ಅ. 18 ರಂದು 'ಜ್ಯುವೆಲ್ಸ್ ಆಫ್ ಇಂಡಿಯಾ' ಆಭರಣ ಮೇಳ

Written By: Ramesh
Subscribe to Oneindia Kannada

ಬೆಂಗಳೂರು, ಅಕ್ಟೋಬರ್. 17 : ಆಭರಣ ಪ್ರಿಯರಿಗೆ ಜ್ಯುವೆಲ್ಸ್ ಆಫ್ ಇಂಡಿಯಾ ಜ್ಯುವೆಲರಿ ಫ್ಯಾಶನ್ ಶೋವನ್ನು ಏರ್ಪಡಿಸಲಾಗಿದೆ. ದೇಶದ ಸುಪ್ರಸಿದ್ಧ ಆಭರಣ ತಯಾರಕರು ವಿನ್ಯಾಸಗೊಳಿಸಿದ ಬಗೆ-ಬಗೆಯ ವಿನ್ಯಾಸದ ಆಭರಣಗಳ ಮೇಳ 'ಜ್ಯುವೆಲ್ಸ್ ಆಫ್‌ ಇಂಡಿಯಾ' ಇದೇ ಅಕ್ಟೋಬರ್ 18 ರಂದು ನಡೆಯಲಿದೆ. ಜಯಮಹಲ್ ಪ್ಯಾಲೇಸ್ ನಲ್ಲಿ ಈ ಮೇಳವನ್ನು ಆಯೋಜಿಸಲಾಗಿದೆ.

ನಟಿ ಲಕ್ಷ್ಮೀ ಗೋಪಾಲಸ್ವಾಮಿ ಜ್ಯುವೆಲ್ಸ್ ಆಫ್ ಇಂಡಿಯಾಶೋನ ರಾಯಭಾರಿಯಾಗಿದ್ದು, ಕಂಟನ್ ಮೆಂಟ್ ರೈಲ್ವೈ ಸ್ಟೇಷನ್ ಹತ್ತಿರದಲ್ಲಿರುವ ಜಯಮಹಲ್ ಪ್ಯಾಲೇಸ್ ನಲ್ಲಿ ಅಕ್ಟೋಬರ್.18 ರಂದು (ಮಂಗಳವಾರ) ನಡೆಯಲಿರುವ ಈ ಆಭರಣ ಮೇಳೆವನ್ನು ಬೆಳಿಗ್ಗೆ 10 ಗಂಟೆಗೆ ಉದ್ಘಾಟಿಸಲಿದ್ದಾರೆ.

Mahalakshmi

ಈ ಮೇಳೆದಲ್ಲಿ ದೇಶದ ವಿವಿಧ ರಾಜ್ಯಗಳ ಸುಮಾರು 125ಕ್ಕೂ ಹೆಚ್ಚು ಪ್ರಸಿದ್ಧ ಆಭರಣ ತಯಾರಕರು ಸಿದ್ಧಪಡಿಸಿದ ಆಭರಣಗಳು ಈ ಆಭರಣ ಫ್ಯಾಶನ್ ಶೋನಲ್ಲಿ ಲಭ್ಯವಿರಲಿವೆ.

ಇನ್ನು ಸಾಂಪ್ರದಾಯಿಕ ಆಭರಣಗಳು ಸೇರಿದಂತೆ ವಿವಿಧ ಬಗೆಯ ಆಭರಣಗಳು ಪ್ರದರ್ಶನದಲ್ಲಿ ದೊರೆಯಲಿವೆ ಎಂದು ಜ್ಯುವೆಲ್ಸ್ ಆಫ್‌ ಇಂಡಿಯಾ ಪ್ರಕಟಣೆಯಲ್ಲಿ ತಿಳಿಸಿದೆ.

ಈ ಮೇಳದಲ್ಲಿ ಪಾಲ್ಗೋಳ್ಳುವ ಬಗೆ-ಬಗೆಯ ಆಭರಣಗಳನ್ನು ಆಭರಣಪ್ರಿಯರು ಕಣ್ತುಂಬಿಕೊಂಡು ತಮಗಿಷ್ಟವಾದ ಆಭರಣಗಳನ್ನು ಕೊಳ್ಳಬಹುದಾಗಿದೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The Jewels of India exhibition will be held from October 18, JAYAMAHAL PALACE, at jayamahal road, near Cantonment railway station Bangalore.
Please Wait while comments are loading...