ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್, ಕಾಂಗ್ರೆಸ್ ಅನ್ನು ಅನುಮಾನದಿಂದ ನೋಡುತ್ತಿದೆ: ಡಿ.ಕೆ.ಸುರೇಶ್

By Manjunatha
|
Google Oneindia Kannada News

Recommended Video

ಡಿ ಕೆ ಶಿವಕುಮಾರ್ ಸಹೋದರ ಡಿ ಕೆ ಸುರೇಶ್ ಜೆಡಿಎಸ್ ಬಗ್ಗೆ ಹೇಳಿದ್ದೇನು?

ಬೆಂಗಳೂರು, ಮೇ 26: ಜೆಡಿಎಸ್ ಪಕ್ಷವು ಕಾಂಗ್ರೆಸ್ ಅನುಮಾನದಿಂದ ನೋಡುತ್ತಿದೆ ಎಂದು ಕಾಂಗ್ರೆಸ್ ಸಂಸದ ಡಿ.ಕೆ.ಸುರೇಶ್ ಹೇಳಿದ್ದಾರೆ.

ರಾಜರಾಜೇಶ್ವರಿ ನಗರದ ಚುನಾವಣಾ ಪ್ರಚಾರದ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ಅವುರ, ಕಾಂಗ್ರೆಸ್ ಪಕ್ಷವು ಉದಾರ ಮನಸ್ಸಿನಿಂದ ಜೆಡಿಎಸ್‌ಗೆ ಅಧಿಕಾರ ನೀಡಿದೆ, ಆದರೆ ಜೆಡಿಎಸ್ ಪಕ್ಷವು ನಮ್ಮನ್ನು ಅನುಮಾನದಿಂದಲೇ ನೋಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದ್ದರು.

ಮೈತ್ರಿ ವಿಧಾನಸೌಧದ ಒಳಗಷ್ಟೆ, ಹೊರಗಲ್ಲ: ದೇವೇಗೌಡಮೈತ್ರಿ ವಿಧಾನಸೌಧದ ಒಳಗಷ್ಟೆ, ಹೊರಗಲ್ಲ: ದೇವೇಗೌಡ

ದೇವೇಗೌಡರು ದೊಡ್ಡವರು, ಅವರು ದೊಡ್ಡವರಾಗಿಯೇ ಇರುತ್ತಾರೆ ನಾವು ಚಿಕ್ಕವರು ಸಣ್ಣವರಾಗುತ್ತಿದ್ದೇವಷ್ಟೆ ಎಂದು ಮಾರ್ಮಿಕವಾಗಿ ಅವರು ಜೆಡಿಎಸ್ ನಾಯಕರ ಮೇಲೆ ಮೊನಚು ಬಾಣ ಎಸೆದರು.

JDS doubting on congress: DK Suresh

ಈಗಲೂ ಸಮಯ ಮೀರಿಲ್ಲ, ಪಕ್ಷದ ವರಿಷ್ಠರು ಅನುಮಾನಗಳನ್ನು ಬದಿಗಿಟ್ಟು, ಎಲ್ಲರನ್ನೂ ಒಟ್ಟಿಗೆ ಕರೆದೊಯ್ಯುವ ಕಾರ್ಯ ಮಾಡಬೇಕು ಇದರಿಂದ ಎಲ್ಲರಿಗೂ ಒಳ್ಳೆಯದು ಎಂದು ಅವರು ಕಿವಿ ಮಾತು ಹೇಳಿದ್ದಾರೆ.

ರಾಜರಾಜೇಶ್ವರಿ ನಗರದ ಚುನಾವಣೆಯಿಂದ ಜೆಡಿಎಸ್ ಅಭ್ಯರ್ಥಿಯನ್ನು ಹಿಂಪಡೆದುಕೊಳ್ಳುವಂತೆ ಡಿಕೆಎಸ್ ಸಹೋದರರು ಮನವಿ ಮಾಡಿದ್ದರು ಆದರೆ ಜೆಡಿಎಸ್ ಪಕ್ಷವು ಇದಕ್ಕೆ ಒಪ್ಪಲಿಲ್ಲ ಎನ್ನಲಾಗಿದೆ ಇದರಿಂದಾಗಿ ಡಿಕೆ ಸುರೇಶ್ ಮತ್ತು ಡಿಕೆ ಶಿವಕುಮಾರ್ ಅವರು ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದೆ.

ನಮ್ಮ ತ್ಯಾಗಕ್ಕೆ ಜೆಡಿಎಸ್ ಓಗೊಡಲಿ: ಡಿಕೆಶಿ ಮನವಿನಮ್ಮ ತ್ಯಾಗಕ್ಕೆ ಜೆಡಿಎಸ್ ಓಗೊಡಲಿ: ಡಿಕೆಶಿ ಮನವಿ

ಇಂದು ಬೆಳಿಗ್ಗೆ ಡಿ.ಕೆ.ಶಿವಕುಮಾರ್ ಸಹ ಜೆಡಿಎಸ್‌ಗಾಗಿ ಕಾಂಗ್ರೆಸ್ ದೊಡ್ಡ ತ್ಯಾಗ ಮಾಡಿದೆ, ಅದು ರಾರಾನಗರದಲ್ಲಿ ಜೆಡಿಎಸ್ ಅಭ್ಯರ್ಥಿಯನ್ನು ಹಿಂತೆಗೆದುಕೊಳ್ಳಬೇಕು ಎಂದು ಹೇಳಿದ್ದರು.

ಆದರೆ ದೇವೇಗೌಡರು ರಾರಾನಗರದಲ್ಲಿ ಜೆಡಿಎಸ್ ಅಭ್ಯರ್ಥಿ ರಾಮಚಂದ್ರಪ್ಪ ಅವರನ್ನು ಹಿಂತೆಗೆದುಕೊಳ್ಳಲು ಒಪ್ಪಿಲ್ಲ ಬದಲಿಗೆ 'ಮೈತ್ರಿ ವಿಧಾನಸೌಧದ ಒಳಗಷ್ಟೆ, ಹೊರಗಲ್ಲ' ಎಂದು ಟಾಂಗ್ ನೀಡಿದ್ದಾರೆ.

English summary
Congress MP DK Suresh said JDS party is doubting on Congress. He said Congress generously give support to JDS but they still doubting on us.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X