ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪರಪ್ಪನ ಅಗ್ರಹಾರದಲ್ಲಿ ರವಿ ಬೆಳಗೆರೆ ಕೈದಿ ನಂ. 12785

By Mahesh
|
Google Oneindia Kannada News

ಬೆಂಗಳೂರು, ಡಿಸೆಂಬರ್ 11: ಪತ್ರಕರ್ತ ಸುನೀಲ್ ಹೆಗ್ಗರವಳ್ಳಿ ಅವರನ್ನು ಕೊಲ್ಲಲು ಸುಪಾರಿ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ.

ಸುಪಾರಿ ಕೇಸ್ : ರವಿಬೆಳಗೆರೆಗೆ 14 ದಿನಗಳ ನ್ಯಾಯಾಂಗ ಬಂಧನಸುಪಾರಿ ಕೇಸ್ : ರವಿಬೆಳಗೆರೆಗೆ 14 ದಿನಗಳ ನ್ಯಾಯಾಂಗ ಬಂಧನ

1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಜಗದೀಶ್ ಅವರು ಡಿಸೆಂಬರ್ 23ರ ತನಕ ನ್ಯಾಯಾಂಗ ಬಂಧನ ನೀಡಿದ್ದಾರೆ. ರವಿ ಬೆಳಗರೆ ಅವರಿಗೆ ಅನಾರೋಗ್ಯ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಂಗ ಬಂಧನದಲ್ಲೇ ಚಿಕಿತ್ಸೆ ನೀಡಲು ಆದೇಶಿಸಲಾಗಿದೆ.

Journalist Ravi Belagere is Prisoner Number 12875 Parappana Agrahara Jail

ಸಿಸಿಬಿ ಕಚೇರಿಯಲ್ಲಿದ್ದ ರವಿ ಬೆಳೆಗೆರೆ ಅವರಿಗೆ ಮಲಗಲು ವಿಶೇಷ ಕೊಠಡಿ ಸೌಲಭ್ಯ ಕಲ್ಪಿಸಲಾಗಿತ್ತು. ಮಗ ಕರ್ಣ ಮತ್ತು ಪುತ್ರಿ ಚೇತನಾ ಬೆಳಗೆರೆ ಅವರು ಮನೆಯಿಂದ ಊಟ, ಉಪಾಹಾರ ತಂದುಕೊಡುತ್ತಿದ್ದರು.

ಮುಂದಿನ ಎರಡು ವರ್ಷಗಳ ರವಿ ಬೆಳಗೆರೆ ಜಾತಕ ಫಲಮುಂದಿನ ಎರಡು ವರ್ಷಗಳ ರವಿ ಬೆಳಗೆರೆ ಜಾತಕ ಫಲ

ನ್ಯಾಯಾಂಗ ಬಂಧನದ ವೇಳೆ : ನ್ಯಾಯಾಂಗ ಬಂಧನದ ವೇಳೆ : ಈಗ ಇಲ್ಲಿ, ಪರಪ್ಪನ ಅಗ್ರಹಾರ ಸೆರೆಮನೆಯಲ್ಲಿ ಸಾಮಾನ್ಯ ಕೈದಿಗಳಿರುವ ಸೆಲ್ ನಲ್ಲಿ ಇರಿಸಲಾಗಿದೆ. ಕೈದಿ ನಂಬರ್ 12785 ನೀಡಲಾಗಿದೆ. ಜೈಲಿನಲ್ಲಿ ಕಾಳು ಸಾರು, ಮುದ್ದೆ ನುಂಗಿದ ರವಿ ಅವರನ್ನು ಅಲ್ಲಿನ ವೈದ್ಯರು ಪರೀಕ್ಷಿಸಿದ್ದಾರೆ. ನಂತರ ಕೊಠಡಿಗೆ ಶಿಫ್ಟ್ ಮಾಡಲಾಗಿದೆ.

* ನ್ಯಾಯಾಂಗ ಬಂಧನದ ವೇಳೆ ಪೊಲೀಸ್ ವಿಚಾರಣೆ ಇರುವುದಿಲ್ಲ.
* ಆರೋಪಿ ಪರ ವಕೀಲ, ವೈದ್ಯರು ಬಿಟ್ಟರೆ ಉಳಿದವರಿಗೆ ಸಂದರ್ಶನ ಸಿಗುವುದಿಲ್ಲ.
* ನ್ಯಾಯಾಂಗ ಬಂಧನದ ಅವಧಿಯೊಳಗೆ ಜಾಮೀನು ಅರ್ಜಿಗಾಗಿ ಅರ್ಜಿ ಸಲ್ಲಿಸಬಹುದು.

* ಮಧುಮೇಹದಿಂದ ಬಳಲುತ್ತಿರುವ ರವಿ ಬೆಳಗೆರೆಗೆ ಸೂಕ್ತ ಚಿಕಿತ್ಸೆಯ ನೆರವಿನ ಅಗತ್ಯವಿದೆ ಎಂದು ಕೇಳಿಕೊಳ್ಳಲಾಗಿದ್ದು, ಸೂಕ್ತ ವೈದ್ಯಕೀಯ ನೆರವು ಪಡೆಯಲು ಕೋರ್ಟ್ ಅನುಮತಿ ನೀಡಿದೆ.

ಆರೋಪಗಳು: ರವಿ ಬೆಳಗೆರೆ ವಿರುದ್ಧ ಈಗಾಗಲೇ ಸುಪಾರಿ ಕೇಸಿಗೆ ಸಂಬಂಧಿಸಿದಂತೆ ರವಿ ಬೆಳೆಗೆರೆ ವಿರುದ್ಧ ಐಪಿಸಿ ಸೆಕ್ಷನ್ 307 ಹಾಗೂ 120 (ಬಿ) ಅನ್ವಯ ಹಾಗೂ ಅಕ್ರಮ ಶಸ್ತ್ರಾಸ್ತ್ರ ಕಾಯ್ದೆ 1958ರ ಸೆಕ್ಷನ್ 3 ಹಾಗೂ 25ರ ಅನ್ವಯ ಸುಬ್ರಮಣ್ಯಪುರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇದಲ್ಲದೆ ಕೊಲೆ ಸಂಚು ಆರೋಪದಲ್ಲಿ ಈ ಐಪಿಎಸ್ ಸೆಕ್ಷನ್ 115 ನಂತೆ ಪ್ರಕರಣ ದಾಖಲಾಗಿದೆ.

English summary
Hai Bangalore editor arrested Ravi Belagere sports prisoner number 12785 in Parappana Agrahara central jail. Ravi Belagere sent to 14 days judicial custody till Dec 23,2017 for allegedly giving Supari to kill fellow journalist Sunil Heggaravalli
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X