ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆರ್.ಆರ್. ನಗರದಲ್ಲಿ ಕೈ-ತೆನೆ 'ಮೈತ್ರಿ' ಅಭ್ಯರ್ಥಿಯಾಗಿ ಮುನಿರತ್ನ ಕಣಕ್ಕೆ

By Sachhidananda Acharya
|
Google Oneindia Kannada News

ಬೆಂಗಳೂರು, ಮೇ 24: ಚುನಾವಣೆ ಮುಂದೂಡಲ್ಪಟ್ಟ ರಾಜರಾಜೇಶ್ವರಿ ನಗರದಲ್ಲಿ ಇದೇ ಮೇ 28 ರಂದು ಚುನಾವಣೆ ನಡೆಯಲಿದೆ. ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಅಭ್ಯರ್ಥಿ ಯಾರು ಎಂಬ ಬಗ್ಗೆ ಇದ್ದ ಗೊಂದಲ ಬಗೆ ಹರಿದಿದೆ.

ಇಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ನ ಮೈತ್ರಿ ಅಭ್ಯರ್ಥಿಯಾಗಿ ಮುನಿರತ್ನ ಸ್ಪರ್ಧಿಸಲಿದ್ದಾರೆ. ಕಾಂಗ್ರೆಸ್ ಅಭ್ಯರ್ಥಿ ಮುನಿರತ್ನ ಅವರಿಗೆ ಜೆಡಿಎಸ್ ಅಭ್ಯರ್ಥಿ ಎಸ್.ವಿ. ರಾಮಚಂದ್ರ ಬೆಂಬಲ ನೀಡಲಿದ್ದಾರೆ.

ಆರ್‌.ಆರ್.ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಮುನಿರತ್ನ ಎಂಎಲ್‌ಸಿ?ಆರ್‌.ಆರ್.ನಗರದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ, ಮುನಿರತ್ನ ಎಂಎಲ್‌ಸಿ?

ಈ ವಿಚಾರವನ್ನು ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಇಂದು ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಉಪ ಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಘೋಷಿಸಿದ್ದಾರೆ.

 JDS to support Congress candidate Muniratna in RR Nagar

ಹೀಗಾಗಿ ಮುಂದೂಡಲ್ಪಟ್ಟ ಜಯನಗರ ಮತ್ತು ರಾಜರಾಜೇಶ್ವರಿ ನಗರ ಎರಡೂ ಕಡೆಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಜೆಡಿಎಸ್ ಅಭ್ಯರ್ಥಿಗಳು ಬೆಂಬಲಿಸುವುದು ಅಂತಿಮವಾಗಿದೆ.

ಆರ್‌ಆರ್‌ ನಗರದಲ್ಲಿ ಶಾಂತಿಯುತ ಚುನಾವಣೆಗೆ ಸಿದ್ಧತೆಆರ್‌ಆರ್‌ ನಗರದಲ್ಲಿ ಶಾಂತಿಯುತ ಚುನಾವಣೆಗೆ ಸಿದ್ಧತೆ

ರಾಜರಾಜೇಶ್ವರಿ ನಗರದಲ್ಲಿ ಮೇ 28ರಂದು ಚುನಾವಣೆ ನಡೆಯಲಿದ್ದು, ಮೇ 31ರಂದು ಮತ ಎಣಿಕೆ ನಡೆಯಲಿದೆ. ಇಲ್ಲಿನ ಅಪಾರ್ಟ್ ಮೆಂಟ್ ಒಂದರಲ್ಲಿ 9746 ಮತದಾರರ ಗುರುತಿನ ಚೀಟಿಗಳು ಚುನಾವಣೆಗೂ ಮೊದಲು ಪತ್ತೆಯಾದ ಹಿನ್ನೆಲೆಯಲ್ಲಿ ರಾಜರಾಜೇಶ್ವರಿ ನಗರದಲ್ಲಿ ಚುನಾವಣೆಯನ್ನು ಮುಂದೂಡಲಾಗಿತ್ತು.

English summary
JD(S) will support our candidate in Rajarajeshwari Nagar assembly constituency poll said deputy CM G. Parameshwara in Bengaluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X