ಪಬ್ಲಿಕ್ ಟಿವಿ ರಂಗಣ್ಣ ವಿರುದ್ಧ ದೊಡ್ಡ ಮೊತ್ತಕ್ಕೆ ರವಿ ಬೆಳಗೆರೆ ಕೇಸ್

Posted By:
Subscribe to Oneindia Kannada

ಬೆಂಗಳೂರು, ಮಾರ್ಚ್ 12 : ಟಿಆರ್ ಪಿ ದೋಚುವ ಹಂಬಲದಲ್ಲಿ ನನ್ನ ಪತ್ನಿ, ಮನೆ ಎಲ್ಲ ತೋರಿಸಿದರು. ಸರಿ, ಆದರೆ ನನ್ನ ಹತ್ತು ವರ್ಷದ ಮಗ ಏನು ಮಾಡಿದ್ದ? ಅಪ್ರಾಪ್ತ ವಯಸ್ಸಿನ ಮಗುವಿನ ಚಿತ್ರ ತೋರಿಸೋದು ಅಪರಾಧ. ಈಗ ನಾನು ರಂಗನ ಮೇಲೆ ತುಂಬಾ ದೊಡ್ಡ ಮೊತ್ತಕ್ಕೆ ಕೇಸ್ ಹಾಕುತ್ತಿದ್ದೇನೆ. ಯಾಕೆ ಬಿಡಲಿ, ಹೇಳಿ. ಈ ವಿಷಯದಲ್ಲಿ ಕೋರ್ಟ್ ತುಂಬಾ ಕಠಿಣವಾಗಿ ನಡೆದುಕೊಳ್ಳುತ್ತದೆ. ರಂಗನಿಗೊಂದು ಗತಿ ಕಾಣಿಸುತ್ತೇನೆ.

ಹಾಯ್ ಬೆಂಗಳೂರ್ ಸಂಪಾದಕ ರವಿ ಬೆಳಗೆರೆ ನೋಟ್ಸ್ ಫ್ರಮ್ ಸೆಂಟ್ರಲ್ ಜೈಲ್

- ಹೀಗೆ ತಮ್ಮ ಫೇಸ್ ಬುಕ್ ನಲ್ಲಿ ಬರೆದುಕೊಂಡಿದ್ದಾರೆ ಪತ್ರಕರ್ತ ಹಾಗೂ ಹಾಯ್ ಬೆಂಗಳೂರ್ ವಾರಪತ್ರಿಕೆ- ಓ ಮನಸೇ ಪಾಕ್ಷಿಕದ ಸಂಪಾದಕರಾದ ರವಿ ಬೆಳಗೆರೆ. ಪಬ್ಲಿಕ್ ಟಿವಿಯ ಎಚ್.ಆರ್.ರಂಗನಾಥ್ ವಿರುದ್ಧ ಪ್ರಕರಣ ದಾಖಲಿಸುವುದಾಗಿ, ಈಗಾಗಲೇ ವಕೀಲರನ್ನು ಸಂಪರ್ಕಿಸಿರುವುದಾಗಿ ಬರೆದಿದ್ದಾರೆ.

Ravi Belagere

ರಂಗ ನನ್ನ ಮೂವತ್ತು ವರ್ಷಗಳ ಗೆಳೆಯ. ನಾನು ಗೆಳೆತನಕ್ಕೆ ತುಂಬಾ ಬೆಲೆ ಕೊಡುತ್ತೇನೆ. ಸುಪಾರಿ ಎಂಬ ಬೃಹತ್ ನಾಟಕ ನಡೆದಾಗ ಎಲ್ಲ ಚಾನಲ್ ಗಳೂ ಸುದ್ದಿ ಮಾಡಿದವು. ಸುಮ್ಮನೆ ಅಲ್ಲ, ಮುಗಿಬಿದ್ದು ಮಾಡಿದವು. ಹಾಗಿರುವಾಗ ಪಬ್ಲಿಕ್ ಟಿವಿ ಸುದ್ದಿ ಮಾಡಬಾರದು ಅಂತ ನಿರೀಕ್ಷಿಸಲಿಲ್ಲ ನಾನು. ಅಪ್ರಾಪ್ತ ವಯಸ್ಸಿನ ಮಗುವಿನ ಚಿತ್ರ ತೋರಿಸೋದು ಅಪರಾಧ ಎಂದಿದ್ದಾರೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Journalist Ravi Belagere will file case against Public TV Ranganath. Hai Bangalore weekly chief editor writes about this in face book. While telecasting program about Ravi Belagere, 10 year old his son pictures also shown on Public tv. Because of that he decided to file a case.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ