ಕನ್ಹಯ್ಯಾ ಬಗ್ಗೆ ಬರೆದ ಬರ್ಖಾ ದತ್‌ಗೆ ಬೆದರಿಕೆ ಕರೆ

Subscribe to Oneindia Kannada

ಬೆಂಗಳೂರು, ಮಾರ್ಚ್, 04: ಪತ್ರಕರ್ತೆ ಬರ್ಖಾ ದತ್ ಅವರಿಗೆ ನಿರಂತರವಾಗಿ ಬೆದರಿಕೆ ಕರೆಗಳು ಬರುತ್ತಿವೆಯಂತೆ. ಸ್ವತಃ ಬರ್ಖಾ ದತ್ ಅವರೇ ತಮ್ಮ ಮೊಬೈಲ್ ಗೆ ಬೆದರಿಕೆ ಕರೆಗಳು ಬರುತ್ತಿವೆ ಎಂದು ಟ್ವಿಟ್ಟರ್ ನಲ್ಲಿ ಬರೆದುಕೊಂಡಿದ್ದಾರೆ.

ದೇಶದ್ರೋಹದ ಆರೋಪದಡಿ ಬಂಧನಕ್ಕೆ ಒಳಗಾಗಿ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಕನ್ಹಯ್ಯಾ ಕುಮಾರ್ ಬಗ್ಗೆ ದತ್ " ಮೀಟಿಂಗ್ ಕನ್ಹಯ್ಯಾ ಕುಮಾರ್ ದಿ ಮ್ಯಾನ್ ಹು ಮೇಡ್ ಆಜಾದಿ ಆನ್ ಅಂಥಮ್" ಎಂಬ ಹೆಸರಿನಲ್ಲಿ ಲೇಖನಗಳನ್ನು ಬರೆದ ನಂತರ ಬೆದರಿಕೆ ಮತ್ತು ನಿಂದನೆ ಕರೆಗಳು ಬರುತ್ತಿವೆ ಎಂದು ಬರೆದುಕೊಂಡಿದ್ದಾರೆ.[ಮೋದಿ ಬಗ್ಗೆ ಜೈಲಿನಿಂದ ಬಿಡುಗಡೆಯಾದ ಕನ್ಹಯ್ಯಾ ಹೇಳಿದ್ದೇನು?]

JNU row: Barkha Dutt says she's getting threatening calls

ಒಂದೇ ನಂಬರ್ ನಿಂದ ನಿರಂತರವಾಗಿ ಕರೆ ಬರುತ್ತಿದ್ದು ನಿಂದನೆ ಮಾಡಲಾಗುತ್ತಿದೆ. ಅವಾಚ್ಯ ಶಬ್ದಗಳ ಮೂಲಕ ನಿಂದಿಸುವುದಲ್ಲದೇ ಜೀವ ಬೆದರಿಕೆ ಹಾಕಲಾಗುತ್ತಿದೆ ಎಂದು ಬರ್ಖಾ ದತ್ ಆರೋಪಿಸಿದ್ದಾರೆ.[ಕನ್ಹಯ್ಯಾ ಕುಮಾರ್ ಘೋಷಣೆ ಕೂಗಿದ 2 ವಿಡಿಯೋ ನಕಲಿ!]

ಕನ್ಹಯ್ಯಾ ಕುಮಾರ್ ಗುರುವಾರ ಜೈಲಿನಿಂದ ಬಿಡುಗಡೆಯಾದ ನಂತರ ಅಭಿಪ್ರಾಯ ಆಧರಿಸಿದ ಲೇಖನವೊಂದನ್ನು ದತ್ ಬರೆದಿದ್ದರು. ಅಲ್ಲದೇ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಒಪನ್ ಲೆಟರ್ ಬರೆದಿದ್ದರು. ಕಲಾಕೌಮುದಿಯಲ್ಲಿ ಈ ಬಗ್ಗೆ ಲೇಖನ ಬರೆದಿದ್ದ ಪತ್ರಕರ್ತ ಸಿಂಧು ಸೂರ್ಯಕುಮಾರ್ ಅವರಿಗೂ ಬೆದರಿಕೆ ಕರೆಗಳು ಬಂದಿದ್ದವು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
New Delhi: Journalist Barkha Dutt on Friday said that she received threatening calls, full of abuses, from an unknown number following the publication of her column on Kanhaiya Kumar titled, “Meeting Kanhaiya Kumar—the Man who made ' Azaadi' an Anthem”.
Please Wait while comments are loading...