ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್ ನ 8 ಭಿನ್ನಮತೀಯ ಶಾಸಕರಿಗೆ ಅಮಾನತು ಶಿಕ್ಷೆ

By Mahesh
|
Google Oneindia Kannada News

ಬೆಂಗಳೂರು, ಜೂನ್ 12: ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ 8 ಭಿನ್ನಮತೀಯ ಶಾಸಕರಿಗೆ ಅಮಾನತು ಶಿಕ್ಷೆ ವಿಧಿಸಿ ಜೆಡಿಎಸ್ ಅಧ್ಯಕ್ಷ ಎಚ್ ಡಿ ದೇವೇಗೌಡ ಅವರು ಆದೇಶ ಹೊರಡಿಸಿದ್ದಾರೆ. ಅರಮನೆ ಮೈದಾನದಲ್ಲಿ ಭಾನುವಾರ ಮಹತ್ವ ನಡೆದ ಕಾರ್ಯಕರ್ತರ ಸಭೆಯಲ್ಲಿ ಈ ಮಹತ್ವದ ನಿರ್ಣಯ ಕೈಗೊಳ್ಳಲಾಗಿದೆ.

ಜಾತ್ಯಾತೀತ ಜನತಾ ದಳ (ಜೆಡಿಎಸ್)ದಲ್ಲಿ ಉದ್ಭವಿಸಿರುವ ಭಿನ್ನಮತೀಯ ಚಟುವಟಿಕೆಗಳಿಂದ ಬೇಸತ್ತುಎಚ್.ಡಿ.ಕುಮಾರಸ್ವಾಮಿ ಅವರು ಬಲ್ಗೇರಿಯಾಗೆ ಹಾರಿದ್ದಾರೆ. ಬೆಂಗಳೂರಿನಲ್ಲಿ ಭಾನುವಾರ ಮೋಡ ಮುಸುಕಿದ ವಾತಾವರಣದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆಗೆ ಹಿರಿಯ ರಾಜಕಾರಣಿ, ಪಕ್ಷದ ರಾಷ್ಟ್ರಾಧ್ಯಕ್ಷ ಎಚ್ ಡಿ ದೇವೇಗೌಡ ಅವರು ಶಾಂತವಾಗಿ ಭಿನ್ನಮತೀಯರಿಗೆ ಶಾಕ್ ನೀಡಿದ್ದಾರೆ

ಭಿನ್ನಮತೀಯರಿಗೆ ಬಾಡೂಟ ಸಿಗುತ್ತದೆಯೇ? ಅಥವಾ ಅಮಾನತು ಶಿಕ್ಷೆ ಸಿಗುತ್ತದೆಯೇ? ಕುತೂಹಲದಲ್ಲಿ ಸಭೆ ಆರಂಭವಾಗಿದೆ. ಆದರೆ, ಭಿನ್ನಮತೀಯರ ವಿರುದ್ಧ ತಕ್ಷಣಕ್ಕೆ ಯಾವ ಕ್ರಮ ಜರುಗಿಸಲು ಸಾಧ್ಯವಿಲ್ಲ ಎಂದು ಒಂದು ಸಾಲಿನ ನಿರ್ಣಯವನ್ನು ದೇವೇಗೌಡ ಅವರು ಸಭೆಯ ಆರಂಭದಲ್ಲೇ ನೀಡಿದ್ದರು. ಆದರೆ, ನಂತರ ಕಾರ್ಯಕರ್ತರ ಅಭಿಪ್ರಾಯ ಸಂಗ್ರಹಿಸಿ, ಎಲ್ಲಾ ಭಿನ್ನಮತೀಯರನ್ನು ಅಮಾನತು ಮಾಡುವ ನಿರ್ಣಯ ಕೈಗೊಳ್ಳಲಾಗಿದೆ. [ಜೆಡಿಎಸ್ ಭಿನ್ನಮತ ಅಂತಿಮ ಘಟ್ಟಕ್ಕೆ, ಮುಂದೇನು?]

ಹಲವು ಮಂದಿ ಕಾರ್ಯಕರ್ತರು ಪಕ್ಷದಲ್ಲಿನ ಕೆಲವು ನಡವಳಿಕೆಗಳ ಬಗ್ಗೆ ಆಕ್ರೋಶ ವ್ಯಕ್ತಪಡಿಸಿ ಪತ್ರ ಬರೆದಿದ್ದಾರೆ ಮತ್ತು ವಾಟ್ಸಪ್ ಸಂದೇಶ ಕಳುಹಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪಕ್ಷದ ಸಭೆ ಕರೆದಿದ್ದು ಆ ಸಭೆಯಲ್ಲಿ ಹೊಸ ಪದಾಧಿಕಾರಿಗಳನ್ನು ಘೋಷಣೆ ಮಾಡಲಾಗುವುದು ಯಾರು ಇರಲಿ, ಬಿಡಲಿ ನಾವು ಎಲ್ಲ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಂಡು ಪಕ್ಷ ಕಟ್ಟಿ ಬೆಳೆಸುತ್ತೇವೆ ಎಂದು ಎಚ್ ಡಿ ದೇವೇಗೌಡ ಅವರು ಹೇಳಿದ್ದಾರೆ.

JDS Executive Meet, HD Deve Gowda Protest in Mandya, HD Kumaraswamy flys to Bulgaria

ಮಂಡ್ಯದಲ್ಲಿ ಪ್ರತಿಭಟನೆ: ಶಾಸಕರಾದ ರಮೇಶ್ ಬಂಡಿಸಿದ್ದೇಗೌಡ ಹಾಗೂ ಚೆಲುವರಾಯಸ್ವಾಮಿ ವಿರುದ್ಧ ಸಂಜಯ್ ವೃತ್ತದಲ್ಲಿ ಪ್ರತಿಭಟನೆ ನಡೆಸಲಾಗಿದೆ. ಬೆಂಗಳೂರಿನ ಅರಮನೆ ಮೈದಾನದಲ್ಲೂ ಪ್ರತಿಭಟನೆ ಮುಂದುವರೆದಿದ್ದು, ರೆಬೆಲ್ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಾಸಕ ಗೋಪಾಲಯ್ಯ, ಉಪಮೇಯರ್ ಹೇಮಲತಾ ಆರ ಭಾವಚಿತ್ರವನ್ನು ಹರಿದು ಹಾಕಿದ್ದಾರೆ. [ದೇವೇಗೌಡ, ಎಚ್ಡಿಕೆಗೆ ಇಕ್ಬಾಲ್ ಅನ್ಸಾರಿ ಬಹಿರಂಗ ಸವಾಲು!]

ಬಲ್ಗೇರಿಯಾಕ್ಕೆ ಹಾರಿದ ಎಚ್ಡಿಕೆ: ಗುಲಾಬಿ ಎಣ್ಣೆಗೆ ಫೇಮಸ್ ಆಗಿರುವ ಬಲ್ಗೇರಿಯಾ ದೇಶಕ್ಕೆ ಎಚ್ ಡಿ ಕುಮಾರಸ್ವಾಮಿ ತೆರಳಿದ್ದಾರೆ. ಪಕ್ಷ, ರಾಜಕೀಯ ಮರೆತು, ತಾವೊಬ್ಬ ಸಿನಿಮಾ ನಿರ್ಮಾಪಕ ಎಂಬುದನ್ನು ಸ್ಮರಿಸಿಕೊಂಡು ಮಗನ ಫಿಲಂ ಶೂಟಿಂಗ್ ಗೆ ತೆರಳಿದ್ದಾರೆ.[ ವಿವರ ಇಲ್ಲಿ ಓದಿ]

ಅಮಾನತುಗೊಂಡ ಬಂಡಾಯ ಶಾಸಕರು :
* ಜಮೀರ್ ಅಹಮದ್ ಖಾನ್ (ಚಾಮರಾಜಪೇಟೆ)
* ಕೆ.ಗೋಪಾಲಯ್ಯ (ಮಹಾಲಕ್ಷ್ಮೀ ಪುರ)
* ಅಖಂಡ ಶ್ರೀನಿವಾಸಮೂರ್ತಿ (ಪುಲಿಕೇಶಿ ನಗರ)
* ಚೆಲುವರಾಯ ಸ್ವಾಮಿ (ನಾಗಮಂಗಲ)
* ಎಚ್.ಸಿ.ಬಾಲಕೃಷ್ಣ (ಮಾಗಡಿ)
* ಇಕ್ಬಾಲ್ ಅನ್ಸಾರಿ (ಗಂಗಾವತಿ)
* ರಮೇಶ್ ಬಂಡಿಸಿದ್ದೇಗೌಡ (ಶ್ರೀರಂಗಪಟ್ಟಣ)
* ಭೀಮಾ ನಾಯಕ್ (ಹಗರಿಬೊಮ್ಮನಹಳ್ಳಿ)

ಶಾಸಕರು, ಮಾಜಿ ಶಾಸಕರು, ಅಧಿಕಾರ ಇಲ್ಲದವರು, ಸಂಘ-ಸಂಸ್ಥೆಗಳಲ್ಲಿ ಕೆಲಸ ಮಾಡಿದವರು ಸಭೆಯಲ್ಲಿ ಪಾಲ್ಗೊಂಡಿದ್ದಾರೆ. ಪಕ್ಷ ವಿರೋಧಿ ಹೇಳಿಕೆ ನೀಡಿದ ಅತೃಪ್ತ ಶಾಸಕರ ವಿರುದ್ಧ ದೇವೇಗೌಡರು ಯಾವ ನಿರ್ಣಯ ಕೈಗೊಳ್ಳಲಿದ್ದಾರೆ ಕಾದು ನೋಡಬೇಕಿದೆ.

English summary
Karnataka Janata Dal (Secular) crisis at final stage. 8 MLA's of party support for Congress in Rajya Sabha election. Whether JDs will suspend rebel MLA's wait and watch, DEve Gowda led JDS executive meet is now going on in Palace ground, Begaluru
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X