ಪಕ್ಷ ಸಂಘಟಿಸಲು ರಾಜ್ಯ ಪ್ರವಾಸಕ್ಕೆ ಜೆಡಿಎಸ್ ನಾಯಕರು: ಎಚ್ ಡಿಕೆ

Posted By:
Subscribe to Oneindia Kannada

ಬೆಂಗಳೂರು, ಡಿಸೆಂಬರ್ 14 : ರಾಜ್ಯದಲ್ಲಿ ಮುಂದಿನ ಚುನಾವಣೆಗೆ ಪಕ್ಷವನ್ನು ಸಂಘಟಿಸಲು ಜೆಡಿಎಸ್ ನಾಯಕರ ದಂಡು ರಾಜ್ಯ ಪ್ರವಾಸ ಮಾಡಲಿದೆ. ಒಟ್ಟು 12 ನಾಯಕರನ್ನೊಳಗೊಂಡ 5 ತಂಡಗಳು ರಾಜ್ಯ ಪ್ರವಾಸ ನಡೆಸಲಿವೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಕುಮಾರಸ್ವಾಮಿ ತಿಳಿಸಿದ್ದಾರೆ.

ಹಿಂದಿನ ವಿಧಾನ ಚುನಾವಣೆಗಳಲ್ಲಿ ಅತ್ಯಲ್ಪ ಮತಗಳ ಅಂತರದಲ್ಲಿ ಅನೇಕ ಕಡೆಗಳಲ್ಲಿ ಸೋತಿದ್ದೇವೆ. 350- 5,000 ಮತಗಳ ಅಂತರದಲ್ಲಿ ಸೋತಿರುವ ಕ್ಷೇತ್ರಗಳ ಸಂಖ್ಯೆ ಮೂವತ್ತಕ್ಕೂ ಹೆಚ್ಚಿದೆ. ಹೀಗಾಗಿ ಆ ಕ್ಷೇತ್ರಗಳಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯತಂತ್ರ ರೂಪಿಸುವುದು ಜಿಲ್ಲಾ ಪ್ರವಾಸದ ಉದ್ದೇಶ. ಈ ಪ್ರವಾಸ ಡಿಸೆಂಬರ್ 19-23ರ ವರೆಗೆ ನಡೆಯಲಿದೆ ಎಂದು ಹೆಚ್ ಡಿಕೆ ಹೇಳಿದರು.[ನ.2ಕ್ಕೆ ಕೇಂದ್ರ ಬರ ಅಧ್ಯಯನ ತಂಡ ರಾಜ್ಯ ಪ್ರವಾಸ]

JDS is ready to make the trip to Organize a party HDK

ಈ ತಂಡಗಳಿಂದ ಜನರ ಸಮಸ್ಯೆಗಳ ಮಾಹಿತಿ ಸಂಗ್ರಹಿಸಲಿವೆ. ಅಲ್ಲದೆ 28 ವಿಧಾನಸಭಾ ಕ್ಷೇತ್ರಗಳ ಮುಖಂಡರ ಸಭೆಯನ್ನು ಡಿಸೆಂಬರ್ 17-18 ರಂದು ನಡೆಸಲು ತೀರ್ಮಾನಿಸಲಾಗಿದೆ ಎಂದು ಕುಮಾರಸ್ವಾಮಿ ತಿಳಿಸಿದರು.

ಪಕ್ಷದಲ್ಲಿ 10 ಮಂದಿ ಪ್ರಧಾನ ಕಾರ್ಯದರ್ಶಿಗಳು, 10 ಮಂದಿ ಜಂಟಿ ಕಾರ್ಯದರ್ಶಿಗಳು , 10 ಮಂದಿ ಕಾರ್ಯದರ್ಶಿಗಳು, ಮೂವರು ಉಪಾಧ್ಯಕ್ಷರು ಮತ್ತು ಒಬ್ಬ ಹಿರಿಯ ಉಪಾಧ್ಯಕ್ಷರನ್ನು ನೇಮಕ ಮಾಡಲು ಉದ್ದೇಶಿಸಲಾಗಿದೆ. ಜನವರಿ ತಿಂಗಳಲ್ಲಿ ದಲಿತ ಮಹಿಳೆಯರು, ಅಲ್ಪಸಂಖ್ಯಾತರು ಮತ್ತು ಹಿಂದುಳಿದ ವರ್ಗಗಳ ಸಮಾವೇಶ ನಡೆಸಲೂ ಸಭೆಯಲ್ಲಿ ತೀರ್ಮಾನಿಸಲಾಯಿತು ಎಂದು ತಿಳಿಸಿದರು.

ಪ್ರವಾಸಕ್ಕೆ ಅಣಿಯಾದ ತಂಡಗಳು
* ಬೆಂಗಳೂರು ನಗರ ಮತ್ತು ಗ್ರಾಮಾಂತರ ಜಿಲ್ಲೆಗಳಲ್ಲಿ ಶರವಣ ಮತ್ತು ಕುಪೇಂದ್ರರೆಡ್ಡಿ ನೇತೃತ್ವದ ತಂಡ ಪ್ರವಾಸ

* ಶ್ರೀಮಂತ್ ಪಾಟೀಲ ನೇತೃತ್ವದ ತಂಡವು ಮುಂಬೈ ಕರ್ನಾಟಕ ಪ್ರದೇಶದ ಜಿಲ್ಲೆಗಳಲ್ಲಿ ಪರ್ಯಟನೆ

* ಮಧು ಬಂಗಾರಪ್ಪ ನೇತೃತ್ವದ ತಂಡವು ದಕ್ಷಿಣ ಕನ್ನಡ ಮತ್ತು ಸುತ್ತಮುತ್ತಲಿನ ಜಿಲ್ಲೆಗಳು

* ಬಂಡೆಪ್ಪ ಕಾಶಂಪೂರ್ ನೇತೃತ್ವದ ತಂಡವು ಹೈದ್ರಾಬಾದ್ ಕರ್ನಾಟಕ

* ಜಿ.ಟಿ.ದೇವೇಗೌಡ ನೇತೃತ್ವದ ತಂಡವು ಮೈಸೂರು ವಿಭಾಗದಲ್ಲಿ ಪ್ರವಾಸ ಮಾಡಲಿದೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
JDS is ready to make the trip to Organize a party all over state in Dec 19 to 23 said JDS state president H.D. Kumaraswamy.
Please Wait while comments are loading...