ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕುಮಾರಸ್ವಾಮಿ ನಾಯಕತ್ವದಲ್ಲೇ ಚುನಾವಣೆ ಎದುರಿಸುತ್ತೇವೆ: ಎಚ್ಡಿಡಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 09: ಜೆಡಿಎಸ್ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಕ್ಕೆ ಯುವ ಮುಖಂಡ ಪ್ರಜ್ವಲ್ ರೇವಣ್ಣ ಅವರು ಪಕ್ಷದ ವರಿಷ್ಠ ಎಚ್ ಡಿ ದೇವೇಗೌಡರಲ್ಲಿ ಕ್ಷಮೆಯಾಚಿಸಿದ ಸುದ್ದಿ ಓದಿರುತ್ತೀರಿ. ಇದರ ಮುಂದುವರೆದ ಭಾಗ ಇಲ್ಲಿದೆ... ಪ್ರಜ್ವಲ್ ಕ್ಷಮೆಯಾಚನೆ ಬಳಿಕ ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ಭಾನುವಾರ ಮಧ್ಯಾಹ್ನ ಸುದ್ದಿಗೋಷ್ಠಿ ನಡೆಸಿದರು.

'ರಾಜಕೀಯ ಗುರು' ಮಾತಿಗೆ ಬೆಲೆ, ಎಚ್ಡಿಡಿ ಅವರಲ್ಲಿ ಪ್ರಜ್ವಲ್ ಕ್ಷಮೆ'ರಾಜಕೀಯ ಗುರು' ಮಾತಿಗೆ ಬೆಲೆ, ಎಚ್ಡಿಡಿ ಅವರಲ್ಲಿ ಪ್ರಜ್ವಲ್ ಕ್ಷಮೆ

'ಪ್ರಜ್ವಲ್ ಕ್ಷಮೆ ಕೇಳಿದ್ದಾನೆ, ಚಿಕ್ಕಪ್ಪನ ನಿರ್ಣಯಕ್ಕೆ ಬದ್ಧ ಎಂದಿದ್ದಾನೆ. ನನಗೆ ನಿಖಿಲ್ ಬೇರೆಯಲ್ಲ, ಪ್ರಜ್ವಲ್ ಬೇರೆಯಲ್ಲ, ಇದನ್ನು ಮುಂದುವರೆಸುವುದು ಬೇಡ' ಎಂದು ಮಾಜಿ ಪ್ರಧಾನಿ ದೇವೇಗೌಡರು ಹೇಳಿದರು.

JDS will face election under the leadership of Kumaraswamy : HD Deve Gowda

ಹಾಸನದಲ್ಲಿ ನನ್ನ ಗೆಲುವಿನ ಕಾರಣನಾದ ಪ್ರಜ್ವಲ್ ಸ್ವಲ್ಪ ಆಕ್ರೋಶದಲ್ಲಿ ಪಕ್ಷದ ವರ್ಚಸ್ಸಿಗೆ ಧಕ್ಕೆ ತರುವಂಥ ಹೇಳಿಕೆ ನೀಡಿದ್ದಾನೆ. ಆದರೆ, ಈಗ ತನ್ನ ತಪ್ಪು ತಿದ್ದಿಕೊಂಡಿದ್ದಾನೆ. ಕುಮಾರಸ್ವಾಮಿ ಬಯಸಿದರೆ ರಾಜಕೀಯದಿಂದಲೇ ದೂರ ಉಳಿಯುವ ಮಾತನಾಡಿದ್ದಾನೆ. ಹಾಸನ ರಾಜಕೀಯವನ್ನು ರೇವಣ್ಣ ಹಾಗೂ ಪ್ರಜ್ವಲ್ ಇನ್ಮುಂದೆ ನೋಡಿಕೊಳ್ಳುತ್ತಾರೆ ಎಂದು ನಾನು ಈ ಹಿಂದೆ ಹೇಳಿದ್ದಕ್ಕೆ ಬದ್ಧನಾಗಿದ್ದೇನೆ.

ರಾಜಕೀಯವಾಗಿ ಪ್ರಜ್ವಲ್ ಇನ್ನೂ ಬೆಳೆಯಬೇಕಿದೆ. ಕುಮಾರಸ್ವಾಮಿ ಅವರ ಮಾರ್ಗದರ್ಶನದ ಅವಶ್ಯಕತೆ ಇದೆ. ಮುಂದಿನ ಚುನಾವಣೆಯನ್ನು ಎಚ್ ಡಿ ಕುಮಾರಸ್ವಾಮಿ ಅವರ ನೇತೃತ್ವದಲ್ಲೇ ಜೆಡಿಎಸ್ ಎದುರಿಸಲಿದೆ. ಕಾರ್ಯಕರ್ತರಲ್ಲಿ ಯಾವುದೇ ಗೊಂದಲಬೇಡ ಎಂದು ದೇವೇಗೌಡರು ಸ್ಪಷ್ಟಪಡಿಸಿದರು.

English summary
JDS will face next assembly election under the leadership of Kumaraswamy. Prajawal Revanna has apologized and will obey rules and regulations set by party state chief Kumaraswamy said JDS supremo HD Deve Gowda
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X