್ರಮ, ಆರೋಗ್ಯ ಭಾರತೀಯ ರಾಷ್ಟೀಯ ವೈಧ್ಯಕೀಯ ಸಂಘಟನೆಯ ಸದಸ್ಯರೂ ಆಗಿದ್ದಾರೆ. ಅವರಿಗೆ ಹಲವಾರು ಸೇವಾ ಗೌರವಗಳು ಸಂದಿವೆ.

English summary
K Suryanarayana Rao, Senior RSS leader and a stalwart for the growth of Sangh in karnataka passed away today at Bengaluru. He was ailing for some-time and was admitted in hospital, where he breathed lastly.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X