ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬೆಂಗಳೂರು-ಮಂಗಳೂರು ನಡುವೆ ಮತ್ತೊಂದು ವಿಮಾನ ಸೇವೆ

|
Google Oneindia Kannada News

ಬೆಂಗಳೂರು, ಜುಲೈ 18 : ಬೆಂಗಳೂರು-ಮಂಗಳೂರು ನಡುವೆ ಮತ್ತೊಂದು ವಿಮಾನ ಸಂಚಾರ ಆರಂಭಿಸುವುದಾಗಿ ಜೆಟ್‌ ಏರ್‌ವೇಸ್ ಘೋಷಿಸಿದೆ. ಆಗಸ್ಟ್ 1ರಿಂದ ನೂತನ ಸೇವೆ ಆರಂಭವಾಗಲಿದೆ.

ಪತ್ರಿಕಾ ಪ್ರಕಟಣೆಯಲ್ಲಿ ಜೆಟ್‌ ಏರ್‌ವೇಸ್ ಈ ಕುರಿತು ಮಾಹಿತಿ ನೀಡಿದೆ. ಪ್ರತಿದಿನ ಸಂಜೆ 3.40ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಡಲಿರುವ ವಿಮಾನ ಮಂಗಳೂರು ತಲುಪಲಿದೆ. [ಮಂಗಳೂರು-ಶಾರ್ಜಾ ನಡುವೆ ಹೊಸ ವಿಮಾನ]

jet airways

ವೇಳಾಪಟ್ಟಿ : 9W2782 ನಂಬರ್‌ನ ವಿಮಾನ ಸಂಜೆ 3.40ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಿಂದ ಹೊರಡಲಿದ್ದು, 4.50ಕ್ಕೆ ಮಂಗಳೂರು ತಲುಪಲಿದೆ. [ಜೆಟ್ ಏರ್ ವೇಸ್ ವೆಬ್ ಸೈಟ್]

9W2404 ನಂಬರ್ ವಿಮಾನ ಸಂಜೆ 5.15ಕ್ಕೆ ಮಂಗಳೂರಿನ ವಿಮಾನ ನಿಲ್ದಾಣದಿಂದ ಹೊರಡಲಿದ್ದು, ಸಂಜೆ 6.25ಕ್ಕೆ ಬೆಂಗಳೂರು ತಲುಪಲಿದೆ.

ಈಗಾಗಲೇ ಬೆಂಗಳೂರು-ಮಂಗಳೂರು ನಡುವೆ ಐದು ಜೆಟ್‌ ಏರ್‌ವೇಸ್ ವಿಮಾನಗಳು ಹಾರಾಟ ನಡೆಸುತ್ತಿವೆ. ಈ ಸೇವೆ ಆರಂಭವಾದರೆ ಒಟ್ಟು 6 ವಿಮಾನಗಳು ಸಂಚಾರ ನಡೆಸಿದಂತಾಗುತ್ತದೆ.

ಮಂಗಳೂರು-ಶಾರ್ಜಾ ನಡುವೆ ವಿಮಾನ : ಜೆಟ್ ಏರ್‌ವೇಸ್ ಮಂಗಳೂರು ಮತ್ತು ಶಾರ್ಜಾ ನಡುವೆ ನೇರ ವಿಮಾನ ಸಂಪರ್ಕ ಕಲ್ಪಿಸಲಿದೆ. 2016ರ ಆಗಸ್ಟ್ 7ರಿಂದ ಈ ಸೇವೆ ಆರಂಭವಾಗಲಿದೆ. ಜೆಟ್‌ ಏರ್‌ವೇಸ್ ಈಗಾಗಲೇ ಮಂಗಳೂರಿನಿಂದ ದುಬೈ ಮತ್ತು ಅಬುದಾಬಿಗೆ ವಿಮಾನ ಸೇವೆ ನೀಡುತ್ತಿದೆ.

English summary
Jet Airways will introduce an additional flight connecting Mangaluru-Bengaluru from August 1, 2016. With this Jet Airways will operate six daily flights between Mangaluru and state capital Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X