ಉದ್ಯೋಗ ಮೇಳ: ಕೆಲಸದ ಜತೆ ಪಿಎಫ್, ಇಎಸ್ಐ ಕೂಡ ಪಾವತಿ

Posted By: Nayana
Subscribe to Oneindia Kannada

ಬೆಂಗಳೂರು, ಮಾರ್ಚ್ 09: ಉದ್ಯೋಗ ಮೇಳದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳ ಒಂದು ವರ್ಷದ ಪಿಎಫ್ ಮತ್ತು ಇಎಸ್ ಐ ಮೊತ್ತವನ್ನು ಸರ್ಕಾರವೇ ಭರಿಸಲಿದೆ ಎಂದು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಅಧ್ಯಕ್ಷ ಮುರಳೀಧರ ಹಾಲಪ್ಪ ಹೇಳಿದರು.

ಚಿಕ್ಕಪೇಟೆಯ ವಿಧಾನಸಭಾ ಕ್ಷೇತ್ರದ ಜನಪ್ರಿಯ ಶಾಸಕರೂ ಮತ್ತು ಕರ್ನಾಟಕ ಕೊಳಗೇರಿ ಅಭಿವೃದ್ದಿ ಮಂಡಳಿ ಅಧ್ಯಕ್ಷರಾಗಿರುವ ಆರ್ ವಿ ದೇವರಾಜ್ ಮತ್ತು ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮದ ಸಹಯೋಗದಲ್ಲಿ ಆಯೋಜಿಸಿದ್ದ ಬೃಹತ್ ಉದ್ಯೋಗ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.

ಯಾವ ಪಕ್ಷಕ್ಕೆಷ್ಟು ಸೀಟು? ನೀವೇ ಊಹಿಸಿ

ನವಕರ್ನಾಟಕ ಮತ್ತು ಯುವ ಕರ್ನಾಟಕವನ್ನು ಸ್ಥಾಪಿಸುವ ಮೂಲಕ ಯುವ ಸಬಲೀಕರಣ ಮಾಡುವ ಮಾನ್ಯ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರ ಆಶಯಗಳಿಗೆ ಈ ಉದ್ಯೋಗ ಮೇಳ ಪೂರಕವಾಗಿದೆ. ಈ ಉದ್ಯೋಗ ಮೇಳದಲ್ಲಿ ಆಯ್ಕೆಯಾಗುವ ಅಭ್ಯರ್ಥಿಗಳ ಒಂದು ವರ್ಷದ ಪಿಎಫ್ ಮತ್ತು ಇಎಸ್ ಐ ಮೋತ್ತವನ್ನು ಸರ್ಕಾರವೇ ಭರಿಸಲಿದೆ.

Job fair: Govt bears candidates PF and ESI contribution

ಅಂತಹ ಅಭ್ಯರ್ಥಿಗಳ ಉದ್ಯೋಗ ಖಾಯಂ ಅದಲ್ಲಿ ಈ ಅವಧಿಯನ್ನು ಎರಡು ವರ್ಷದ ಅವಧಿಗೆ ವಿಸ್ತರಿಸಲಾಗುವುದೆಂದು ತಿಳಿಸಿದರು. ಹೆಚ್ಚು ಹೆಚ್ಚು ಜನರಿಗೆ ಉದ್ಯೋಗ ಒದಗಿಸಲು ಕಂಪನಿಗಳ ಆಸಕ್ತಿ ಹೆಚ್ಚಿಸುವ ಸಲುವಾಗಿ ಈ ಯೋಜನೆಯನ್ನು ಸರ್ಕಾರ ಜಾರಿಗೊಳಿಸಿದೆ ಎಂದು ತಿಳಿಸಿದರು. ಅಲ್ಲದೇ ಇಂತಹ ಕಾರ್ಯಕ್ರಮಗಳ ಮುಖಾಂತರ ಜನಪರ ಕಾರ್ಯ ಮಾಡುತ್ತಿರುವ ಆರ್. ವಿ ದೇವರಾಜ್ ಅವರನ್ನು ಶ್ಲಾಘಿಸಿದರು.

Job fair: Govt bears candidates PF and ESI contribution

ಈ ಉದ್ಯೋಗ ಮತ್ತು ಕೌಶಲ್ಯ ಮೇಳದಲ್ಲಿ ಉದ್ಯೋಗ ಮೇಳದಲ್ಲಿ ಇನ್ಫೋಸಿಸ್, ಆಕ್ಸೆಂಚರ್, ಗ್ರೋ ಇನ್ಸೇಷಿಯಾ, ಕೆನರಾ, ಹೆಚ್‍ಡಿಎಫ್ ಸಿ, ಸಮನ್ವಿತಾ ಸೇರಿದಂತೆ 112 ಕಂಪನಿಗಳು ಭಾಗವಹಿಸಿದ್ದವು. 4000 ಸಾವಿರಕ್ಕೂ ಹೆಚ್ಚು ಉದ್ಯೋಗಾಸಕ್ತ ಯುವಕ-ಯುವತಿಯರು ಸಂದರ್ಶನದಲ್ಲಿ ಪಾಲ್ಗೊಂಡಿದ್ದರು.

ಈ ಮೇಳದಲ್ಲಿ ಸುಮಾರು 3500 ಅಭ್ಯರ್ಥಿಗಳು ಆಫರ್ ಲೆಟರ್, 40 ಜನರಿಗೆ ತರಬೇತಿಗೆ ಹಾಗೂ 35 ಜನರಿಗೆ ಸ್ವಯಂ ಉದ್ಯೋಗಕ್ಕೆ ಮಾರ್ಗದರ್ಶನ ದೊರೆಯಿತು.

ಈ ಕಾರ್ಯಕ್ರಮದಲ್ಲಿ ಸುಧಾಮನಗರ ವಾರ್ಡ್ ನ ಬಿಬಿಎಂಪಿ ಸದಸ್ಯ ಆರ್.ವಿ.ಯುವರಾಜ್, ಆರ್.ವಿ.ದೇವರಾಜ್ ಸೇವಾ ಪ್ರತಿಷ್ಠಾನದ ಟ್ರಸ್ಟಿ ಡಾ.ಮಮತಾ ದೇವರಾಜ್ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
State Government will bear one year's PF and ESI contribution of employees who were selected in job fair organized by the government. Karnataka skill development corporation chairman Muralidhar Halappa said while addressing a job fair in Chikpet on Friday.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ