ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಪ್ರಜ್ವಲ್ ರೇವಣ್ಣ ಸೂಟ್ ಕೇಸ್ ಹೇಳಿಕೆ, ಅವರಿವರು ಕಂಡಂತೆ

By Mahesh
|
Google Oneindia Kannada News

ಬೆಂಗಳೂರು/ಮೈಸೂರು, ಜುಲೈ 07: 'ಜೆಡಿಎಸ್ ನಲ್ಲಿ ಎಚ್.ಡಿ.ದೇವೇಗೌಡ ಅವರ ಮಾತೇ ಅಂತಿಮ. ಮುಂದಿನ ವಿಧಾನಸಭೆ ಚುನಾವಣೆಗೆ ಯಾವ ಕ್ಷೇತ್ರದಲ್ಲಿ ಯಾರಿಗೆ ಟಿಕೆಟ್ ಕೊಡಬೇಕು, ಕೊಡಬಾರದು ಎಂಬುದರ ಬಗ್ಗೆ ಅವರೇ ತೀರ್ಮಾನ ಕೈಗೊಳ್ಳುತ್ತಾರೆ. ಅವರ ಮಾತನ್ನು ಯಾರೂ ಮೀರುವುದಿಲ್ಲ' ಎಂದು ಎಚ್ ಡಿ ರೇವಣ್ಣ ಅವರು ಪ್ರತಿಕ್ರಿಯಿಸಿದ್ದಾರೆ.

ಹುಣಸೂರಿನದ್ದು ಪ್ರಜ್ವಲ್ ರೇವಣ್ಣ ಟ್ರೇಲರ್, ಸಿನಿಮಾ ಬಾಕಿ ಇದೆ!ಹುಣಸೂರಿನದ್ದು ಪ್ರಜ್ವಲ್ ರೇವಣ್ಣ ಟ್ರೇಲರ್, ಸಿನಿಮಾ ಬಾಕಿ ಇದೆ!

'ಜೆಡಿಎಸ್ ನಲ್ಲಿ ಯಾವುದೇ ಗೊಂದಲ, ಭಿನ್ನಾಭಿಪ್ರಾಯಗಳಿಲ್ಲ. ತಮ್ಮ ಪುತ್ರ ಪ್ರಜ್ವಲ್ ಹೇಳಿಕೆಗೆ ಹೆಚ್ಚಿನ ಮಹತ್ವ ಕೊಡುವ ಅಗತ್ಯವಿಲ್ಲ' ಎಂದು ಜೆಡಿಎಸ್ ಶಾಸಕ ಎಚ್.ಡಿ.ರೇವಣ್ಣ ಅವರು ಮೈಸೂರಿನಲ್ಲಿ ಹೇಳಿದ್ದಾರೆ.

ಬ್ರಿಟಿಷರ ಆಡಳಿತ ವೈಖರಿ ಕಂಡು ಬೆರಗಾದ ಪ್ರಜ್ವಲ್ ರೇವಣ್ಣಬ್ರಿಟಿಷರ ಆಡಳಿತ ವೈಖರಿ ಕಂಡು ಬೆರಗಾದ ಪ್ರಜ್ವಲ್ ರೇವಣ್ಣ

ಆಷಾಢ ಶುಕ್ರವಾರದ ಅಂಗವಾಗಿ ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ತಮ್ಮ ಪುತ್ರ ಪ್ರಜ್ವಲ್ ಕೋಪದಲ್ಲಿ ಏನೋ ಮಾತನಾಡಿದ್ದಾರೆ. ಆತನ ಮಾತಿಗೆ ಬೆಲೆ ಕೊಡುವ ಅಗತ್ಯವಿಲ್ಲ ಎಂದು ಹೇಳಿದರು.

ದೇವೇಗೌಡರ ಮೊಮ್ಮಗ ಪ್ರಜ್ವಲ್ ಇತ್ಯೋಪರಿ

ಹುಣಸೂರಿನಲ್ಲಿ ಮಾತನಾಡಿದ ಪ್ರಜ್ವಲ್ ರೇವಣ್ಣ ಅವರು ಏನು ಹೇಳಿದರೋ, ಯಾವ ಕಾರಣಕ್ಕೋ, ಯಾರು ಟಾರ್ಗೆಟ್ಟೋ ಎಂಬುದರ ಬಗ್ಗೆ ಕಾರ್ಯಕರ್ತರು ತಲೆ ಕೆಡಿಸಿಕೊಂಡಿಲ್ಲ. ಜೆಡಿಎಸ್ ನಲ್ಲಿ ಸಣ್ಣದೊಂದು ಅಸಮಾಧಾನದ ಕಿಡಿ ಹೊತ್ತುಕೊಂಡಿರುವುದನ್ನು ಮಾತ್ರ ಎಲ್ಲರೂ ಕುತೂಹಲದಿಂದ ಕಣ್ಣರಳಿ ನೋಡುತ್ತಿದ್ದಾರೆ. ಪ್ರಜ್ವಲ್ ಹೇಳಿಕೆಗೆ ಬಂದಿರುವ ಪ್ರತಿಕ್ರಿಯೆಗಳು ಇಲ್ಲಿವೆ..

ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ː ಎಚ್ ಡಿ ರೇವಣ್ಣ

ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ ː ಎಚ್ ಡಿ ರೇವಣ್ಣ

ಮುಂಬರುವ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಸ್ವಂತ ಬಲದ ಮೇಲೆ ಹೆಚ್ಚು ಸೀಟು ಗೆದ್ದು ಅಧಿಕಾರಕ್ಕೆ ಬರುವುದು ನಿಶ್ಚಿತ. ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಿನಿಂದ ಇದ್ದೇವೆ. ನಮ್ಮಲ್ಲಿ ಯಾವುದೇ ರೀತಿಯ ಒಡಕು, ಗೊಂದಲಗಳಿಲ್ಲ.ಮಾಧ್ಯಮದವರು ಕಾರ್ಯಕ್ರಮವನ್ನು ಸಂಪೂರ್ಣವಾಗಿ ವರದಿ ಮಾಡಿದ್ದರೆ ಅದರ ಸತ್ಯಾಂಶ ಗೊತ್ತಾಗಲಿದೆ ಎಂದು ಎಚ್ ಡಿ ರೇವಣ್ಣ ಹೇಳಿದರು.

ಇಬ್ಬರಿಂದ ಮಾತ್ರ ಸ್ಪರ್ಧೆ

ಇಬ್ಬರಿಂದ ಮಾತ್ರ ಸ್ಪರ್ಧೆ

ಜೆಡಿಎಸ್‌ನಲ್ಲಿ ವರಿಷ್ಟರಾದ ಹೆಚ್.ಡಿ ದೇವೇಗೌಡ ಹಾಗೂ ರಾಜ್ಯಾಧ್ಯಕ್ಷರಾದ ಹೆಚ್.ಡಿ ಕುಮಾರಸ್ವಾಮಿ ಅವರ ತೀರ್ಮಾನವೇ ಅಂತಿಮ. ಮುಂದಿನ ಚುನಾವಣೆಯಲ್ಲಿ ನಾನು ಮತ್ತು ಕುಮಾರಸ್ವಾಮಿ ಮಾತ್ರ ಸ್ಪರ್ಧೆ ಮಾಡಲಿದ್ದೇವೆ. ಆ ಮೂಲಕ ಕುಮಾರಸ್ವಾಮಿಯವರನ್ನ ಮುಖ್ಯಮಂತ್ರಿ ಮಾಡಿ ರೈತರ ಸಾಲ ಮನ್ನ ಮಾಡುವುದೇ ನಮ್ಮ ಗುರಿ ಎಂದರು. ಈ ಮೂಲಕ ಅನಿತಾ ಕುಮಾರಸ್ವಾಮಿ ಅವರ ಸ್ಪರ್ಧೆಯ ಬಗ್ಗೆಯೂ ಖಚಿತತೆ ಇಲ್ಲ ಎಂದು ಸ್ಪಷ್ಪಪಡಿಸಿದ್ದಾರೆ.

ಪ್ರಜ್ವಲ್ ಹೇಳಿಕೆ ಬಗ್ಗೆ ಮಧು

ಪ್ರಜ್ವಲ್ ಹೇಳಿಕೆ ಬಗ್ಗೆ ಮಧು

'ಈ ಬಾರಿ ಕರ್ನಾಟಕಕ್ಕೆ ಕುಮಾರಣ್ಣ' ಎಂಬ ಘೋಷವಾಕ್ಯದಡಿ ಕಾರ್ಯಕರ್ತರನ್ನು ಪಕ್ಷ ಸಂಘಟನೆಗೆ ಸಿದ್ಧಗೊಳಿಸುತ್ತಿದ್ದೇವೆ. ಕುಮಾರಣ್ಣ ಮತ್ತು ರೇವಣ್ಣ ಮಾತ್ರ ಈ ಬಾರಿ ಚುನಾವಣೆ ಎದುರಿಸುತ್ತಾರೆ. ಪ್ರಜ್ವಲ್‌ ಹುಣಸೂರು ಟಿಕೆಟ್ ಆಕಾಂಕ್ಷಿಯಾಗಿದ್ದಾರೆ ಎನ್ನುವುದಷ್ಟೇ ಮಾಹಿತಿ ತಿಳಿದಿದೆ.ಸೂಟ್ ಕೇಸ್ ಸಂಸ್ಕೃತಿ ಇದೆ ಎಂದಿರುವ ಬಗ್ಗೆ ನನಗೆ ಗೊತ್ತಿಲ್ಲ. ಅವರು ಯಾವುದೋ ಹುಮ್ಮಸ್ಸಿನಿಂದ ಹೇಳಿದ್ದಾರೆ. ಇದಕ್ಕೆ ಅವರೇ ಸ್ಪಷ್ಟನೆ ನೀಡಲಿದ್ದಾರೆ ಎಂದರು

ಹುಣಸೂರು ಯಾರಿಗೆ

ಹುಣಸೂರು ಯಾರಿಗೆ

ಮಾಜಿ ಸಂಸದ ಎಚ್.ವಿಶ್ವನಾಥ್ ಅವರು ಜೆಡಿಎಸ್ ಸೇರಿದ ಬಳಿಕ ಹುಣಸೂರಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಚಾಮುಂಡಿ ವಿಧಾನಸಭಾ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ ಅವರ ಪುತ್ರ ಹರೀಶ್‍ಗೌಡ ಹುಣಸೂರು ಕ್ಷೇತ್ರಕ್ಕೆ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.ರೇವಣ್ಣ ಪುತ್ರ ಪ್ರಜ್ವಲ್ ಕೂಡ ಪ್ರಬಲ ಅಭ್ಯರ್ಥಿಯಾಗಿದ್ದಾರೆ ಎಂಬ ಸುದ್ದಿ ಹಬ್ಬಿದೆ. ಆದರೆ, ಯಾವುದೇ ಖಚಿತ ಮಾಹಿತಿ ಇಲ್ಲ.

ಎಚ್ ವಿಶ್ವನಾಥ್ ಪ್ರತಿಕ್ರಿಯೆ

ಎಚ್ ವಿಶ್ವನಾಥ್ ಪ್ರತಿಕ್ರಿಯೆ

ಪ್ರಜ್ವಲ್ ಹೇಳಿಕೆ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ. ಕಾರ್ಯಕರ್ತರಲ್ಲಿ ಗೊಂದಲ ಮೂಡಿದೆ. ವಿಶ್ವನಾಥ್ ಅವರು ಜೆಡಿಎಸ್ ಸೇರಿರುವುದರಿಂದ ಈ ರೀತಿ ಆಗಿದೆ ಎಂಬ ಕಟ್ಟುಕಥೆಗಳಿಗೆ ನಾನು ಪ್ರತಿಕ್ರಿಯಿಸುವುದಿಲ್ಲ ಎಂದು ಎಚ್ ವಿಶ್ವನಾಥ್ ಅವರು ಪ್ರತಿಕ್ರಿಯಿಸಿದ್ದಾರೆ.

English summary
JDS leaders HD Revanna, Madhu Bangarappa's reaction to HD Prajwal's statement about suitcase politics in the party.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X