ಪದ್ಮಾವತಿ ಸಾವು : ವಿಐಪಿ ಚಿತ್ರ ತಂಡದ ವಿರುದ್ಧ ಪ್ರಕರಣ ದಾಖಲು

Posted By:
Subscribe to Oneindia Kannada

ಬೆಂಗಳೂರು, ಜನವರಿ 10 : ಕ್ರೇಜಿ ಸ್ಟಾರ್ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಅಭಿನಯದ 'ವಿಐಪಿ' ಚಿತ್ರದ ಚಿತ್ರೀಕರಣದ ಸಂದರ್ಭದಲಿ ಸಹನಟಿಯೊಬ್ಬರು ಸಾವನ್ನಪ್ಪಿದ ಘಟನೆಗೆ ಸಂಬಂಧಿಸಿದಂತೆ ಚಿತ್ರತಂಡದ ವಿರುದ್ಧ ಪ್ರಕರಣ ದಾಖಲಾಗಿದೆ.

ಜ್ಯೂನಿಯರ್ ಆರ್ಟಿಸ್ಟ್ ಪದ್ಮಾವತಿ ಸಾವಿನ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ದೇಶಕ ನಂದ ಕಿಶೋರ್ ಸೇರಿದಂತೆ ಏಳು ಜನರ ವಿರುದ್ಧ ನಿರ್ಲಕ್ಷ್ಯ, ಜಾತಿನಿಂದನೆ ಪ್ರಕರಣ ದಾಖಲಾಗಿದೆ.

Junior artist Padmavati death : Case filed against Director Nanda Kishore VIP film crew

ತಮಿಳಿನ ಯಶಸ್ವಿಯಾದ ಧನುಷ್ ಅಭಿನಯದ 'ವೇಲೈ ಇಲ್ಲಾದ ಪಟ್ಟಧಾರಿ' (ವಿಐಪಿ) ಚಿತ್ರ ಕನ್ನಡ ರಿಮೇಕ್ ನಲ್ಲಿ ರವಿಚಂದ್ರನ್ ಅವರ ಪುತ್ರ ಮನೋರಂಜನ್ ಹೀರೋ ಆಗಿದ್ದಾರೆ. ನಂದಕಿಶೋರ್ ನಿರ್ದೇಶಿಸುತ್ತಿರುವ 'ವಿಐಪಿ' ಚಿತ್ರದ ಶೂಟಿಂಗ್, ಬೆಂಗಳೂರಿನ ಹೊರವಲಯದಲ್ಲಿರುವ ರಾಜಾನುಕುಂಟೆ ಪೊಲೀಸ್ ಠಾಣೆ ವ್ಯಾಪ್ತಿಯ ಅವಲಹಳ್ಳಿ ಬಳಿ ನಡೆಯುವಾಗ ಈ ದುರಂತ ಸಂಭವಿಸಿತ್ತು.

ಪ್ರೇಸ್ಟಿಜ್ ಸಂಸ್ಥೆಗೆ ಸೇರಿರುವ ನಿರ್ಮಾಣ ಹಂತದ ಕಟ್ಟಡದಲ್ಲಿ ಚಿತ್ರೀಕರಣ ನಡೆಸಲು ಅನುಮತಿ ಕೂಡಾ ಪಡೆದಿರಲಿಲ್ಲ ಎನ್ನಲಾಗಿದೆ. ಮೃತ ಪದ್ಮಾವತಿ ಅವರ ತಾಯಿ ಲಕ್ಷ್ಮಮ್ಮ ನೀಡಿದ ದೂರಿನ ಮೇರೆಗೆ ಚಿತ್ರದ ನಿರ್ದೇಶಕ, ಛಾಯಾಗ್ರಾಹಕ ಸತ್ಯ ಹೆಗ್ಡೆ, ಯೂನಿಟ್ ಮ್ಯಾನೇಜರ್ ಸೇರಿದಂತೆ ಏಳು ಜನರ ವಿರುದ್ಧ ಐಪಿಸಿ ಸೆಕ್ಷನ್ 143, 304 ಸೇರಿದಂತೆ ವಿವಿಧ ಸೆಕ್ಷನ್ ಗಳಡಿಯಲ್ಲಿ ಪ್ರಕರಣ ದಾಖಲಾಗಿದೆ.

ಪದ್ಮಾವತಿ ಅವರು ಚಿತ್ರೀಕರಣದ ಸಮಯದಲ್ಲೇ ಬಿದ್ದು ಸತ್ತಿದ್ದಾರಾ? ಅಥವಾ ಚಿತ್ರತಂಡ ಶೂಟಿಂಗ್ ಮುಗಿಸಿ ಹೊರಟಮೇಲೆ ಈ ಅವಘಡ ನಡೆದಿದೆಯಾ? ಎಂಬ ಯಾವ ಮಾಹಿತಿಯೂ ಇನ್ನೂ ಹೊರಬಂದಿಲ್ಲ.ಆದರೆ, ಘಟನೆ ನಡೆದ ಬಳಿಕವೂ ಚಿತ್ರಕ್ಕೆ ಸಂಬಂಧಿಸಿದವರು ಮೃತ ಪದ್ಮಾವತಿ ಅವರ ಕುಟುಂಬದವರನ್ನು ಮಾತನಾಡಿಸಲು ಬಂದಿಲ್ಲ ಎಂಬ ಆರೋಪವಿದೆ.(ಒನ್ಇಂಡಿಯಾ ಸುದ್ದಿ)

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Rajanukunte police have registered a case against director Nanda Kishor and six other members of the VIP fim crew in connection with the death of junior artist Padmavati. A junior artiste was found dead under mysterious circumstances at the shooting spot of Kannada remake of Tamil superhit film VIP
Please Wait while comments are loading...