ಶೀಘ್ರದಲ್ಲಿಯೇ ಜೆಡಿಎಸ್ ನಿಂದ 'ನಮ್ಮ ಅಪ್ಪಾಜಿ ಕ್ಯಾಂಟೀನ್' ಓಪನ್

Posted By:
Subscribe to Oneindia Kannada

ಬೆಂಗಳೂರು, ಮೇ 19 : ರಾಜ್ಯ ಸರ್ಕಾರದ ಇಂದಿರಾ ಕ್ಯಾಂಟೀನ್ ಜಾರಿಯಾದ ಬಳಿಕ ಶೀಘ್ರದಲ್ಲಿಯೇ ಜೆಡಿಎಸ್ ನ "ನಮ್ಮ ಅಪ್ಪಾಜಿ ಕ್ಯಾಂಟೀನ್" ಬಾಗಿಲು ತೆರೆಯಲಿದೆ.

ಜುಲೈ ತಿಂಗಳಿನಿಂದ ಕ್ಯಾಂಟೀನ್ ಆರಂಭವಾಗಲಿದ್ದು, 5 ರೂ.ಗೆ ಬೆಳಗಿನ ಉಪಹಾರಕ್ಕೆ ಇಡ್ಲಿ, ವಡಾ, ಖಾಲಿ ದೋಸೆ, ಚಟ್ನಿ, ಸಾಂಬಾರ್, 10 ರೂ.ಗೆ ಟೊಮ್ಯಾಟೊ ಬಾತ್, ಬಿಸಿಬೇಳೆಬಾತ್, ಪೊಂಗಲ್, ಚಿತ್ರಾನ್ನ, ಮೊಸರನ್ನ ಮಧ್ಯಾಹ್ನದ ಊಟ ಸಿಗಲಿದೆ.

JDS launched soon Namma Appaji canteen in Bengaluru 28 Assembly constituencies

ಜೆಡಿಎಸ್ ನ ವಿಧಾನ ಪರಿಷತ್ ಸದಸ್ಯ ಟಿ ಎ ಶರವಣ ತಮ್ಮ ಸ್ವಂತ ಹಣದಿಂದ 'ನಮ್ಮ ಅಪ್ಪಾಜಿ ಕ್ಯಾಂಟೀನ್' ನನ್ನು ಮೊದಲಿಗೆ ಬೆಂಗಳೂರಿನ ಬಸವನಗುಡಿಯಲ್ಲಿ ಶುರುವಾಗಲಿದ್ದು ಬಳಿಕ ಬೆಂಗಳೂರಿನ 28 ವಿಧಾನಸಭಾ ಕ್ಷೇತ್ರಗಳಿಗೂ ವಿಸ್ತರಣೆಯಾಗಲಿದೆ.

ಇಂದು (ಮೇ 18) ಜೆಡಿಎಸ್ ರಾಷ್ಟ್ರಾಧ್ಯಕ್ಷ ದೇವೇಗೌಡರ ಹುಟ್ಟು ಹಬ್ಬದ ಪ್ರಯುಕ್ತ ಕ್ಯಾಂಟೀನ್ ಘೋಷಣೆಯಾಗಲಿದೆ. ಕ್ಯಾಂಟೀನ್ ಗೆ ರೈತರಿಂದ ನೇರವಾಗಿ ಆಹಾರ ಧಾನ್ಯ, ತರಕಾರಿ ಖರೀದಸಲಾಗುತ್ತದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
The MLC T A Sharavana wants to set up canteens which will serve breakfast and lunch at subsidised rates in all 28 Assembly constituencies in Bengaluru, under party supremo H D Deve Gowda’s name. The canteens will go by the name - Namma Appaji canteens.
Please Wait while comments are loading...