ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎರಡು ಕಾಲಿನ ಪುಣ್ಯಕೋಟಿ ಮಣ್ಣು ಅಗೆದು ತಿಂದಿದೆ: ರೆಡ್ಡಿ ವಿರುದ್ಧ ಜೆಡಿಎಸ್ ಲೇವಡಿ

|
Google Oneindia Kannada News

ಬೆಂಗಳೂರು, ನವೆಂಬರ್ 16: ಎರಡು ಕಾಲಿನ ಪುಣ್ಯಕೋಟಿ ಮಣ್ಣು ಅಗೆದು ತಿಂದಿದೆ ಹೀಗಾಗಿ ನಾಡಿನ ಸಂಪತ್ತು ಲೂಟಿ ಮಾಡಿದ ಪುಣ್ಯಕೋಟಿಯಿಂದ ನಿಜವಾದ ಪುಣ್ಯಕೋಟಿಯಾದ ಮುಖ್ಯಮಂತ್ರಿ ಎಚ್‌ಡಿ ಕುಮಾರಸ್ವಾಮಿಯವರು ಪಾಠ ಕಲಿಯಬೇಕಿಲ್ಲ ಎಂದು ಜೆಡಿಎಸ್ ತಿರುಗೇಟು ನೀಡಿದೆ.

ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ ಜನಾರ್ದನ ರೆಡ್ಡಿಗೆ ಇನ್ನೂ ಒಂದು ದಿನ ಜೈಲೇ ಗತಿ

ತನ್ನನ್ನೇ ತಾನು ಪುಣ್ಯಕೋಟಿ ಎಂದು ಕರೆದುಕೊಂಡಿರುವ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಜೆಡಿಎಸ್ ವಿಧಾನ ಪರಿಷತ್ ಸದಸ್ಯ ಶ್ರೀಕಂಠೇಗೌಡ ನಾಡಿನ ಅಪಾರ ಸಂಪತ್ತನ್ನು ಇಂಚಿಂಚು ಅಗೆದು ತಿಂದು ರಾಜಕಾರಣ ಮಾಡಿದ ಜನಾರ್ದನ ರೆಡ್ಡಿ ದೆಹಲಿಗೆ ಹೋಗಿ ಬಂದ ಮೇಲಾದರೂ ಬುದ್ಧಿ ಕಲಿಯಬೇಕಿತ್ತು. ಆದರೆ ಈಗಲೂ ಕೂಡ ಮಣ್ಣು ತಿನ್ನುವ ಹಳೆಯ ಚಾಳಿ ಬಿಟ್ಟಿಲ್ಲ ಎಂದು ವಾಗ್ದಾಳಿ ನಡೆಸಿದರು.

ವೈರಿಯ ಬದಲಾಯಿಸಿಕೊಂಡ ಜನಾರ್ದನ ರೆಡ್ಡಿ, ಎಚ್‌ಡಿಕೆ ಹೊಸ ಗುರಿ ವೈರಿಯ ಬದಲಾಯಿಸಿಕೊಂಡ ಜನಾರ್ದನ ರೆಡ್ಡಿ, ಎಚ್‌ಡಿಕೆ ಹೊಸ ಗುರಿ

JDS slams Reddy was engulfed natural resources of the state

ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪುಣ್ಯಕೋಟಿ ಕಥೆಯಲ್ಲಿ ತನ್ನ ಕರುವಿಗಾಗಿ ಹಸು ಪ್ರಾಣವನ್ನೇ ಬಲಿ ಕೊಡಲು ಮುಂದಾಗುತ್ತದೆ.ಆದರೆ ಎರಡು ಕಾಲಿನ ಪುಣ್ಯಕೋಟಿ ನಾಡಿನ ಸಂಪತ್ತನ್ನೆಲ್ಲ ಬಲಿ ಕೊಟ್ಟು ತಾನು ವಿಜೃಂಭಿಸಲು ಹೊರಟಿದೆ. ಕರ್ನಾಟಕದ ಜನತೆ ಜನಾರ್ದನ ರೆಡ್ಡಿ ಹಾಗೂ ಅವರ ಹಿಂಬಾಲಕರು ನಡೆಸಿದ ಹಗಲು ದರೋಡೆಯನ್ನು ಈವರೆಗೂ ಮರೆತಿಲ್ಲ. ಆದರೆ ರೆಡ್ಡಿ ಜನರ ದಿಕ್ಕನ್ನು ತಪ್ಪಿಸಲು ಪ್ರಯತ್ನಿಸುತ್ತಿದ್ದಾರೆ ಎಂದರು.

English summary
JDS MLC Srikanthegowda had slammed former minister Janardhana Reddy was not innocent since he had engulfed natural resources of the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X