ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಜೆಡಿಎಸ್‌-ಕಾಂಗ್ರೆಸ್‌ನದ್ದು ಭ್ರಷ್ಟಾಚಾರಕ್ಕಾಗಿ ಮೈತ್ರಿ: ಪ್ರಕಾಶ್ ಜಾವಡೇಕರ್‌

By Manjunatha
|
Google Oneindia Kannada News

ಬೆಂಗಳೂರು, ಮೇ 19: ಯಡಿಯೂರಪ್ಪ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜಿನಾಮೆ ನೀಡಿದ ಬಳಿಕ ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಕೇಂದ್ರ ಮಂತ್ರಿ ಪ್ರಕಾಶ್ ಜಾವಡೇಕರ್‌ ಅವರು ಜೆಡಿಎಸ್-ಕಾಂಗ್ರೆಸ್‌ ಮೈತ್ರಿಯ ಮೇಲೆ ಹರಿಹಾಯ್ದರು.

ಈ ಮೈತ್ರಿ ಆಗಿರುವುದು ಭ್ರಷ್ಟಾಚಾರಕ್ಕಾಗಿ ಎಂದ ಪ್ರಕಾಶ ಜಾವಡೇಕರ್, ಕಾಂಗ್ರೆಸ್‌ ಮಂತ್ರಿಗಳ ಹಗರಣದ ತನಿಖೆ ಮಾಡಬಾರದೆಂಬ 'ಡೀಲ್‌' ಕುದಿರಿಸಿಕೊಂಡು ಕಾಂಗ್ರೆಸ್ ಪಕ್ಷ ಜೆಡಿಎಸ್‌ಗೆ ಬೆಂಬಲ ನೀಡಿದೆ, ಇದು ವೈಚಾರಿಕ ಮೈತ್ರಿ ಅಲ್ಲ ಎಂದು ಅವರು ಆರೋಪಿಸಿದರು.

ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?ಸಿಕ್ಕ ಅವಕಾಶ ಬಳಸಿಕೊಳ್ಳಲು ವಿಫಲರಾದ ಯಡಿಯೂರಪ್ಪ ಎಡವಿದ್ದು ಎಲ್ಲಿ?

ರೆಸಾರ್ಟ್‌ ರಾಜಕಾರಣದ ಬಗ್ಗೆಯೂ ಹರಿಹಾಯ್ದ ಜಾವಡೇಕರ್‌, 'ಕಾಂಗ್ರೆಸ್-ಜೆಡಿಎಸ್ ಶಾಸಕರನ್ನು ಹೊಟೆಲ್‌ ರೂಮುಗಳಲ್ಲಿ ಬಂಧಿಸಿ ಇಡಲಾಗಿತ್ತು, ಅವರ ಮೊಬೈಲ್‌ಗಳನ್ನು ಕಿತ್ತುಕೊಂಡು ಮಾನಸಿಕ ಹಿಂಸೆ ನೀಡಲಾಗಿತ್ತು' ಎಂದು ದೂರಿದರು.

JDS-Congress alliance is a corruption deal: Prakash Javadekar

ಜನಾದೇಶ ಬಿಜೆಪಿ ಪರ ಇದೆ, ಆದರೆ ಜೆಡಿಎಸ್‌-ಕಾಂಗ್ರೆಸ್‌ನ ಕುತಂತ್ರದಿಂದಾಗಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಪ್ರಜಾತಂತ್ರ ವ್ಯವಸ್ಥೆಗೆ ವಿರುದ್ಧವಾಗಿ ಎರಡೂ ಪಕ್ಷಗಳು ನಡೆದುಕೊಂಡಿವೆ ಎಂದು ಅವರು ಆರೋಪಿಸಿದರು.

ಅಮಿತ್ ಶಾ ಮುಂದೆ 2ನೇ ಬಾರಿ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್!ಅಮಿತ್ ಶಾ ಮುಂದೆ 2ನೇ ಬಾರಿ ಗೆದ್ದು ಬೀಗಿದ ಡಿ.ಕೆ.ಶಿವಕುಮಾರ್!

ಮೋದಿ ಭ್ರಷ್ಟ ಎಂದ ರಾಹುಲ್‌ಗೆ ತಿರುಗೇಟು ನೀಡಿದ ಪ್ರಕಾಶ್ ಜಾವಡೇಕರ್‌, ಕಾಂಗ್ರೆಸ್‌ ಪಕ್ಷ ಚುನಾವಣೆ ಗೆಲ್ಲಲು ಅತಿ ಭ್ರಷ್ಟ ತಂತ್ರಗಳನ್ನು ಅನುಸರಿಸಿತು, ನಕಲಿ ಚುನಾವಣಾ ಗುರುತಿನ ಚೀಟಿಗಳನ್ನು ಸೃಷ್ಠಿಸಿತು, ಸುಳ್ಳು ಮಾಹಿತಿಗಳನ್ನು ಜನರಿಗೆ ನೀಡಿತು ಎಂದು ಅವರು ಹರಿಹಾಯ್ದರು.

English summary
BJP central minister Prakash Javadekar says JDS-Congress alliance is a corrupt alliance. He also said congress-jds MLAs were in house arrest, they were tortured by congress senior leaders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X