ಬೆಂಗಳೂರಿಗೆ ಕಾದಿದೆ ನೀರಿನ ಬರ: ಬಿಬಿಸಿ ವರದಿಯಲ್ಲಿ ಎಚ್ಚರಿಕೆ

Posted By: Nayana
Subscribe to Oneindia Kannada

ಬೆಂಗಳೂರು, ಫೆಬ್ರವರಿ 12 : ಕುಡಿಯುವ ನೀರಿನ ಅಭಾವ ಹೊಂದಿರುವ ಜಗತ್ತಿನ 11 ಮಹಾನಗರಗಳ ಸಮಸ್ಯೆಯನ್ನು ಬಿಬಿಸಿ ನ್ಯೂಸ್ ವಾಹಿನಿ ತೆರೆದಿಟ್ಟಿದ್ದು, ಅಂತಹ ಬಾಯಾರಿದ ನಗರಗಳ ಸಾಲಿನಲ್ಲಿ ಬೆಂಗಳೂರು ಕೂಡ ಒಂದಾಗಿದೆ.

ಇನ್ನೂ ಗಂಭೀರ ವಿಷಯವೆಂದರೆ ಹೀಗೆ ವಿಶ್ವದಲ್ಲಿ ನೀರಿನ ಗಂಭೀರ ಕೊರತೆ ಎದುರಿಸುತ್ತಿರ ಬಹುದಾದ 11 ನಗರಗಳ ಪೈಕಿ ಬೆಂಗಳೂರು ವಿಶ್ವದಲ್ಲೇ 2 ನೇ ಸ್ಥಾನದಲ್ಲಿದೆ. ಅಭಿವೃದ್ಧಿ ನಗರೀಕರಣದ ನೆಪದಲ್ಲಿ ನೈಸರ್ಗಿಕ ಸಂಪನ್ಮೂಲಗಳನ್ನು ಕಳೆದುಕೊಂಡಿರುವ ನಗರಗಳು ಮತ್ತು ಅಲ್ಲಿನ ದುಸ್ಥಿತಿ ಕುರಿತು ವಾಹಿನಿ ವರದಿ ಮಾಡಿದೆ. ಬಿಬಿಸಿಯ ವೆಬ್ ಸೈಟ್ ನಲ್ಲಿ11 ನಗರಗಳ ಕಿರುಚಿತ್ರಣ ನೀಡಲಾಗಿದೆ.

ಬೆಂಗಳೂರು ಸುತ್ತ 161 ಹಳ್ಳಿಗಳಿಗೆ ಕಾವೇರಿ ಭಾಗ್ಯ!

ವರದಿ ಪ್ರಕಾರ 2030 ರ ವೇಳೆಗೆ ಜಗತ್ತಿನಾದ್ಯಂತ, ಶೇ.40 ರಷ್ಟು ಶುದ್ಧ ನೀರಿನ ಕೊರತೆ ಎದುರಾಗಲಿದೆ. ನಗರಗಳಿಗೆ ಹರಿದು ಬರುತ್ತಿರುವ ಭಾರಿ ಜನಸಂಖ್ಯೆ, ನೀರಿನ ಸೂಕ್ತನಿರ್ವಹಣೆ ಕೊರತೆ, ನೀರಿನ ಮರುಬಳಕೆ ತಂತ್ರಜ್ಞಾನ ಬಳಕೆ ಮಾಡದಿರುವುದು ಮತ್ತು ಭಾರೀ ಪ್ರಮಾಣದಲ್ಲಿ ನೀರಿನ ಬಳಕೆ ಮಾಡುತ್ತಿರುವ ಕಾರಣ, ಜಗತ್ತಿನ ಹಲವು ನಗರಗಳು ಮುಂದಿನ ದಿನಗಳಲ್ಲಿ ಗಂಭೀರವಾದ ನೀರಿನ ಸಮಸ್ಯೆ ಎದುರಿಸಲಿದೆ ಎಂದು ವರದಿ ಹೇಳಿದೆ.

Just imagine! Bengaluru will go out of water in future

ವರದಿ ಅನ್ವಯ ಮೊದಲ ಸ್ಥಾನದಲ್ಲಿ ಬ್ರೆಜಿಲ್ ಸಾವೋ ಪಾಲೋ ಇದ್ದರೆ, 2 ನೇ ಸ್ಥಾನದಲ್ಲಿ ಬೆಂಗಳೂರು ಮತ್ತು 3 ನೇ ಸ್ಥಾನದಲ್ಲಿ ಚೀನಾ ರಾಜಧಾನಿ ಬೀಜಿಂಗ್ ಇದೆ. ಉಳಿದಂತೆ ಕೈರೋ, ಜಕಾರ್ತಾ, ಮಾಸ್ಕೋ, ಇಸ್ತಾಂಬೂಲ್, ಮೆಕ್ಸಿಕೋ,, ಲಂಡನ್, ಟೋಕಿಯೋ, ಮಿಯಾಮಿ ನಗರಗಳಿವೆ.

ಬೆಂಗಳೂರಿನ ಸಮಸ್ಯೆ: ಬೆಂಗಳೂರು ತಂತ್ರಜ್ಞಾನ ಹಬ್ ಆಗಿ ಬೆಳೆಯುತ್ತಿರುವ ಬೆನ್ನಲ್ಲೇ, ನಗರ ಅಭಿವೃದ್ಧಿ ತ್ವರಿತವಾಗುತ್ತಿದೆ. ಇದು ಸ್ಥಳೀಯ ಆಡಳಿತವನ್ನು ಕಂಗಾಲಾಗಿಸಿದೆ. ಹೆಚ್ಚುತ್ತಿರುವ ಜನಸಂಖ್ಯೆಯಿಂದಾಗಿ ಆಡಳಿತವು ನಗರದ ನೀರು ಮತ್ತು ಚರಂಡಿ ವ್ಯವಸ್ಥೆ ಸುಧಾರಣೆಗೆ ಪರದಾಡುವಂತೆ ಆಗಿದೆ.

ಪರಿಸ್ಥಿತಿಯನ್ನು ಅತ್ಯಂತ ಕೆಟ್ಟದಾಗಿಸಿರುವ ನಗರದ ಪ್ಲಂಬಿಂಗ್ ವ್ಯವಸ್ಥೆ ತುರ್ತಾಗಿ ಉತ್ತಮ ದರ್ಜೆಗೇರಿಸುವ ಅಗತ್ಯವಿದೆ. ನಗರದ ಅರ್ಧದಷ್ಟು ನೀರು ಕೊಳಚೆ ಸೇರುತ್ತದೆ ಎಂದು ವರದಿ ತಿಳಿಸಿದೆ. ಇನ್ನೊಂದೆಡೆ, ಬೆಂಗಳೂರಿನಲ್ಲಿ ಜಲ ಮಾಲಿನ್ಯವೂ ತೀವ್ರವಾಗಿದೆ. ನಗರದ ಕೆರೆಗಳಲ್ಲಿರುವ ಶೇ.೮೫ರಷ್ಟು ನೀರು ಕೇವಲ ನೀರಾವರಿ ಮತ್ತು ಕೈಗಾರಿಕಾ ಉಪಯೋಗಕ್ಕಷ್ಟೇ ಬಳಸಬಹುದು. ಒಂದೇ ಒಂದು ಕೆರೆಯ ನೀರನ್ನು ಕುಡುಯುವುದಕ್ಕೆ ಅಥವಾ ಸ್ನಾನಕ್ಕೆ ಯೋಗ್ಯವಿಲ್ಲ ಎನ್ನಲಾಗಿದೆ. ಹೀಗೆ ವರದಿಯಲ್ಲಿ ಹಲವು ಆತಂಕಕಾರಿ ಅಂಶಗಳು ಒಳಗೊಂಡಿದೆ.

ಭೂಮಿಯ ಮೇಲ್ಮೈ ಮೇಲೆ ಶೇ.70 ರಷ್ಟು ಭಾಗ ನೀರಿನಿಂದ ತುಂಬಿದ್ದರೂ, ಕೇವಲ ಶೇ.3 ರಷ್ಟು ಭಾಗ ಮಾತ್ರ ಕುಡಿಯಬಹುದಾದ ಶುದ್ಧ ನೀರು. ಒಂದು ಶತಕೋಟಿಗೂ ಅಧಿಕ ಮಂದಿ ನೀರಿನ ಕೊರತೆ ಹೊಂದಿದ್ದಾರೆ. ಅಲ್ಲದೆ, ಸುಮಾರು 2.7 ಶತಕೋಟಿ ಜನರು ವರ್ಷದಲ್ಲಿ ಕನಿಷ್ಠ 1 ತಿಂಗಳಾದರೂ ನೀರಿನ ಸಮಸ್ಯಯೆಯಿಂದ ಬಳಲುತ್ತಾರೆ. ಜಗತ್ತಿನ ಪ್ರಮುಖ 500 ನಗರಗಳಲ್ಲಿ ನಡೆದ ಸಮೀಕ್ಷೆಯ ಪ್ರಕಾರ ನಾಲಕ್ರಲ್ಲಿ ಒಂದು ನಗರದಲ್ಲಿ ನೀರಿನ ಅಭಾವ ತುಂಬಾ ಇದೆ ಎಂದು ವರದಿ ಹೇಳಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
United Nations Organization has warned Bengaluru will go out of water in near future. It will be second city in the world, after capetown of South Africa.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ