ಬಿಜೆಪಿ ಮಿಡ್ ನೈಟ್ ಫ್ರೀಡಂ ರನ್‌ನಲ್ಲಿ ಪಾಲ್ಗೊಳ್ಳಿ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 10 : ಬಿಜೆಪಿ ಯುವ ಮೋರ್ಚಾ ಹಾಗೂ ಐಟಿ ಘಟಕ ಆಗಸ್ಟ್ 14ರಂದು 'ಮಿಡ್ ನೈಟ್ ಫ್ರೀಡಂ ರನ್' ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕು ಎಂದು ಬಿಜೆಪಿ ನಾಯಕರು ಮನವಿ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರು 'ಮಿಡ್ ನೈಟ್ ಫ್ರೀಡಂ ರನ್' ಕಾರ್ಯಕ್ರಮದ ಲಾಂಚನವನ್ನು ಕಳೆದ ವಾರ ಬಿಡುಗಡೆ ಮಾಡಿದ್ದಾರೆ. ಆಗಸ್ಟ್ 14ರ ಶನಿವಾರ ರಾತ್ರಿ 9 ಗಂಟೆಗೆ ಬೆಂಗಳೂರಿನ ಫ್ರೀಡಂಪಾರ್ಕ್‌ನಲ್ಲಿ ಕಾರ್ಯಕ್ರಮ ನಡೆಯಲಿದೆ.[ಸ್ವತಂತ್ರ ದಿನಾಚರಣೆ ದಿನ ಮೋದಿ ಜೀವಕ್ಕೆ ಕಂಟಕ]

Join BJP Midnight Freedom Run on August 14, 2016

ಬೆಂಗಳೂರಿನ ಫ್ರೀಡಂಪಾರ್ಕ್‌ನಿಂದ ಫ್ರೀಡಂ ರನ್ ಆರಂಭವಾಗಲಿದ್ದು ಸುಮಾರು 5 ಕಿ.ಮೀ.ದೂರ ಸಂಚಾರ ನಡೆಸಲಿದೆ. ನಂತರ ಮಧ್ಯರಾತ್ರಿ 12 ಗಂಟೆಗೆ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ.[ಫಲಪುಷ್ಪ ಪ್ರದರ್ಶನ : ಪಾರ್ಕಿಂಗ್, ಪ್ರವೇಶ ಶುಲ್ಕದ ಮಾಹಿತಿ]

'ಮಿಡ್ ನೈಟ್ ಫ್ರೀಡಂ ರನ್'ನ ಟೀ ಶರ್ಟ್‌, ಲಾಂಚನವನ್ನು ಪ್ರಧಾನಿ ನರೇಂದ್ರ ಮೋದಿ ಅವರು, ಕಳೆದ ವಾರ ಬಿಡುಗಡೆ ಮಾಡಿದ್ದಾರೆ. ಬಿಜೆಪಿ ಯುವಮೋರ್ಚಾ ಅಧ್ಯಕ್ಷ ಮತ್ತು ಸಂಸದ ಪ್ರತಾಪ್ ಸಿಂಹ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Prime Minister Narendra Modi released the T-Shirts and logos of BJP Midnight Freedom Run which will be held on August 14, 2016 at Bengaluru.
Please Wait while comments are loading...