ಫಾರ್ಚುನರ್ ಕಾರಿಗೆ ಡಿಕೆಶಿ ಬೆಂಬಲಿಗರು ಬೆಂಕಿ ಇಟ್ಟರೆ?

Written By:
Subscribe to Oneindia Kannada

ಬೆಂಗಳೂರು, ಮೇ 25 : ಬೆಂಗಳೂರಿನ ಮಹಾಲಕ್ಷ್ಮಿ ಲೇಔಟ್‍ ನಲ್ಲಿ ಮನೆ ಮುಂದೆ ನಿಲ್ಲಿಸಿದ್ದ ಜೆಡಿಎಸ್ ರಾಜ್ಯ ಪರಿಶಿಷ್ಟ ಜಾತಿ ಘಟಕದ ಕಾರ್ಯದರ್ಶಿ ಬಿ.ವಿ.ನರಸಿಂಹಮೂರ್ತಿ ರವರ ಫಾರ್ಚುನರ್ ಕಾರಿಗೆ ದುಷ್ಕರ್ಮಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ್ದಾರೆ.

2 ದಿನಗಳ ಹಿಂದಷ್ಟೆ "ಎಚ್.ಡಿ.ಕುಮಾರಣ್ಣ 2018ರ ಮುಖ್ಯಮಂತ್ರಿ" ಎಂಬ ಕಾರಿನ ಸ್ಟಿಕ್ಕರ್ ಗಳನ್ನ ಬಿಡುಗಡೆ ಮಾಡಿ, ತಮ್ಮ ಕಾರಿನ ಹಿಂಭಾಗಕ್ಕೆ ನರಸಿಂಹಮೂರ್ತಿ ಅಂಟಿಸಿದ್ದರು. ದುಷ್ಕರ್ಮಿಗಳು ರಾತ್ರಿ 1. 20 ವೇಳೆ ಕಾರಿಗೆ ಬೆಂಕಿ ಹಚ್ಚಿದ್ದಾರೆ ಎಂದು ಬಿ.ವಿ.ನರಸಿಂಹಮೂರ್ತಿ ಆರೋಪಿಸಿದ್ದಾರೆ.[ಕೆಪಿಸಿಸಿ ಅಧ್ಯಕ್ಷ ಹುದ್ದೆ: ಇರೋ 1 ಸ್ಥಾನಕ್ಕೆ ಅದೆಷ್ಟು ಜನ ಟವಲ್ ಹಾಕ್ತಾರೋ!]

jds

"ಎಚ್.ಡಿ.ಕುಮಾರಣ್ಣ 2018ರ ಮುಖ್ಯಮಂತ್ರಿ" ಎಂಬ ಸ್ಟಿಕ್ಕರ್ ಗಳನ್ನು ರಾಜ್ಯದಾದ್ಯಂತ 1 ಲಕ್ಷ ವಾಹನಗಳಿಗೆ ಸ್ವಂತ ಖರ್ಚಿನಲ್ಲಿ ಅಂಟಿಸುವ ಅಭಿಯಾನ ಆರಂಭಿಸುವುದಾಗಿ ಮೂರ್ತಿ ಘೋಷಿಸಿದ್ದರು. ರಾಜಕೀಯ ದ್ವೇಷಕ್ಕೆ ಇಂಧನ ಸಚಿವ ಡಿ.ಕೆ.ಶಿವಕುಮರ್ ಬೆಂಬಲಿಗರು ಈ ಕೃತ್ಯ ನಡೆಸಿದ್ದಾರೆ ಎಂದು ನರಸಿಂಹಮೂರ್ತಿ ಮಹಾಲಕ್ಷ್ಮೀ ಲೇಔಟ್ ಪೊಲೀಸ್ ಠಾಣೆಯಲ್ಲಿ ಬುಧವಾರ ದೂರು ದಾಖಲು ಮಾಡಿದ್ದಾರೆ.[ಡಿಕೆ ಶಿವಕುಮಾರ್ ವಿರುದ್ದ ಕುಮಾರಸ್ವಾಮಿ 'ಬಿರಿಯಾನಿ' ಆರೋಪ!]

-
-
-
-
-
-

ಹೆಲ್ಮೆಟ್ ಧರಿಸಿದ್ದ ಇಬ್ಬರು ಕಿಡಿಗೇಡಿಗಳು ಪೆಟ್ರೋಲ್ ಸುರಿದು ಬೆಂಕಿ ಹಚ್ಚಿರುವ ಚಿತ್ರಣ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆರೋಪಿಗಳಿಗಾಗಿ ಮಹಾಲಕ್ಷ್ಮೀ ಲೇಔಟ್ ಪೊಲೀಸರು ಬಲೆ ಬೀಸಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Bengaluru: JDS Schedule caste secretary BV Narasihmamurthy lodge a complaint in Mahalaxmi Layout Police station. He alleged that D. K Shivakumar minister for power supporters torched his car.
Please Wait while comments are loading...