ವಿಧಾನಸಭೆ ಚುನಾವಣೆ: ಜೆಡಿಎಸ್ ಅಭ್ಯರ್ಥಿಗಳ ಪಟ್ಟಿ ಸಿದ್ಧ?

Posted By:
Subscribe to Oneindia Kannada

ಬೆಂಗಳೂರು, ಸೆಪ್ಟೆಂಬರ್ 13: ಮುಂದಿನ ವರ್ಷ ನಡೆಯಲಿರುವ ವಿಧಾನಸಭಾ ಚುನಾವಣೆಗಾಗಿ ಕ್ಷೇತ್ರವಾರು ಜೆಡಿಎಸ್ ಅಭ್ಯರ್ಥಿಗಳ ಪಟ್ಟಿಯು ಬಹುತೇಕ ಸಿದ್ಧವಾಗಿದ್ದು, ಶೀಘ್ರವೇ ಈ ಪಟ್ಟಿ ಪ್ರಕಟಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ.

ವಿಧಾನಸಭಾ ಚುನಾವಣೆಯಲ್ಲಿ ಪ್ರಮುಖ ಜಿಲ್ಲೆಯಾಗಿರುವ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮೀಣ ಭಾಗಗಳಿಗೆ ಹೆಚ್ಚು ಜಾಗರೂಕತೆಯಿಂದ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗಿದೆ ಎಂದು ಹೇಳಲಾಗಿದೆ. ಆದರೆ, ಯಾವ ಹೆಸರುಗಳೂ ಅಧಿಕೃತವಾಗಿ ಪ್ರಕಟಗೊಂಡಿಲ್ಲ.

JDS prepares its candidates list for Karnataka Assembly elections 2018

ಆದರೂ, ಕುತೂಹಲಕ್ಕಾಗಿ ಒಂದು ಅಂದಾಜಿನ ಮೇಲೆ ಬೆಂಗಳೂರು ನಗರದ ಜೆಡಿಎಸ್ ಅಭ್ಯರ್ಥಿಗಳನ್ನು ಹೀಗೆ ಪಟ್ಟಿ ಮಾಡಬಹುದಾಗಿದೆ.

ಗಾಂಧಿ ನಗರ - ನಾರಾಯಣ ಸ್ವಾಮಿ

ದಾಸರಹಳ್ಳಿ - ವಿಧಾನ ಪರಿಷತ್ ಮಾಜಿ ಸದಸ್ಯ ಇ. ಕೃಷ್ಣಪ್ಪ

ಮಹಾಲಕ್ಷ್ಮಿ ಲೇಔಟ್ - ಶಾಸಕ ಗೋಪಾಲಯ್ಯ

ರಾಜಾಜಿ ನಗರ - ಎಸ್.ಪಿ. ಆನಂದ್

ಪದ್ಮನಾಭ ನಗರ - ಗೋಪಾಲ್

ಹೆಬ್ಬಾಳ - ಹನುಮಂತೇ ಗೌಡ

ಬ್ಯಾಟರಾಯನ ಪುರ - ಟಿ.ಎನ್. ಚಂದ್ರು

ಮಹದೇವ ಪುರ - ಸತೀಶ್

ಯಶವಂತ ಪುರ - ಜವರಾಯ ಗೌಡ

ಯಲಹಂಕ - ಕೃಷ್ಣಪ್ಪ

ಜಯನಗರ - ರವಿಕುಮಾರ್

ಬಿಟಿಎಂ ಲೇಔಟ್ - ದೇವರಾಜ್

ರಾಜರಾಜೇಶ್ವರಿ ನಗರ - ಆರ್. ಪ್ರಕಾಶ್

ಕೆಲವಾರು ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ನ ಅಭ್ಯರ್ಥಿಗಳನ್ನು ಆರಿಸಲು ಆಯಾ ಕ್ಷೇತ್ರದ ಕಾರ್ಯಕರ್ತರಿಗೇ ಜವಾಬ್ದಾರಿ ವಹಿಸಲಾಗಿದೆ. ಆ ಕ್ಷೇತ್ರಗಳ ಜೆಡಿಎಸ್ ಮುಖಂಡರು, ಕಾರ್ಯಕರ್ತರು ಬಹುಮತದಿಂದ ಆರಿಸುವ ವ್ಯಕ್ತಿಗಳನ್ನೇ ಪಕ್ಷದ ಅಭ್ಯರ್ಥಿಗಳನ್ನಾಗಿ ಕಣಕ್ಕಿಳಿಸಲು ನಿರ್ಧರಿಸಲಾಗಿದೆ ಎಂದು ಜೆಡಿಎಸ್ ಮೂಲಗಳು ತಿಳಿಸಿವೆ.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Sources said that, JDS has finalised a list of its candidates for next year's assembly elections. It also meant that, JDS Chiefs will release the list after making a final touch to the list.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ