ಬೆಂಗಳೂರಿನಲ್ಲಿ ಬೆಳ್ಳಂಬೆಳಗ್ಗೆ ಆಭರಣ ಅಂಗಡಿ ದರೋಡೆ

Posted By:
Subscribe to Oneindia Kannada

ಬೆಂಗಳೂರು, ಆಗಸ್ಟ್ 05 : ಬೆಂಗಳೂರಿನ ಯಲಹಂಕದಲ್ಲಿ ಶುಕ್ರವಾರ ಮುಂಜಾನೆ ಜ್ಯುವೆಲ್ಲರಿ ಶಾಪ್ ದರೋಡೆ ಮಾಡಲಾಗಿದೆ. ಬಾಗಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಯಲಹಂಕ ಬಳಿಯ ದ್ವಾರಕಾನಗರದ ರಾಜಲಕ್ಷ್ಮೀ ಜ್ಯುವೆಲರ್ಸ್‌ನಲ್ಲಿ ಮುಂಜಾನೆ 7.30ರ ಸುಮಾರಿಗೆ ಈ ಘಟನೆ ನಡೆದಿದೆ. ಬ್ಲಾಕ್ ಪಲ್ಸರ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಭದ್ರತಾ ಸಿಬ್ಬಂದಿ ಮೇಲೆ ಹಲ್ಲೆ ಮಾಡಿ, ಸುಮಾರು 50 ಲಕ್ಷ ಮೌಲ್ಯದ ಚಿನ್ನಾಭರಣ ದೋಚಿದ್ದಾರೆ.[ಇಂದಿನ ಚಿನ್ನದ ದರ ತಿಳಿದುಕೊಳ್ಳಿ]

police

ಭದ್ರತಾ ಸಿಬ್ಬಂದಿ ಶುಕ್ರವಾರ ಬೆಳಗ್ಗೆ 7ಗಂಟೆಗೆ ಜ್ಯುವೆಲ್ಲರ್ಸ್ ಬಾಗಿಲು ತೆರೆದಿದ್ದರು. ಈ ಸಮಯದಲ್ಲಿ ಬೈಕ್‌ನಲ್ಲಿ ಬಂದ ಮೂವರು ದುಷ್ಕರ್ಮಿಗಳು ಅವರ ಮೇಲೆ ಹಲ್ಲೆ ನಡೆಸಿ, ಒಳಗೆ ನುಗ್ಗಿ ಬಂಗಾರವಿದ್ದ ಮೂರು ಬಾಕ್ಸ್‌ಗಳನ್ನು ಎತ್ತಿಕೊಂಡು ಪರಾರಿಯಾದರು.[ಗಂಡ-ಹೆಂಡತಿ ಅಂತ ಬಂದ್ರು, 18 ಲಕ್ಷ ದೋಚಿದ್ರು!]

ಜ್ಯುವೆಲರ್ಸ್‌ ಮುಂದಿದ್ದ ಸಿಸಿಟಿವಿಯನ್ನು ದುಷ್ಕರ್ಮಿಗಳು ಜಖಂಗೊಳಿಸಿದ್ದಾರೆ. ಬಾಗಲೂರು ಠಾಣಾ ಪೊಲೀಸರು ಮತ್ತು ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದು, ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Three people robbed a jewellery shop at Dwaraka Nagar, Yelahanka Bengaluru on Friday, August 5, 2016 morning. Bagalur police visited the spot.
Please Wait while comments are loading...