ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

'ಅಮೀರ್ ಖಾನ್ ಸೋದರಿ' ಪ್ರಿಯಾಮಣಿಗೆ ಟ್ವೀಟ್ ಪೆಟ್ಟು

By Mahesh
|
Google Oneindia Kannada News

ಬೆಂಗಳೂರು, ಮೇ 05: ಕೇರಳದ ಎರ್ನಾಕುಲಂನ ಕಾನೂನು ಕಾಲೇಜಿನ ವಿದ್ಯಾರ್ಥಿನಿ ಜಿಶಾ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ನಟಿ ಪ್ರಿಯಾಮಣಿ ಟ್ವೀಟ್ ಮಾಡಿದ್ದು ಈಗ ದೊಡ್ಡ ರಾದ್ಧಾಂತವಾಗಿದೆ.

ಭಾರತ ಈಗ ಮಹಿಳೆಯರಿಗೆ ಸುರಕ್ಷಿತವಾಗಿಲ್ಲ, ಭಾರತ ಬಿಟ್ಟು ಸುರಕ್ಷಿತ ಸ್ಥಳಕ್ಕೆ ಹೋಗಿ ಎಂದು ಕರೆ ನೀಡಿದ ಪ್ರಿಯಾಮಣಿಯನ್ನು 'ಅಮೀರ್ ಖಾನ್ ಸೋದರಿ' ಎಂದು ಗೇಲಿ ಮಾಡಿ ಟ್ವೀಟ್ ಗಳ ಮೂಲಕ ತಿರುಗೇಟು ನೀಡಲಾಗಿದೆ. [ಅಸಹಿಷ್ಣುತೆ ಬಗ್ಗೆ ದನಿ ಎತ್ತಿದವರಿಗೆ ಅನುಪಮ್ ತಿರುಗೇಟು]

 Jisha Rape case Tweets : Actress Priyamani gets trolled on Twitter

'ಭಾರತದಲ್ಲಿ ಪರಿಸ್ಥಿತಿ ಹೀಗೆ ಮುಂದುವರಿದರೆ... ಭಾರತದ ಮಹಿಳೆಯರೇ ಮತ್ತು ಹುಡುಗಿಯರೇ, ನೀವೆಲ್ಲರೂ ಭಾರತ ಬಿಟ್ಟು ಸುರಕ್ಷಿತವಾದ ಬೇರೆ ಯಾವುದಾದರೂ ಸ್ಥಳದಲ್ಲಿ ವಾಸಿಸುವುದು ಉತ್ತಮ ಎಂದು ನಿಮ್ಮನ್ನು ಬೇಡಿಕೊಳ್ಳುತ್ತೇನೆ' ಎಂದು ಟ್ವೀಟ್ ಮಾಡಿದ್ದ ಪ್ರಿಯಾಮಣಿ ಈಗ ಚರ್ಚೆಯ ವಸ್ತುವಾಗಿದ್ದಾರೆ.[ಉಲ್ಟಾ ಹೊಡೆದ ಅಮೀರ್: ದೇಶ ಬಿಡುತ್ತೇನೆ ಎಂದು ಹೇಳಿಯೇ ಇಲ್ಲ]

ಪ್ರಿಯಾಮಣಿಯನ್ನು ಕೆಲವರಂತೂ 'ಅಮೀರ್ ಖಾನ್ ಸಹೋದರಿ' ಎಂದು ಕರೆದಿದ್ದಾರೆ.


ಟ್ವೀಟ್ ಗಳ ಬಗ್ಗೆ ಸ್ಪಷ್ಟನೆ ನೀಡಿರುವ ಪ್ರಿಯಾಮಣಿ, ನಾನು ನಡೆದಿರುವ ಹಾಗೂ ನಡೆಯುತ್ತಿರುವ ಕೆಲವು ಅಹಿತಕರ ಘಟನೆಗಳ ಬಗ್ಗೆ ಕೇವಲ ನನ್ನ ಭಾವನೆಗಳನ್ನು ವ್ಯಕ್ತಪಡಿಸಿದ್ದೇನೆ, ಇದು ಹೇಗೆ ದೇಶ ವಿರೋಧಿಯಾಗುತ್ತದೆ ? ಎಂದು ಸರಣಿ ಟ್ವೀಟ್ ಮಾಡಿದರೂ ಸಾರ್ವಜನಿಕರು ಕಿಚಾಯಿಸುವುದನ್ನು ನಿಲ್ಲಿಸಿಲ್ಲ.

ಕೇರಳದ ಎರ್ನಾಕುಲಂ ಜಿಲ್ಲೆಯ ಪೆರುಂಬವೂರು ಪಟ್ಟಣದ ಕಾನೂನು ವ್ಯಾಸಂಗ ಮಾಡುತ್ತಿದ್ದ 28 ವರ್ಷದ ವಿದ್ಯಾರ್ಥಿನಿ ಜಿಶಾರನ್ನು ಬರ್ಬರವಾಗಿ ಅತ್ಯಾಚಾರಗೈದು ಕೊಲೆ ಮಾಡಿದ ಘಟನೆ ವಿರುದ್ಧ ಇಡೀ ದೇಶದಲ್ಲಿ ಆಕ್ರೋಶ ವ್ಯಕ್ತವಾಗಿದೆ.

(ಒನ್ಇಂಡಿಯಾ ಸುದ್ದಿ)

English summary
Following the rape and murder of 28 year old Ernakulam Law college student Jisha, Actor Priyamani took Micro blogging site Twitter to express her views on the incident. She was simply stating the point that India is no longer safe for its women. But, Twitterati trolled, condemned and blame her
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X